ಹಗರಿಬೊಮ್ಮನಹಳ್ಳಿ: ತಾಲೂಕಿನ ರಾಮೇಶ್ವರಬಂಡಿ ಗ್ರಾಮದ ಮಹಿಳಾ ಹಾಲು ಉತ್ಪಾದಕ ಕೇಂದ್ರದಲ್ಲಿ ರಾಬಕೊವಿ ಬಳ್ಳಾರಿ ಹಾಗೂ ತಂಬ್ರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಯುಕ್ತ ಆಯೋಜನೆಯಲ್ಲಿ ಇತ್ತೀಚೆಗೆ ಪಶು ಆಹಾರ ಶಿಬಿರ ಹಾಗೂ ಸಾರ್ವಜನಿಕರ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.ರಾಬಕೊವಿ ಪಶು ವೈದ್ಯಾಧಿಕಾರಿ ಡಾ.ರಾಮಸ್ವಾಮಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಪಶು ಆಹಾರವು ಆಹಾರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಉತ್ಪಾದನೆಯಾಗಬೇಕು. ಮೇವನ್ನು ಹಸುಗಳಿಗೆ ಸಣ್ಣಾಗಿ ಕತ್ತರಿಸಿ ಸಮರ್ಪಕವಾಗಿ ನೀಡಬೇಕು. ಹಸುಗಳಿಗೆ ಎಳೆ ಹುಲ್ಲಿಗಿಂತ, ಅವಧಿ ಮೀರಿದ ಹುಲ್ಲು ಪಶು ಆರೋಗ್ಯಕ್ಕೆ ಉತ್ತಮವಾದುದು. ಪಶು ಆಹಾರವನ್ನು ಹಾಲು ಉತ್ಪಾದನೆ ಹೊರತಾಗಿ, ಬೆಳವಣಿಗೆ, ಸಂತಾನ ಅಭಿವೃದ್ಧಿ, ಆರೋಗ್ಯ ಪೋಷಣೆ, ಶಾರೀರಿಕ ಪೋಷಣೆಗೆ ಅತ್ಯಗತ್ಯವಾಗಿ ನೀಡಬೇಕು. ಹಸುಗಳಿಗೆ ಅವೈಜ್ಞಾನಿಕ ಆಹಾರ ಕೊಡುವುದನ್ನು ತಪ್ಪಿಸಿ, ಸಮತೋಲಿತ ಆಹಾರವನ್ನು ನೀಡಬೇಕು. ಹಸುಗಳಿಗೆ ಉತ್ತಮ ಆಹಾರ ನೀಡುವುದರಿಂದ ರೈತರಿಗೆ ಹೆಚ್ಚಿನ ಆದಾಯ ದೊರೆತು, ಹೈನುಗಾರಿಕೆ ಲಾಭದಾಯಕವಾಗಲಿದೆ ಎಂದರು.
ರಾಬಕೊವಿ ವಿಸ್ತರಾಣಾಧಿಕಾರಿ ಜಿ.ಪಿ ಪರಮೇಶ್ವರಪ್ಪ, ರಾಬಕೊವಿ ಸ್ಟೆಪ್ ವಿಭಾಗದ ಶಾಂತಮ್ಮ, ತಾಲೂಕು ವಿಸ್ತರಣಾಧಿಕಾರಿ ವೆಂಕಟೇಶ್ ಮಾತನಾಡಿದರು. ರಾಮೇಶ್ವರಬಂಡಿ ಮಹಿಳಾ ಹಾಲು ಉತ್ಪಾದಕ ಸಂಘದ ಅಧ್ಯಕ್ಷೆ ಜಿ.ಕಾವ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಶು ಸಮಲೋಚಕರಾದ ಶಿವುನಾಯ್ಕ, ಶಿವರಾಜ್, ಆರೋಗ್ಯ ಇಲಾಖೆಯ, ನಾಗರಾಜ, ಸುಮ, ಅನುಸೂಯಮ್ಮ, ಸಂಘದ ಉಪಾಧ್ಯಕ್ಷೆ ಕೆ.ಯಶೋಧ, ಮುಖ್ಯ ಕಾರ್ಯನಿರ್ವಾಹಕಿ ಕೆ.ಎಚ್.ಕಾವ್ಯ, ಸಂಘದ ನಿರ್ದೇಶಕರಾದ ಕೆ.ಎಂ. ಸುಲೋಚನಾ, ಎಸ್.ಗೌರಮ್ಮ, ಕೆ.ಲಕ್ಷ್ಮವ್ವ, ಪಿ.ಗಾಯತ್ರಿ, ಮುಖಂಡರಾದ ಕೆ.ಕರಿಬಸಪ್ಪ, ಬಸವನಗೌಡ, ಅಳವಂಡಿ ಪರಮೇಶ್ವರಪ್ಪ, ಕೆ.ಹನುಮರೆಡ್ಡಿ, ಕಾಳಗಟ್ಟಿ ಷಣ್ಮುಖಪ್ಪ, ಕೆ.ಎಂ. ಮಂಜಯ್ಯ, ಬಿ.ಮಾರುತೇಶ್, ಬಿ.ಬಸವರಾಜ, ಬಗನಾಳ ಉಮೇಶ, ಶಿವರೆಡ್ಡಿ, ಡಿ.ತೊಂಡ್ಯಳಪ್ಪ, ಅಳವಂಡಿ ಮಂಜುನಾಥ, ಎ.ಜಿ. ಹನುಮಂತಪ್ಪ, ಎಚ್.ಎಂ. ಅಜ್ಜಯ್ಯ, ಎಸ್.ಶೇಖಪ್ಪ ಇತರರಿದ್ದರು. ಆರೋಗ್ಯ ಇಲಾಖೆಯವರು ಶಿಬಿರದಲ್ಲಿ ೭೬ರೋಗಿಗಳನ್ನು ಪರೀಕ್ಷಿಸಿ ಉಚಿತವಾಗಿ ಮಾತ್ರೆಗಳನ್ನು ವಿತರಿಸಿದರು.ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮೇಶ್ವರಬಂಡಿ ಗ್ರಾಮದಲ್ಲಿ ಪಶು ಆಹಾರ, ಸಾರ್ವಜನಿಕರ ಆರೋಗ್ಯ ಶಿಬಿರ ನಡೆಯಿತು.