ತಂದೆ-ಮಗಳು ಸಾವು: ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

KannadaprabhaNewsNetwork |  
Published : Oct 16, 2026, 02:45 AM IST
15ಹಹಜವ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಯಮಕನಮರಡಿನಿಪ್ಪಾಣಿ ಸಮೀಪದ ಸ್ಥವನಿಧಿ ಬಳಿ ಬುಧವಾರ ಸಂಜೆ ಬೈಕ್‌ಗೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ನಿಪ್ಪಾಣಿ ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಪುಂಡಲೀಕ ಹಟ್ಟಿ (50) ಹಾಗೂ ಅವರ ಪುತ್ರಿ ಕುಮಾರಿ ನಿಖಿತಾ ಪುಂಡಲೀಕ ಹಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ನಿಪ್ಪಾಣಿ ಸಮೀಪದ ಸ್ಥವನಿಧಿ ಬಳಿ ಬುಧವಾರ ಸಂಜೆ ಬೈಕ್‌ಗೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ನಿಪ್ಪಾಣಿ ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಪುಂಡಲೀಕ ಹಟ್ಟಿ (50) ಹಾಗೂ ಅವರ ಪುತ್ರಿ ಕುಮಾರಿ ನಿಖಿತಾ ಪುಂಡಲೀಕ ಹಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಮೃತರ ಪಾರ್ಥಿವ ಶರೀರಗಳನ್ನು ಗುರುವಾರ ಅವರ ಸ್ವಗ್ರಾಮವಾದ ಉಳ್ಳಾಗಡ್ಡಿ-ಖಾನಾಪುರಕ್ಕೆ ತರಲಾಗುತ್ತಿದ್ದಂತೆ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿತು. ತಂದೆ-ಮಗಳ ಅಕಾಲಿಕ ನಿಧನದ ಸುದ್ದಿ ಇಡೀ ಗ್ರಾಮವನ್ನೇ ದುಃಖದ ಮಡುವಿನಲ್ಲಿ ಮುಳುಗಿಸಿತು.

ಬಳಿಕ ಪುಂಡಲೀಕ ಹಟ್ಟಿ ಹಾಗೂ ಅವರ ಪುತ್ರಿ ನಿಖಿತಾ ಅವರ ಅಂತ್ಯಕ್ರಿಯೆಯನ್ನು ಹಿಂದೂ ಲಿಂಗಾಯತ ಸಂಪ್ರದಾಯದಂತೆ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೀರಶೈವ–ಲಿಂಗಾಯತ ವಿಭಜನೆ ರಾಜಕೀಯ ಷಡ್ಯಂತ್ರ
ಉ.ಕ ಜನರನ್ನು ಕಡೆಗಣಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ