ಶೀಘ್ರ ಆಧುನಿಕ ವಧಾಗಾರ ಉದ್ಘಾಟನೆ

KannadaprabhaNewsNetwork |  
Published : Nov 21, 2023, 12:45 AM IST
20ಶಿರಾ2: ಶಿರಾ ನಗರದ ಪಶು ಇಲಾಖೆ ಆವರಣದಲ್ಲಿ ಬರಪರಿಸ್ಥಿತಿ ನಿರ್ವಹಣೆಯಡಿ ರೈತರಿಗೆ ಶಾಸಕ ಟಿ.ಬಿ.ಜಯಚಂದ್ರ ಅವರು ಮೇವಿನ ಬೀಜದ ಕಿರು ಪೊಟ್ಟಣ ವಿತರಣೆ ಮಾಡಿದರು. | Kannada Prabha

ಸಾರಾಂಶ

ಶಿರಾ ನಗರದಲ್ಲಿ ಶೀಘ್ರದಲ್ಲೇ ವಧಾಗಾರ ಉದ್ಘಾಟನೆಯಾಗಲಿದ್ದು, ಕುರಿ ಮತ್ತು ಮೇಕೆ ಮಾಂಸ ರಫ್ತನ್ನು ಈ ವಧಾಗಾರ ಉತ್ತೇಜಿಸಲಿದ್ದು, ತಾಲೂಕಿನಲ್ಲಿ ಕುರಿ ಮತ್ತು ಮೇಕೆಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ಶಾಸಕ ಟಿಬಿ ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ:

ಶಿರಾ ನಗರದಲ್ಲಿ ಶೀಘ್ರದಲ್ಲೇ ವಧಾಗಾರ ಉದ್ಘಾಟನೆಯಾಗಲಿದ್ದು, ಕುರಿ ಮತ್ತು ಮೇಕೆ ಮಾಂಸ ರಫ್ತನ್ನು ಈ ವಧಾಗಾರ ಉತ್ತೇಜಿಸಲಿದ್ದು, ತಾಲೂಕಿನಲ್ಲಿ ಕುರಿ ಮತ್ತು ಮೇಕೆಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ಶಾಸಕ ಟಿಬಿ ಜಯಚಂದ್ರ ಹೇಳಿದರು.

ನಗರದ ಪಶು ಇಲಾಖೆ ಆವರಣದಲ್ಲಿ ಜಿ.ಪಂ. ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಬರಪರಿಸ್ಥಿತಿ ನಿರ್ವಹಣೆಯಡಿ ಮೇವಿನ ಬೀಜದ ಕಿರು ಪೊಟ್ಟಣ ವಿತರಿಸಿ ಮಾತನಾಡಿದರು. ಮುಂದಿಂದ ದಿನಗಳಲ್ಲಿ ತಾಲೂಕಿನ ಬೆಳೆವಣಿಗೆಗೆ ಹಾಗೂ ಪಶು ಸಂಗೋಪನೆ ತುಂಬಾ ಮುಖ್ಯ ಪಾತ್ರವಹಿಸುತ್ತದೆ. ಮುಂಬರುವ ಇನ್ನೆರಡು ತಿಂಗಳಲ್ಲಿ ಶಿರಾದ ಅತ್ಯಾಧುನಿಕ ಕುರಿ-ಮೇಕೆ ವಧಾಗಾರ ಉದ್ಘಾಟನೆಯಾಗಲಿದೆ.

ಇದರಿಂದ ಕುರಿ ಮತ್ತು ಮೇಕೆಗಳಿಗೆ ಉತ್ತಮ ಬೆಲೆ ನಿಗದಿ ಮಾಡಿ, ಸ್ಥಳದಲ್ಲಿಯೇ ಹಣ ಪಾವತಿಯಾಗುವ ವ್ಯವಸ್ಥೆ ಮಾಡುತ್ತೇನೆ. ಇದು ರೈತರಿಗೆ ಬಹುದೊಡ್ಡ ಕೊಡುಗೆಯಾಗಲಿದೆ. ರೈತರು ಕುರಿ ಮತ್ತು ಮೇಕೆಗಳನ್ನು, ಘಟಕಕ್ಕೆ ತಂದು, ಮಾರಾಟ ಮಾಡಿದ, ಕೆಲವೇ ನಿಮಿಷಗಳಲ್ಲಿ, ನ್ಯಾಯಯುತ ಬೆಲೆ ನೀಡಿ, ಸ್ಥಳದಲ್ಲೇ ಹಣ ನೀಡುವ, ವ್ಯವಸ್ಥೆ ಮಾಡಲಾಗುತ್ತದೆ. ರೈತರು, ಈ ಅವಕಾಶವನ್ನು, ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪಶು ಇಲಾಖೆ ಅಡಿಯಲ್ಲಿ ಕೊಡುವ ಮೇವಿನ ಬೀಜವನ್ನು ರೈತರು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು, ಜಮೀನುಗಳಲ್ಲಿ ಬೆಳೆದು ಮೇವನ್ನು ಪಶುಗಳಿಗೆ ನೀಡಿ ಪಶುಗಳ ಹಸಿವನ್ನು ನೀಗಿಸುವ ಕೆಲಸ ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ. ಸದಸ್ಯ ಅರೆಹಳ್ಳಿ ರಮೇಶ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎಸ್.ರಮೇಶ್, ಸಹಾಯಕ ಕೃಷಿ ನಿರ್ದೇಶಕ ಡಾ. ನಾಗರಾಜ, ಪಶು ಇಲಾಖೆ ವಿಸ್ತಾರಣ ಅಧಿಕಾರಿ ಡಾ.ನಾಗೇಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುಧಾಕರ್, ನಗರಸಭೆ ಸದಸ್ಯ ಜೀಷಾನ್ ಮೊಹಮದ್, ಮಾಜಿ ನಗರಸಭೆ ಸದಸ್ಯ ಎಂ.ಎನ್.ರಾಜು, ಮುಖಂಡ ನಸ್ರುಲ್ಲಾ ಖಾನ್ ಹಾಜರಿದ್ದರು.

ಫೋಟೊ......

20ಶಿರಾ2: ಶಿರಾ ನಗರದ ಪಶು ಇಲಾಖೆ ಆವರಣದಲ್ಲಿ ಬರ ಪರಿಸ್ಥಿತಿ ನಿರ್ವಹಣೆಯಡಿ ರೈತರಿಗೆ ಶಾಸಕ ಟಿ.ಬಿ.ಜಯಚಂದ್ರ ಅವರು ಮೇವಿನ ಬೀಜದ ಕಿರು ಪೊಟ್ಟಣ ವಿತರಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ