ಚಳ್ಳಕೆರೆ: ಇಲ್ಲಿಯ ಕಾಟಪ್ಪನಹಟ್ಟಿಯ ಗೊಲ್ಲರಹಟ್ಟಿಯಲ್ಲಿ ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿನಾಯಿ ದಾಳಿ ನಡೆಸಿದ್ದು, ಮಗುವನ್ನು ರಕ್ಷಿಸಲು ಬಂದ ತಂದೆ ಮೇಲೂ ದಾಳಿ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.೩ ವರ್ಷದ ಸಿಂಪು ಹೆಸರಿನ ಮಗು, ತಂದೆ ಮಂಜುನಾಥ (33) ಗಾಯಗೊಂಡವರು. ಸಿಂಪು ಕೈಗೆ ಬೀದಿನಾಯಿ ಬಾಯಿಹಾಕಿ, ಕೈಯ ಮಾಂಸ ಕಿತ್ತಿದೆ. ಮಗು ಅಳುವುದನ್ನು ಕಂಡು ರಕ್ಷಣೆಗೆಂದು ತಂದೆ ಮಂಜುನಾಥ ಧಾವಿಸಿದ್ದಾರೆ. ನಾಯಿಯು ಅವರ ಮೇಲೂ ದಾಳಿ ನಡೆಸಿದೆ. ಎರಡ್ಮೂರು ಕಡೆ ಕಚ್ಚಿ ಗಾಯಗೊಳಿಸಿದೆ. ಹಳೇ ಟೌನ್‌ನ ತೇರು ಬೀದಿಯಲ್ಲಿ ಬೀದಿನಾಯಿಯೊಂದು ಸಿಕ್ಕಿ ಸಿಕ್ಕ ಜನರನ್ನು ಕಚ್ಚುತ್ತಿದ್ದು, ಅದನ್ನು ಕಂಡ ಸ್ಥಳೀಯರು ನಾಯಿಯನ್ನು ದೊಣ್ಣೆಯಿಂದ ಹೊಡೆದು ಓಡಿಸಿದ್ದಾರೆ.