ರಾಜಕೀಯ ಪ್ರವೇಶಕ್ಕೆ ಮಾವ ಶಾಮನೂರು ಸ್ಫೂರ್ತಿ

KannadaprabhaNewsNetwork |  
Published : Apr 13, 2024, 01:04 AM ISTUpdated : Apr 13, 2024, 01:05 AM IST
12ಕೆಡಿವಿಜಿ12-ದಾವಣಗೆರೆ ತಾ. ಕುಕ್ಕವಾಡದಲ್ಲಿ ದಕ್ಷಿಣ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಗಣೇಶ, ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಇತರರು. ...............12ಕೆಡಿವಿಜಿ13-ದಾವಣಗೆರೆ ತಾ. ಕುಕ್ಕವಾಡದಲ್ಲಿ ದಕ್ಷಿಣ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಗಣೇಶ, ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಸಮ್ಮುಖದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. | Kannada Prabha

ಸಾರಾಂಶ

ಇಳಿ ವಯಸ್ಸಿನಲ್ಲೂ ಜನಪರ ಸೇವೆ, ಅಭಿವೃದ್ಧಿ ಪರ ಕಾಳಜಿ, ಜನಾನುರಾಗಿ ವ್ಯಕ್ತಿತ್ವದ ಶಾಸಕರಾದ ತಮ್ಮ ಮಾವ ಡಾ.ಶಾಮನೂರು ಶಿವಶಂಕರಪ್ಪ ಅವರೇ ತಾವು ರಾಜಕೀಯಕ್ಕೆ ಬರಲು ಸ್ಫೂರ್ತಿ ಆಗಿದ್ದಾರೆ. ಅವರಂತೆಯೇ ಜನರಿಗೆ ಸ್ಪಂದಿಸಿ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬದ್ಧಳಾಗಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಮಾದರಿ ಕ್ಷೇತ್ರ ರೂಪಿಸಲು ಆಶೀರ್ವದಿಸಬೇಕು: ಡಾ.ಪ್ರಭಾ ಮನವಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಇಳಿ ವಯಸ್ಸಿನಲ್ಲೂ ಜನಪರ ಸೇವೆ, ಅಭಿವೃದ್ಧಿ ಪರ ಕಾಳಜಿ, ಜನಾನುರಾಗಿ ವ್ಯಕ್ತಿತ್ವದ ಶಾಸಕರಾದ ತಮ್ಮ ಮಾವ ಡಾ.ಶಾಮನೂರು ಶಿವಶಂಕರಪ್ಪ ಅವರೇ ತಾವು ರಾಜಕೀಯಕ್ಕೆ ಬರಲು ಸ್ಫೂರ್ತಿ ಆಗಿದ್ದಾರೆ. ಅವರಂತೆಯೇ ಜನರಿಗೆ ಸ್ಪಂದಿಸಿ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬದ್ಧಳಾಗಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ಕುಕ್ಕವಾಡ ಗ್ರಾಮದ ಶಾಮನೂರು ಶುಗರ್ಸ್ ಕಾರ್ಖಾನೆ ಆವರಣದಲ್ಲಿ ಶುಕ್ರವಾರ ದಾವಣಗೆರೆ ದಕ್ಷಿಣ ಕ್ಷೇತ್ರದ ಗ್ರಾಮಾಂತರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮಾವ ಡಾ.ಶಾಮನೂರು ಶಿವ‍ಶಂಕರಪ್ಪ, ಪತಿ ಎಸ್‌.ಎಸ್‌. ಮಲ್ಲಿಕಾರ್ಜುನ, ಭಾವಂದಿರಾದ ಎಸ್.ಎಸ್.ಗಣೇಶ, ಎಸ್.ಎಸ್. ಬಕ್ಕೇಶ್‌ ಸೇರಿದಂತೆ ಕುಟುಂಬದ ಎಲ್ಲರ ಸಹಕಾರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಿಮ್ಮಗಳ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿದೆ. ಮುಂದೆಯೂ ಇದೇ ರೀತಿಯ ಸಹಕಾರ, ಪ್ರೋತ್ಸಾಹ ನೀಡುತ್ತೀರೆಂಬ ವಿಶ್ವಾಸವಿದೆ ಎಂದರು.

ಶಾಸಕ ಡಾ.ಶಾಮನೂರು ‍ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐದೂ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಗೃಹಲಕ್ಷ್ಮೀ ಸ್ಕೀಂನಡಿ 4,27,236 ಫಲಾನುಭವಿಗಳು, ಶಕ್ತಿ ಕಾರ್ಯಕ್ರಮದಡಿ 30 ಲಕ್ಷಕ್ಕೂ ಅಧಿಕ ಜನ, 4 ಲಕ್ಷಕ್ಕೂ ಅಧಿಕ ಮನೆಗೆ ಗೃಹಜ್ಯೋತಿ ಸೌಲಭ್ಯ, 13 ಲಕ್ಷ ಫಲಾನುಭವಿಗಳ ಖಾತೆಗೆ ಅನ್ನಭಾಗ್ಯ ಹಣ ಪಾವತಿಸಲಾಗಿದೆ. ಜಿಲ್ಲೆಯ 4,753 ನಿರೋದ್ಯೋಗಿ ಯುವಕರಿಗೆ ನಿರೋದ್ಯೋಗ ಭತ್ಯೆ ನೀಡಲಾಗಿದೆ ಎಂದ ಅವರು, ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜನತೆಗೆ ಪಂಚ ಗ್ಯಾರಂಟಿಗಳನ್ನು ನೀಡಲಾಗುವುದು ಎಂದರು.

ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ, ಜಿಪಂ ಮಾಜಿ ಅಧ್ಯಕ್ಷ ತುರ್ಚಘಟ್ಟದ ಎಸ್. ಬಸವರಾಜಪ್ಪ, ಮಾಜಿ ಸದಸ್ಯ ಹದಡಿ ಜಿ.ಸಿ.ನಿಂಗಪ್ಪ, ಮಾಜಿ ಉಪಾಧ್ಯಕ್ಷೆ ಪುಷ್ಪಾ ಸುರೇಶ್, ಹದಡಿ ಹಾಲಪ್ಪ, ಶಿರಮಗೊಂಡನಹಳ್ಳಿ ರುದ್ರೇಶ್, ಆರನೇಕಲ್ಲು ಮಂಜಣ್ಣ, ಇತರರು ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ದಿಳ್ಳೆಪ್ಪ, ಸುಧಾ ಮಂಜುನಾಥ, ಕುಕ್ಕವಾಡ ಮಂಜುನಾಥ, ಮಹೇಶ್ವರಪ್ಪ, ಲಿಂಗೇಶ್, ಶಂಕರ್, ಸತೀಶ್ ತುರ್ಚಘಟ್ಟ, ಅನ್ವರ್, ರಿಯಾಜ್, ಇರ್ಫಾನ್, ಪೂರ್ಣೀಮಾ, ಉದ್ಯಮಿ ಅಭಿಜಿತ್ ಗಣೇಶ್ ಶಾಮನೂರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಹಾಗೂ ವಿವಿಧ ಗ್ರಾಪಂ ಅಧ್ಯಕ್ಷರು, ಸದಸ್ಯರು, ಮುಖಂಡರು, ಕಾರ್ಯಕರ್ತರು ಇದ್ದರು.

ಬೆಳವನೂರು, ಕೈದಾಳ್, ಹೊಸ ಕೊಳೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

- - - -12ಕೆಡಿವಿಜಿ12:

ದಾವಣಗೆರೆ ತಾಲೂಕು ಕುಕ್ಕವಾಡದಲ್ಲಿ ದಕ್ಷಿಣ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಗಣೇಶ, ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಇತರರು ಪಾಲ್ಗೊಂಡರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ