ಕುಡಿದ ಮತ್ತಿನಲ್ಲಿ ಪುತ್ರನಿಂದಲೇ ತಂದೆಯ ಕೊಲೆ

KannadaprabhaNewsNetwork |  
Published : Mar 05, 2024, 01:35 AM IST
ಕೊಲೆ | Kannada Prabha

ಸಾರಾಂಶ

ಕುಡಿದ ಮತ್ತಿನಲ್ಲಿದ್ದ ಪುತ್ರ ಮೈಲಾರಿ (22) ತಂದೆಯನ್ನು ಮನೆಯ ಸಮೀಪದ ಸಿಡಿ ಮೇಲಿಂದ ದೂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಗನೇ ತಂದೆಯನ್ನು ಸಿಡಿ ಮೇಲಿಂದ ದೂಡಿ ಕೊಲೆ ಮಾಡಿರುವ ಘಟನೆ ತಾಲೂಕಿನ ಅಂಚಟಗೇರಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಸಿದ್ದಪ್ಪ ಭರಮಣ್ಣವರ (64) ಕೊಲೆಯಾದ ದುರ್ದೈವಿ.

ಕುಡಿದ ಮತ್ತಿನಲ್ಲಿದ್ದ ಪುತ್ರ ಮೈಲಾರಿ (22) ತಂದೆಯನ್ನು ಕೊಲೆ ಮಾಡಿದಾತ. ಮನೆಯ ಸಮೀಪದ ಸಿಡಿ ಮೇಲಿಂದ ದೂಡಿದ್ದಾನೆ ಎನ್ನಲಾಗಿದೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪಿಐ ಮುರಗೇಶ ಚನ್ನಣ್ಣವರ ಭೇಟಿ ನೀಡಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತರಿಂದ ₹20ಲಕ್ಷ ವಂಚನೆ

ಹುಬ್ಬಳ್ಳಿ: ಜಾಹೀರಾತು ಲಿಂಕ್‌ಗಳಿಗೆ ಲೈಕ್ಸ್ ಮತ್ತು ಸ್ಟಾರ್ ರೇಟಿಂಗ್ ನೀಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹20.05 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ನಿಜಾಮುದ್ದೀನ್ ಎಂಬುವರು ವಂಚನೆಗೆ ಒಳಗಾಗಿದ್ದಾರೆ. ಅಪರಿಚಿತರು ಮೊಬೈಲ್ ಫೋನ್‌ಗೆ ಸಂದೇಶದ ಲಿಂಕ್ ಕಳುಹಿಸಿ ನಂಬಿಸಿದ್ದಾರೆ. ನಂತರ ಆತನ ಖಾತೆಯಿಂದ ಹಂತ ಹಂತವಾಗಿ ₹20.05 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಹುಬ್ಬಳ್ಳಿ:

ಇಲ್ಲಿನ ಮಂಟೂರ ರಸ್ತೆಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸುಮಾರು 25 ರಿಂದ 30 ವರ್ಷದ ಯುವಕನ ಶವ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ಸ್ಥಳೀಯರು ಶವ ನೋಡಿ ಬೆಂಡಿಗೇರಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಯುವಕನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ