ತಂದೆ ಸಾವಿಗೆ ನೊಂದು ವಿಕಲಚೇತನ ಮಗ ಆತ್ಮಹತ್ಯೆ

KannadaprabhaNewsNetwork |  
Published : May 13, 2024, 01:01 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ತಂದೆ ನಿಧನದ ನೋವಿನಿಂದ ನೊಂದಿದ್ದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾಳಿ ತಾ. ಚೀಲಾಪುರ ಗ್ರಾಮದಲ್ಲಿ ವರದಿಯಾಗಿದೆ.

- ಹೊನ್ನಾಳಿ ತಾಲೂಕು ಚೀಲಾಪುರದಲ್ಲಿ ವಿಷ ಸೇವಿಸಿದ ಶಿವಕುಮಾರ

- ತಂದೆ ಚಂದ್ರನಾಯ್ಕ ಸಾವಿನಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಯುವಕ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ತಂದೆ ನಿಧನದ ನೋವಿನಿಂದ ನೊಂದಿದ್ದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾಳಿ ತಾ. ಚೀಲಾಪುರ ಗ್ರಾಮದಲ್ಲಿ ವರದಿಯಾಗಿದೆ.

ಚೀಲಾಪುರ ಗ್ರಾಮದ ಶಿವಕುಮಾರ(32 ವರ್ಷ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶಿವಕುಮಾರಗೆ ಎಡಗೈ ಇಲ್ಲದೇ ವಿಕಲಚೇತನನಾಗಿದ್ದು, ಈತನ ತಂದೆ ಚಂದ್ರನಾಯ್ಕ (65 ವರ್ಷ) ವಯೋಸಹಜವಾಗಿ ಸಾವನ್ನಪ್ಪಿದ್ದರು. ತಂದೆಯ ಸಾವನ್ನು ಅರಗಿಸಿಕೊಳ್ಳಲಾಗದೇ ಶಿವಕುಮಾರ ತೀವ್ರವಾಗಿ ನೊಂದಿದ್ದ. ತಂದೆಯೇ ತನಗೆ ಆಸರೆಯಾಗಿ, ಪೋಷಣೆ ಮಾಡುತ್ತಿದ್ದರು. ತಂದೆ ಅಗಲಿಕೆ ನಂತರ ತನಗೆ ಯಾರು ಗತಿ ಎಂಬುದಾಗಿ ಮಾನಸಿಕವಾಗಿ ಕುಗ್ಗಿಹೋಗಿದ್ದು, ಮನೆಯಲ್ಲಿ ಒಂಟಿಯಾಗಿದ್ದಾಗ ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು