ದೊಡ್ಡಬಳ್ಳಾಪುರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಂತಿಮ ಮತದಾರರ ಪಟ್ಟಿಯುಲ್ಲಿ 8,04,534 ಮತದಾರರಿದ್ದಾರೆ ಎಂದು ಬೆಂ.ಗ್ರಾ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ ತಿಳಿಸಿದರು.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 1,08,430 ಪುರುಷರು, 1,11,757 ಮಹಿಳೆಯರು ಹಾಗೂ 4 ಇತರೆ ಮತದಾರರು ಸೇರಿದಂತೆ 2,20,191 ಮತದಾರರಿದ್ದಾರೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 97,048 ಪುರುಷರು, 99,918 ಮಹಿಳೆಯರು ಹಾಗೂ 11 ಇತರೆ ಮತದಾರರು ಸೇರಿದಂತೆ 1,96,977 ಮತದಾರರಿದ್ದಾರೆ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 95,589 ಪುರುಷರು, 98,740 ಮಹಿಳೆಯರು ಹಾಗೂ 1 ಇತರೆ ಮತದಾರರು ಸೇರಿದಂತೆ 1,94,330 ಮತದಾರರಿದ್ದಾರೆ. ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 94,406 ಪುರುಷರು, 98,586 ಮಹಿಳೆಯರು ಹಾಗೂ 44 ಇತರೆ ಮತದಾರರು ಸೇರಿದಂತೆ 1,93,036 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
56,349 ಮತದಾರರಿಗೆ ನೋಟಿಸ್:ಎಸ್ಐಆರ್ ಪ್ರಕ್ರಿಯೆಯಲ್ಲಿ ಐವರು ಮೃತರು, 1,716 ಶಾಶ್ವತ ವಲಸೆ ಹೋಗಿರುತ್ತಾರೆ, 2,093 ಇತರೆಡೆ ನೋಂದಣಿ ಆಗಿರುವವರು ಸೇರಿ 3814 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಎಸ್ಐಆರ್ ಪ್ರಕ್ರಿಯೆಯಡಿ ನೋ ಮ್ಯಾಪಿಂಗ್ ಹಾಗೂ ಅನಾಮಲಿಸ್ (2002ಕ್ಕೆ ಮ್ಯಾಪಿಂಗ್ನಲ್ಲಿ ವ್ಯತ್ಯಾಸ ಕಂಡುಬಂದ ಪ್ರಕರಣಗಳು) ಒಳಗೊಂಡಂತೆ 56349 ಮತದಾರರಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಲಾಗಿದೆ.
ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತದಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. 3,95,473 ಪುರುಷ ಮತದಾರರಿದ್ದು, 4,09,061 ಮಹಿಳಾ ಮತದಾರರಿದ್ದಾರೆ. ಜನಸಂಖ್ಯೆಗನುಗುಣವಾಗಿ 1034 ಲಿಂಗಾನುಪಾತ ಇದೆ.ಜಿಲ್ಲೆಯಲ್ಲಿ 18-19 ವರ್ಷ ವಯಸ್ಸಿನ 14,568 ಮತದಾರರಿದ್ದಾರೆ, 8,604 ಮಂದಿ 85 ವರ್ಷಕ್ಕೂ ಮೇಲ್ಪಟ್ಟ ಮತದಾರರಿದ್ದಾರೆ. 12,151 ವಿಶೇಷಚೇತನ ಮತದಾರರಿದ್ದಾರೆ. 06 ಎನ್ಆರ್ಐ (ಅನಿವಾಸಿ ಭಾರತೀಯ) ಮತದಾರರಿದ್ದಾರೆ.. 108 ಸೇವಾ ಮತದಾರರಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 04 ಮತಕ್ಷೇತ್ರಗಳಲ್ಲಿ ನಡೆದ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ-2026 ಸಂಬಂಧ, ಎಲ್ಲಾ ಪ್ರಕ್ರಿಯೆ, ಪ್ರಗತಿ ಕುರಿತ ವಿವರಗಳನ್ನು ಹಾಗೂ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಅಧಿಕೃತ ವೆಬ್ ಸೈಟ್ https://voters.eci.gov.in/ & https://bangalorerural.nic.in/ ಮೂಲಕ ಪರಿಶೀಲಸಬಹುದು ಹಾಗೂ ಮತದಾರರ ಪಟ್ಟಿಯನ್ನು ಡೌನ್ ಮಾಡಿಕೊಳ್ಳಬಹುದು ಜೊತೆಗೆ ಎಲ್ಲಾ ಮತದಾರರ ನೋಂದಣಾಧಿಕಾರಿಗಳ ಕಛೇರಿಗಳಲ್ಲಿ ಪ್ರಚೂರ ಪಡಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಕೈಬಿಟ್ಟಿರುವ ಅರ್ಹ ಮತದಾರರು ಸೇರ್ಪಡೆಗೆ ನಮೂನೆ-6ರ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.
29ಕೆಡಿಬಿಪಿ1-