ಕನ್ನಡಪ್ರಭ ವಾರ್ತೆ ಮುಧೋಳ
ನಗರದ ತಲಾಠಿ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಫ್ಯಾಟಿ ಲಿವರ್ ಸ್ಕ್ಯಾನ್ ಹಾಗೂ ಸಮಾಲೋಚನಾ ಶಿಬಿರದಲ್ಲಿ ರೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಫ್ಯಾಟಿ ಲಿವರ್ ಸಮಸ್ಯೆಯು ಕೇವಲ ಯಕೃತ್ತಿನ ಆರೋಗ್ಯ ಹಾಳು ಮಾಡುವುದಲ್ಲದೆ, ಹೃದಯಾಘಾತ ಮತ್ತು ಇತರೆ ಗಂಭೀರ ಹೃದಯಸಂಬಂಧಿ ಕಾಯಿಲೆಗಳ ಪೂರ್ವಸೂಚನೆಯಾಗಿದೆ ಎಂದರು.
ಡಾ.ರಾಜೇಶ ತಲಾಠಿ ನೀಡಿದ ಪ್ರಮುಖ ಸಲಹೆಗಳು:ಹೃದ್ರೋಗಕ್ಕೂ ಲಿವರ್‌ಗೂ ನೇರ ಸಂಬಂಧವಿದ್ದು ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾಗುವುದು, ದೇಹದ ಚಯಾಪಚಯ ಕ್ರಿಯೆಯ ವೈಫಲ್ಯವನ್ನು ತೋರಿಸುತ್ತದೆ. ಇದು ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣವಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಅಗತ್ಯ ಪರೀಕ್ಷೆಗಳು: ಫ್ಯಾಟಿ ಲಿವರ್ ಪತ್ತೆಯಾದ ರೋಗಿಗಳು ಕೇವಲ ಲಿವರ್ ತಪಾಸಣೆಗೆ ಸೀಮಿತವಾಗದೆ, ರಕ್ತದೊತ್ತಡ, ಮಧುಮೇಹ ಹಾಗೂ ಲಿಪಿಡ್ ಪ್ರೊಫೈಲ್ (ಕೊಲೆಸ್ಟ್ರಾಲ್) ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಬೇಕು. ಫ್ಯಾಟಿ ಲಿವರ್ ಎಂಬುದು ದೇಹ ನೀಡುವ ಆರಂಭಿಕ ಎಚ್ಚರಿಕೆಯ ಗಂಟೆಯಾಗಿದ್ದು, ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕೆ ವಹಿಸಿದರೆ ಯಕೃತ್ತಿನ ಹಾನಿಯನ್ನು ತಡೆಯುವುದರ ಜೊತೆಗೆ ಹೃದಯದ ಆರೋಗ್ಯವನ್ನೂ ರಕ್ಷಿಸಿಕೊಳ್ಳಬಹುದು ಎಂದು ಡಾ.ರಾಜೇಶ್ ತಲಾಠಿ ತಿಳಿಸಿದರು. ಈ ಉಚಿತ ಶಿಬಿರದಲ್ಲಿ ಅಪಾರ ಸಂಖ್ಯೆಯ ರೋಗಿಗಳು ತಪಾಸಣೆಗೆ ಒಳಗಾಗಿ ಸಮಾಲೋಚನೆ ಪಡೆದರು.