ರಟ್ಟೀಹಳ್ಳಿ: ಕೋಟ್ಯಂತರ ಮೌಲ್ಯದ ಆಸ್ತಿ ಹಾಗೂ ಇನ್ಸೂರೆನ್ಸ ಹಣಕ್ಕಾಗಿ ತನ್ನ ಅಳಿಯನನ್ನೇ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಿದ ಮಾವ ಸಿದ್ದನಗೌಡ ಮತ್ತು ಅವನ ಗ್ಯಾಂಗ್ ಪೊಲೀಸರ ಅತಿಥಿಯಾದ ಘಟನೆ ಜರುಗಿದೆ.
ಮೃತ ಬಸವರಾಜ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಾಗೂ ಆತನ ಇಬ್ಬರು ಅಣ್ಣಂದಿರು ತೀರಿ ಹೋಗಿದ್ದು ಮೂವರಲ್ಲೂ ಯಾರೊಬ್ಬರು ಮದುವೆಯಾಗದ ಕಾರಣ ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿತರು ಕಳೆದ ಮೂರನಾಲ್ಕು ತಿಂಗಳ ಹಿಂದೆನೇ ಸಂಪೂರ್ಣ ಆಸ್ತಿ ನಮ್ಮ ಪಾಲಿಗೆ ಸಿಗಬೇಕೆಂದು ಯೂಟ್ಯೂಬರ ರಾಘವೇಂದ್ರ ಮಾಳಗೊಂಡರ ಹಾಗೂ ಸಿದ್ದನಗೌಡ ಕರೆಗೌಡ್ರ ಇಬ್ಬರ ಜಂಟಿ ವಿಲ್ ಬರೆಸಿಕೊಂಡಿದ್ದರು. ನಂತರ ಮೃತ ಬಸವರಾಜ ಹೆಸರಿನಲ್ಲಿ ಯೂಟ್ಯೂಬರ ರಾಘವೇಂದ್ರ ಸ್ಥಳೀಯ ಅಂಚೆ ಕಚೇರಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ 500 ರು. ಪಾವತಿಸಿ ಅಪಘಾತ ವಿಮೆ ಮಾಡಿಸಿ ನಾಮಿನಿಯಾಗಿ ತನ್ನ ಹೆಸರನ್ನೇ ಬರೆಸಿ 10 ಲಕ್ಷ ಮೌಲ್ಯದ ಇನ್ಸೂರೆನ್ಸ ಹಣ ಪಡೆಯುವ ದುರುದ್ದೇಶದಿಂದಾಗಿಯೇ ಕೊಲೆಯ ಸಂಚು ಬೆಳಕಿಗೆ ಬಂದಿದೆ. ಕೇವಲ ಹಣ ಹಾಗೂ ಆಸ್ತಿಗಾಗಿ ಬಸವರಾಜನನ್ನು ತೀವ್ರ ಸ್ವರೂಪದಲ್ಲಿ ಹಿಂಸಿಸಿ ಕೊಲೆ ಮಾಡಿದ್ದು ಅತ್ಯಂತ ನೋವಿನ ಸಂಗತಿ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕೊಲೆ ಪ್ರಕರಣ ಭೇದಿಸಿದ ಪ್ರಭಾರ ಸಿಪಿಐ ಸಿದ್ದೇಶ ಎಂ.ಡಿ., ರಟ್ಟೀಹಳ್ಳಿ ಪಿಎಸ್‌ಐ ರಮೇಶ ಪಿ.ಎಸ್., ಕೃಷ್ಣಪ್ಪ ತೋಪಿನ್, ಕುಮಾರ ಪಟ್ಟಣ ಪಿಎಸ್‌ಐ ಪ್ರವೀಣಕುಮಾರ ವಾಲೀಕರ್, ರಿಯಾಜ್ ದೊಡ್ಡಮನಿ, ಮಾಲತೇಶ ನ್ಯಾಮತಿ, ಬಿ.ಆರ್. ಸಣ್ಣಪ್ಪನವರ, ರವಿ ಲಮಾಣಿ, ಟಿ.ಎಂ. ಉಳತೇನವರ, ಎಸ್. ಆರ್. ಚವ್ಹಾಣ, ಪಿ.ವಿ. ವಡೇರಹಳ್ಳಿ, ಬಸವರಾಜ ಕೊರವರ, ಮಲ್ಲೇಶ ಕಟ್ಟಮನಿ, ತನಿಖಾ ತಂಡದ ಮಂಜುನಾಥ ಕಾಟೇನಹಳ್ಳಿ, ಶಿವಾಜಿ ಲಮಾಣಿ, ಸತೀಶ ಮಾರಕಟ್ಟಿ, ಮಾರುತಿ ಹಾಲವಾಣಿ, ಮಲ್ಲೇಶ ನಾಗವಂದ, ಗಣೇಶ ಅವರ ಕಾರ್ಯಕ್ಕೆ ಮೆಚ್ಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.ಆರೋಪಿಗಳು ಎಷ್ಟೇ ಬುದ್ಧಿವಂತಿಕೆಯಿಂದ ಅಪರಾಧ ಮಾಡಿದರು ಪ್ರಸ್ತುತ ಆಧುನಿಕ ವಿದ್ಯಮಾನಗಳಿಂದ ಹಾಗೂ ಸಮರ್ಥ ಪೊಲೀಸ್ ಇಲಾಖೆ ಇರುವರೆಗೂ ಯಾವೊಬ್ಬ ಆರೋಪಿಗಳ ತಮ್ಮ ಹೀನ ಕೃತ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ. ಕಾರಣ ಪ್ರತಿಯೊಬ್ಬ ನಾಗರಿಕರು ಅಪರಾಧ ಕೃತ್ಯಗಳಿಂದ ದೂರ ಉಳಿದು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಎಂದು ಎಸ್ಪಿ ಯಶೋಧಾ ವಂಟಗೋಡಿ ಹೇಳಿದರು.ನನ್ನ ತಮ್ಮ ಬಸವರಾಜ ಅಮಾಯಕನಾಗಿದ್ದು, ಯಾರ ತಂಟೆಗೂ ಹೋಗದೇ ಜೀವನ ನಡೆಸುತ್ತಿದ್ದವನನ್ನು ಆಸ್ತಿಗಾಗಿ ರಾಘವೇಂದ್ರ ಮಾಳಗೊಂಡರ ಸೇರಿ ಮೂವರು ಆರೋಪಿಗಳನ್ನು ಪೊಲೀಸ್ ಇಲಾಖೆ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಂಡು ಅಪರಾಧಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ನಮಗೆ ನ್ಯಾಯ ಸಿಗುವ ಭರವಸೆ ಮೂಡಿದ್ದು ಮುಂದಿನ ದಿನಗಳಲ್ಲಿ ಆರೋಪಿಗಳಿಗೆ ಕಠಿಣ ಕಾನೂನು ಜಾರಿಯಾಗಲಿ ಎಂದು ದೂರುದಾರ
ಕುಮಾರ ಪುಟ್ಟಣ್ಣನವರ ಹೇಳಿದರು.