ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಬಟ್ಟೆ ವ್ಯಾಪಾರಿ ದುರ್ಗ ಪ್ಯಾಷನ್ ಸ್ಟೋರ್ ದಯಾನಂದ್(46) ತಮ್ಮ ಮಗಳು ನಿಶ್ಮಿತಾ(16) ಇವರನ್ನು ಚಿಕ್ಕಮಗಳೂರಿನಿಂದ ಬೇಲೂರಿಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಕೊರಟಿಗೆರೆ ಬಳಿ ತಾವು ಬರುತ್ತಿದ್ದ ಕಾರು ಪಲ್ಟಿ ಹೊಡೆದು ಅಪಘಾತವಾದ ಹಿನ್ನೆಲೆಯಲ್ಲಿ ದಯಾನಂದ್ ಸ್ಥಳದಲ್ಲೇ ಸಾವನ್ನಪ್ಪಿದರು. ಇನ್ನು ಮಗಳು ನಿಶ್ಮಿತಾ ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದು ಸ್ಥಳೀಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಬೇಲೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಬಿಕ್ಕೋಡು ರಸ್ತೆಯಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡಿದ್ದ ದಯಾನಂದ್ ತಾಲೂಕು ಮಾನವ ಹಕ್ಕುಗಳ ತಾಲೂಕು ಅಧ್ಯಕ್ಷರಾಗಿ ಉತ್ತಮ ಸೇವೆ ಮಾಡುತ್ತಾ ಹೆಸರು ವಾಸಿಯಾಗಿದ್ದು, ಉತ್ತಮ ವರ್ತಕರಾಗಿ ಹೆಸರು ಗಳಿಸಿದ್ದರು. ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು.