ಕಬ್ಬು ಬೆಳೆಗಾರರ ಹೋರಾಟಕ್ಕೆ ಹಲವು ಗ್ರಾಮಸ್ಥರ ಬೆಂಬಲ

KannadaprabhaNewsNetwork |  
Published : Oct 16, 2026, 02:45 AM IST
15ಬದಚಸಬಚಸ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮೋಳೆಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ರೈತರ ಹೋರಾಟಕ್ಕೆ ವಿವಿಧ ಗ್ರಾಮಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಕಳೆದ 36 ಗಂಟೆಗಳಿಗೂ ಹೆಚ್ಚು ಕಾಲ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದ ರೈತರು, ಇದೀಗ ಹತ್ತರಗಿ ಟೋಲ್‌ನಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿಯ ನಿವಾಸದತ್ತ ಪಾದಯಾತ್ರೆ ಆರಂಭಿಸಿದ್ದಾರೆ. ಪಾದಯಾತ್ರೆ ಕೈಗೊಂಡಿರುವ ರೈತರಿಗೆ ಕಾಗವಾಡ ತಾಲೂಕಿನ ಮೋಳೆ ಹಾಗೂ ಐನಾಪುರ ಗ್ರಾಮಸ್ಥರು ನೆರವಿನ ಹಸ್ತ ಚಾಚಿದ್ದಾರೆ.

ಕನ್ನಡಪ್ರಭ ವಾರ್ತೆ ಮೋಳೆ

ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ರೈತರ ಹೋರಾಟಕ್ಕೆ ವಿವಿಧ ಗ್ರಾಮಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಕಳೆದ 36 ಗಂಟೆಗಳಿಗೂ ಹೆಚ್ಚು ಕಾಲ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದ ರೈತರು, ಇದೀಗ ಹತ್ತರಗಿ ಟೋಲ್‌ನಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹುಬ್ಬಳ್ಳಿಯ ನಿವಾಸದತ್ತ ಪಾದಯಾತ್ರೆ ಆರಂಭಿಸಿದ್ದಾರೆ. ಪಾದಯಾತ್ರೆ ಕೈಗೊಂಡಿರುವ ರೈತರಿಗೆ ಕಾಗವಾಡ ತಾಲೂಕಿನ ಮೋಳೆ ಹಾಗೂ ಐನಾಪುರ ಗ್ರಾಮಸ್ಥರು ನೆರವಿನ ಹಸ್ತ ಚಾಚಿದ್ದಾರೆ.

ಪಾದಯಾತ್ರೆಯಲ್ಲಿ ಸಾಗುತ್ತಿರುವ ರೈತರಿಗೆ ಆಹಾರದ ಕೊರತೆಯಾಗದಂತೆ ಗ್ರಾಮದ ರೈತರು ಹಾಗೂ ಮುಖಂಡರು ಸ್ವಂತ ಖರ್ಚಿನಲ್ಲಿ ರೊಟ್ಟಿ, ಅಕ್ಕಿ, ಖಾದ್ಯ ತೈಲ ಸೇರಿದಂತೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಸಂಗ್ರಹಿಸಿ ವಿತರಿಸಿದ್ದಾರೆ. ಅಲ್ಲದೆ, ಹೋರಾಟಕ್ಕೆ ನೆರವಾಗಲು ಸಹಾಯಧನವನ್ನೂ ನೀಡಿದ್ದಾರೆ. ಅನ್ನದಾತರ ಹೋರಾಟಕ್ಕೆ ಗ್ರಾಮಸ್ಥರು ಕೈಜೋಡಿಸಿರುವುದು ರೈತ ಸಮುದಾಯದಲ್ಲಿ ಒಗ್ಗಟ್ಟಿನ ಸಂದೇಶ ಮೂಡಿಸಿದೆ.ಇಂದು ಸಾವಿರಕ್ಕೂ ಹೆಚ್ಚು ರೈತರು ಪಾದಯಾತ್ರೆಯಲ್ಲಿ ಭಾಗಿ: ಈ ಕುರಿತು ಮಾತನಾಡಿದ ಐನಾಪುರ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸಂಜಯ ಬಿರಡಿ, ಮೋಳೆ, ಐನಾಪುರ ಹಾಗೂ ಕೃಷ್ಣಾ-ಕಿತ್ತೂರು ಭಾಗದ ಗ್ರಾಮಗಳಿಂದ ಶುಕ್ರವಾರ ಸುಮಾರು ಸಾವಿರ ರೈತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದರು.ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸಬೇಕು, ಸಕ್ಕರೆಗೆ ಪ್ರತಿ ಕೆಜಿಗೆ ₹60 ಬೆಂಬಲ ಬೆಲೆ ನೀಡಬೇಕು, ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಹಾಗೂ ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್ ಅನ್ನು ಸಂಪೂರ್ಣವಾಗಿ ಖರೀದಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟಕ್ಕೆ ಈ ಭಾಗದಿಂದ ಸಾವಿರಕ್ಕೂ ಹೆಚ್ಚು ರೈತರು ಬೆಂಬಲ ನೀಡಲಿದ್ದಾರೆ ಎಂದು ಅವರು ಹೇಳಿದರು.ರೈತರ ಪರವಾಗಿ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ: ರೈತ ಮುಖಂಡ ಗಜಾನನ ಯರಂಡೋಲಿ ಮಾತನಾಡಿ, ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ಅವರ ನೇತೃತ್ವದಲ್ಲಿ ರೈತರೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಪ್ರತಿ ಟನ್ ಕಬ್ಬಿಗೆ ₹5,500 ದರ ಪಡೆಯಲು ಸಾಧ್ಯವಾಗಲಿದೆ. ಹೀಗಾಗಿ ರೈತರು ಒಗ್ಗಟ್ಟಿನಿಂದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ವೇಳೆ ರೈತ ಮುಖಂಡರಾದ ಪ್ರವೀಣ ಗಾಣಿಗೇರ, ಸುರೇಶ ಚೌಗಲಾ, ಸಂಜಯ ಬಿರಡಿ, ಗಜಾನನ ಯರಂಡೋಲಿ, ದಾದಾ ಜಂತೆನ್ನವರ, ಸಿದ್ದು ಹವಳೆ, ಶಿವಾನಂದ ಹೊಸಮನಿ, ಗೋಪಾಲ ಮಾನಗಾಂವೆ, ವಿರೂಪಾಕ್ಷ ಆರಿ, ಸತೀಶ ಯರಂಡೋಲಿ, ರಾಜು ಕನಾಳೆ, ಅಶೋಕ ಇಚಲಕರಂಜಿ, ಬಾಹುಬಲಿ ಕುಸನಾಳೆ, ಸತೀಶ ಗಾಣಿಗೇರ, ಗುಂಡು ಖವಟಕೊಪ್ಪ, ಪ್ರವೀಣ ಕುಲಕರ್ಣಿ, ಸುಭಾಷ ಕಾಳೆ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.

ಶಾಸಕರ ವೇತನ ಹಾಗೂ ವಿವಿಧ ಭತ್ಯೆಗಳಿಗೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ರೈತರ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಸಮರ್ಪಕವಾಗಿ ಧ್ವನಿ ಎತ್ತುತ್ತಿಲ್ಲ. ಶಾಸಕರ ವೇತನದ ಜತೆಗೆ ವೈದ್ಯಕೀಯ ವೆಚ್ಚ, ವಾಹನ, ಮೊಬೈಲ್ ಬಿಲ್ ಹಾಗೂ ವಿಮಾನ, ರೈಲು ಮತ್ತು ಬಸ್ ಪ್ರಯಾಣದ ಭತ್ಯೆಗಳನ್ನು ನೀಡಲಾಗುತ್ತದೆ. ಆದರೆ, ರೈತರ ನ್ಯಾಯಯುತ ಬೇಡಿಕೆಗಳ ಪರವಾಗಿ ಶಾಸಕರು, ಸಂಸದರು ಹಾಗೂ ಸಚಿವರು ಮಾತನಾಡದಿರುವುದು ದುರದೃಷ್ಟಕರ.

-ಗಜಾನನ ಯರಂಡೋಲಿ, ರೈತ ಮುಖಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೀರಶೈವ–ಲಿಂಗಾಯತ ವಿಭಜನೆ ರಾಜಕೀಯ ಷಡ್ಯಂತ್ರ
ಉ.ಕ ಜನರನ್ನು ಕಡೆಗಣಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ