ಹೊನ್ನಾವರ: ತಾಲೂಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ೧೧ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಫೆ. ೧ರಂದು ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆಯ ಆವರಣದಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಹೊನ್ನಪ್ಪಯ್ಯ ಗುನಗಾ ಸರ್ವಾಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಸ್.ಎಚ್. ಗೌಡ ತಿಳಿಸಿದರು.ಬುಧವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಅಂದು ಬೆಳಗ್ಗೆ ೧೦ ಗಂಟೆಗೆ ಸಮ್ಮೇಳನವನ್ನು ಕುಂದಾಪುರದ ಹಿರಿಯ ಸಾಹಿತಿ ಪ್ರೊ. ಜಯರಾಮ ಶೆಟ್ಟಿ ಉದ್ಘಾಟಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪುಸ್ತಕ ಬಿಡುಗಡೆಗೊಳಿಸುವರು. ಶಾಸಕ ದಿನಕರ ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸುವರು. ಮುಗ್ವಾ ಗ್ರಾಪಂ ಅಧ್ಯಕ್ಷ ಐ.ವಿ. ನಾಯ್ಕ ದ್ವಾರ ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಎಸ್.ಡಿ. ಹೆಗಡೆ ಧ್ವಜ ಹಸ್ತಾಂತರಿಸುವರು. ಹಿರಿಯ ಸಾಹಿತಿ ಹೊನ್ನಪ್ಪಯ್ಯ ಗುನಗಾ ಅಧ್ಯಕ್ಷೀಯ ಭಾಷಣ ಮಾಡುವರು. ಪ್ರೊ. ಕಿಶೋರ ನಾಯ್ಕ ಅವರ ಮೊಗ್ಗು ಕವನ ಸಂಕಲನ, ಎನ್.ಜಿ. ಕಾವುರು ಅವರ ಒಂದೇ ಬನದ ಹೂಗಳು ಲೋಕಾರ್ಪಣೆಗೊಳ್ಳಲಿದೆ.ಮಧ್ಯಾಹ್ನ ೧೨ ಗಂಟೆಗೆ ವಿಚಾರ ಮಂಥನ ಗೋಷ್ಠಿಯ ನಡೆಯಲಿದೆ. ಅಂಕಣಕಾರ ನಾರಾಯಣ ಯಾಜಿ ಸಾಲಿಬೈಲು ಅಧ್ಯಕ್ಷತೆ ವಹಿಸುವರು. ಪ್ರಾಚಾರ್ಯ ವಸಂತ ಗಾಂವ್ಕರ್ ಆಶಯ ನುಡಿಯನಾಡುವರು ಎಂದರು.
ಸಂಜೆ ೪.೩೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾ ಕಸಾಪ ಬಿ.ಎನ್. ವಾಸರೆ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಸಮಾರೋಪ ಮಾತನಾಡುವರು. ಸಾಧಕರಿಗೆ ಸನ್ಮಾನದಲ್ಲಿ ಸಾರಿಗೆ ಉದ್ಯಮಿ ವೆಂಕ್ರಟಮಣ ಹೆಗಡೆ, ಸಹಕಾರ ಕ್ಷೇತ್ರದ ಜಿ.ಜಿ. ಶಂಕರ, ರಂಗಭೂಮಿ ಕ್ಷೇತ್ರದ ರಾಮ ಗೌಡ, ಕೌಶಲ್ಯ ಕ್ಷೇತ್ರದ ಅಬ್ದುಲ್ ವಹಾಬ್ ಉಸ್ಮಾನ, ಕಾಷ್ಠಶಿಲ್ಪಿ ಗಂಗಾಧರ ಆಚಾರಿ, ಜನಪದ ಹಾಡುಗಾರ್ತಿ ಗೌರಿ ನಾಯ್ಕ, ಪತ್ರಕರ್ತ ಸತೀಶ ತಾಂಡೇಲ್, ಸಾಹಿತಿ ಸುರೇಶ ನಾಯ್ಕ, ಶಿಕ್ಷಕ ವಿಷ್ಣು ಪಟಗಾರ, ಯಕ್ಷಗಾನ ನಾರಾಯಣ ಹೆಗಡೆ ಅವರನ್ನು ಸನ್ಮಾನಿಸಲಾಗುವುದು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ.ಆರ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಸುಧೀಶ ನಾಯ್ಕ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಗಜಾನನ ನಾಯ್ಕ, ಎಚ್.ಎಂ. ಮಾರುತಿ, ಕೋಶಾಧ್ಯಕ್ಷ ನಾರಾಯಣ ಹೆಗಡೆ, ಹಿರಿಯ ಸದಸ್ಯರಾದ ಜನಾರ್ದನ ಕಾಣಕೋಣಕರ, ಮಹೇಶ ಭಂಡಾರಿ, ಬಿ.ಎನ್. ಹೆಗಡೆ, ಸಾಧನಾ ಬರ್ಗಿ, ಆರ್.ಕೆ. ಮುಕ್ರಿ, ಕೇಶವ ಶೆಟ್ಟಿ ಇದ್ದರು.