ಕನ್ನಡಪ್ರಭ ವಾರ್ತೆ ಘಟಪ್ರಭ:
ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಮಲ್ಲಯ್ಯ ಪಿರಮಿಡ್ ಆಧ್ಯಾತ್ಮಿಕ ಧ್ಯಾನ ಕೇಂದ್ರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪಿರಮಿಡ್ ತುದಿ ಆಕಾಶವನ್ನು ಸೂಚಿಸಿದರೇ ಆ ಪಿರಮಿಡ್‌ನ ಸ್ಥಳ ಭೂಮಿ ಹಾಗೂ ಜಲ ಸೂಚಕವಾಗಿದೆ. ಪಿರಮಿಡ್ ತುತ್ತ ತುದಿಯ ತ್ರಿಕೋಣದ ಮಧ್ಯ ಬಿಂದು ಅಗ್ನಿ ತತ್ವದ ಕೇಂದ್ರವಾಗಿದ್ದು ಜಗತ್ತಿನ ಎಲ್ಲ ಶಕ್ತಿಗಳು ಈ ಮೂಲಕ ಧ್ಯಾನಾಸಕ್ತನಾದ ವ್ಯಕ್ತಿಯನ್ನು ಸಂಪರ್ಕಿಸಿ ಚೈತನ್ಯ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು.
ಭಾರತದ ಜನ ಮಠ ಮಂದಿರಗಳಲ್ಲಿ ಧ್ಯಾನ ಮಾಡುವ ಮೂಲಕ ಮನಸ್ಸಿಗೆ ನೆಮ್ಮದಿ ಕಂಡಕೊಳ್ಳುತ್ತಿದ್ದರು. ಆ ರೀತಿಯಾದ ಪಿರಮಿಡ್ ಧ್ಯಾನ ಕೇಂದ್ರಗಳು ಕೂಡಾ ನೆಮ್ಮದಿ ನೀಡುವ ತಾಣಗಳಾಗಿವೆ ಎಂದು ತಿಳಿಸಿದರು.ಕಲ್ಲೋಳಿ ಪಟ್ಟಣ ಎಲ್ಲ ಕ್ಷೇತ್ರಗಳಲ್ಲಿಯೂ ಹೊಸ ಹೊಸ ಆವಿಷ್ಕಾರಗಳಿಗೆ ಸಾಕ್ಷಿಯಾದ ಕೇಂದ್ರವಾಗಿದೆ. ಆಧ್ಯಾತ್ಮಿಕ, ಉದ್ಯಮ, ಕೃಷಿ, ಶಿಕ್ಷಣ, ಸಹಕಾರ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಹೊಸ ಪ್ರಯೋಗಗಳು ಕಲ್ಲೋಳಿಯಲ್ಲಿ ನಡೆಯುತ್ತಿವೆ ಎಂದರಲ್ಲದೇ ಮಾಜಿ ಸೈನಿಕ ಮಲ್ಲಪ್ಪ ಕಂಕಣವಾಡಿ ಅವರು ದೇಶ ಸೇವೆ ಮಾಡಿ ಈಗ ಸಮಾಜದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಿರಮಿಡ್ ಆಧ್ಯಾತ್ಮಿಕ ಧ್ಯಾನ ಕೇಂದ್ರದ ಮೂಲಕ ಈಗ ಈಶ ಸೇವೆ ಮಾಡಲು ಹೊರಟ್ಟಿದ್ದಾರೆ. ಈ ಕಾರ್ಯವು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಸವಿತಾ ಕಂಕಣವಾಡಿ ಸ್ವಾಗತಿಸಿದರು. ಪರಪ್ಪ ಮುತ್ನಾಳ ವಂದಿಸಿದರು. ಮಲ್ಲಿಕಾರ್ಜುನ ಕರಜಗಿಮಠ ನಿರೂಪಿಸಿದರು.