ಸೋಲಿನ ಭೀತಿಗೆ ಕೀಳುಮಟ್ಟದ ಟೀಕೆ ಬೇಡ

KannadaprabhaNewsNetwork |  
Published : May 01, 2024, 01:20 AM IST
30ಕೆಡಿವಿಜಿ19-ದಾವಣಗೆರೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಯಶವಂತರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಲೋಕಸಭೆ ಚುನಾವಣೆ ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್ ಮುಖಂಡರು ಕೀಳುಮಟ್ಟದ ಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಅಭಿವೃದ್ಧಿ ವಿಚಾರಕ್ಕೆ ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್‌ ಸವಾಲು ಹಾಕಿದರು.

- ಕಾಂಗ್ರೆಸ್‌ ಮುಖಂಡರಾಗಿ ಗುಟ್ಕಾ ದಂಧೆ: ಯಶವಂತ ರಾವ್‌ ಆರೋಪ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭೆ ಚುನಾವಣೆ ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್ ಮುಖಂಡರು ಕೀಳುಮಟ್ಟದ ಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಅಭಿವೃದ್ಧಿ ವಿಚಾರಕ್ಕೆ ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್‌ ಸವಾಲು ಹಾಕಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಕೀಯವೇ ಬೇರೆ, ವೃತ್ತಿಯೇ ಬೇರೆ. ಆದರೂ, ವೃತ್ತಿಯನ್ನು ರಾಜಕೀಯಕ್ಕೆ ಎಳೆ ತಂದು, ಬಿಜೆಪಿ ಅಭ್ಯರ್ಥಿ ಗುಟ್ಕಾ ಮಾಡುವವರು, ಕಾಂಗ್ರೆಸ್ ಅಭ್ಯರ್ಥಿ ಆರೋಗ್ಯ ಕಾಪಾಡುವವರೆಂದೆಲ್ಲಾ ಪ್ರಚಾರ ಮಾಡುತ್ತಿರುವುದು ಎಷ್ಟು ಸರಿ ಎಂದರು.

ದಂತ ವೈದ್ಯರು ಹಲ್ಲಿನ ತೊಂದರೆ ಬಿಟ್ಟು, ಬೇರೆ ಯಾವ ಕಾಯಿಲೆಗೆ ಚಿಕಿತ್ಸೆ ಕೊಡಲು ಸಾಧ್ಯ? ನಿಮ್ಮ ಕಲ್ಲೇಶ್ವರ ಮಿಲ್‌ನಲ್ಲಿ ಫೈಯರ್, ರಿಪೀಟ್‌ ಬ್ರ್ಯಾಂಡ್‌ನಡಿ ಏನು ತಯಾರಿಸುತ್ತಿದ್ದೀರೆಂದು ಕಾಂಗ್ರೆಸ್ ಮುಖಂಡರು ಬಹಿರಂಗಪಡಿಸಲಿ. ನೀವು ಮಾಡುತ್ತಿರುವುದೂ ಗುಟ್ಕಾ ದಂಧೆಯನ್ನೇ. ಹಿಂದೆ ಲಿಕ್ಕರ್ ತಯಾರಿಸುತ್ತಿದ್ದಿರಿ. ಯಾವುದರಲ್ಲಿ ಲಾಭ ಬರುತ್ತೋ ಅದನ್ನೆಲ್ಲಾ ಮಾಡಿಕೊಂಡೇ ಬಂದಿದ್ದೀರಿ. ಹಾಗಾಗಿ, ವೈಯಕ್ತಿಕ, ವೃತ್ತಿ, ವ್ಯಾಪಾರದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಸಂಸದರ ಕೊಡುಗೆ ಶೂನ್ಯವೆಂದು ಕಾಂಗ್ರೆಸ್ಸಿಗರು ಪದೇಪದೇ ಹೇಳುತ್ತಿದ್ದೀರಿ. 1994ರಿಂದ 3 ದಶಕ ಕಾಲ ಶಾಸಕರಾಗಿರುವ ಶಾಮನೂರು ಶಿವಶಂಕರಪ್ಪ ಅವರು ಜಿಲ್ಲೆಗೆ ನೀಡಿದ ಕೊಡುಗೆ ಏನು? 1997ರಿಂದ ಮೂರು ಸಲ ಮಂತ್ರಿಯಾದ ಎಸ್ಸೆಸ್ ಮಲ್ಲಿಕಾರ್ಜುನ ಕೊಡುಗೆ ಏನು? ನಮ್ಮ ಸರ್ಕಾರವಿದ್ದಾಗಲೇ ಡಿಸಿ ಕಚೇರಿಗೆ ಸ್ಪಂತ ಕಟ್ಟಡ, ಪಾಲಿಕೆಯಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿಗೆ ಕಟ್ಟಡ, ದಾವಣಗೆರೆ ವಿವಿ ಸ್ಥಾಪನೆ, ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಪಾಸ್ ಪೋರ್ಟ್‌ ಸೇವಾ ಕೇಂದ್ರ ಹೀಗೆ ಹಲವಾರು ಸಾಧನೆಯಾಗಿವೆ. ನಮ್ಮ ಸಾಧನೆಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ್ದೇವೆ. ನೋಡಿಲ್ಲವೆಂದರೆ ನಿಮಗೂ ಒಂದು ಪ್ರತಿ ತಲುಪಿಸುತ್ತೇವೆ. ನಿಮ್ಮ ಸಾಧನೆಯ ರಿಪೋರ್ಟ್ ಕೊಡಿ ಎಂದರು.

ಪಕ್ಷದ ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ, ಬಿ.ಎಂ.ಸತೀಶ ಕೊಳೇನಹಳ್ಳಿ, ಲಿಂಗರಾಜ ಗೌಳಿ, ಸುರೇಶ ರಾವ್ ಸಿಂಧೆ, ಶಂಕರಗೌಡ ಬಿರಾದಾರ್‌, ಸಂತೋಷ ಕೋಟಿ ಇತರರು ಇದ್ದರು.

- - - ಟಾಪ್‌ ಕೋಟ್‌ ಸಂಸದರ ಬಗ್ಗೆ ಶಬ್ದ ಬಳಸುವಾಗ ವಿವೇಚನೆ ಇರಲಿ. ವೃಥಾ ಆಧಾರರಹಿತ ಆರೋಪ ಸರಿಯಲ್ಲ. ಸಚಿವರು, ಶಾಸಕರು, ಕಾಂಗ್ರೆಸ್ ಅಭ್ಯರ್ಥಿ ಮತ ಚಲಾಯಿಸುವ ದಾವಣಗೆರೆಯ ಇಂಡಿಯನ್‌ ಮೆಡಿಕಲ್ ಅಸೋಸಿಯೇಷನ್ ಹಾಲ್‌ ಬೂತ್‌ನಲ್ಲೇ ಈವರೆಗಿನ ಚುನಾವಣೆಗಳಲ್ಲಿ ನಿಮಗೆ ಮುನ್ನಡೆ ಸಿಕ್ಕಿಲ್ಲ. ಬೂತ್ ಗೆಲ್ಲಲಾಗದವರು ಅಲ್ಪಸಂಖ್ಯಾತರನ್ನು ಹೆದರಿಸಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದೀರಿ

- ಯಶವಂತ ರಾವ್ ಜಾಧವ್. ಮಾಜಿ ಜಿಲ್ಲಾಧ್ಯಕ್ಷ, ಬಿಜೆಪಿ

- - - -30ಕೆಡಿವಿಜಿ19: ದಾವಣಗೆರೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಯಶವಂತರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ