ಕನ್ನಡಪ್ರಭ ವಾರ್ತೆ ಹನೂರು ಹುಲ್ಲೇಪುರ ತೋಟದ ಮನೆಯ ಮುಂಭಾಗ ಕರಡಿ ಪ್ರತ್ಯಕ್ಷಗೊಂಡ ಹಿನ್ನೆಲೆ ರೈತರು ಆತಂಕಗೊಂಡಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹುಲ್ಲೇಪುರ ಗೋದ್ವೆ ಗುಡ್ಡದ ಬಳಿ ಸಮೀಪದಲ್ಲಿ ಬರುವ ಬೆಂಗಳೂರಿನ ನಿವಾಸಿ ಗಿರಿಧರ್ ತೋಟದ ಮನೆಯ ಮುಂಭಾಗ ಭಾನುವಾರ ಸಂಜೆ ಕರಡಿ ಪ್ರತ್ಯಕ್ಷವಾಗಿದ್ದು, ಇದರಿಂದಾಗಿ ಕಾವಲುಗಾರ ಮಂಜು ಮತ್ತು ಕುಟುಂಬದವರು ಭಯಭೀತರಾಗಿ ಸುತ್ತಮುತ್ತಲಿನ ರೈತರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಹನೂರು ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲೇಮಾಳ ರಸ್ತೆಯ ರೈತ ಬಸವರಾಜ್ ಮನೆಯ ಮುಂಭಾಗ ರಾತ್ರಿ ವೇಳೆ ಕಾಣಿಸಿಕೊಂಡಿತ್ತು. ಒಂದು ವಾರದ ನಂತರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜುಗೌಡರ ಗೋದ್ವೆ ಗುಡ್ಡದ ಬಳಿ ಜಮೀನಿನಲ್ಲಿ ಕಾಣಿಸಿಕೊಂಡು ನಾಪತ್ತೆಯಾಗಿದ್ದ ಕರಡಿ ಮತ್ತೆ ಅದೇ ವ್ಯಾಪ್ತಿಯಲ್ಲಿ ಬೆಂಗಳೂರು ನಿವಾಸಿ ಗಿರಿಧರ್ ಎಂಬವರಿಗೆ ಸೇರಿದ ಮೀನು ಸಾಕಾಣಿಕೆ ಕೇಂದ್ರ ಜಮೀನಿನ ಬಳಿ ನೆನ್ನೆ ಸಂಜೆ ಕರಡಿ ಕಾಣಿಸಿಕೊಂಡು ಕೆಲವು ಕಾಲ ಅಲ್ಲಿ ಇದ್ದ ಕಾವಲುಗಾರ ಮತ್ತು ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು.ಅರಣ್ಯಾಧಿಕಾರಿಗಳ ಡಾಂಗುಡಿ:
ಸುದ್ದಿ ತಿಳಿದ ತಕ್ಷಣ ವಲಯ ಅರಣ್ಯಾಧಿಕಾರಿ ಪ್ರವೀಣ್, ಸಿಬ್ಬಂದಿಗಳು ಗೋಧ್ವೆ ಗುಡ್ಡದ ಬಳಿ ಮತ್ತು ತೋಟದ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರಡಿಗಾಗಿ ಹುಡುಕಾಟ ನಡೆಸಿ ಮತ್ತೆ ಕಾಣಿಸಿಕೊಂಡರೆ ಅರಣ್ಯ ಇಲಾಖೆಯ ಕಂಟ್ರೋಲ್ ರೂಂ ಅಧಿಕಾರಿ ವರ್ಗದವರಿಗೆ ದೂರವಾಣಿ ಕರೆ ಮಾಡಿ ತಿಳಿಸುವಂತೆ ಅರಣ್ಯ ಸಿಬ್ಬಂದಿ ಕಾವಲುಗಾರ ಮಂಜು ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ .ಕರಡಿ ಹಿಡಿಯಲು ಆಗ್ರಹ: