ಸಂಭ್ರಮದ ಅಗ್ಗಿ, ಪಾಲಕಿ ಉತ್ಸವ ಮೆರವಣಿಗೆ

KannadaprabhaNewsNetwork |  
Published : Apr 30, 2025, 12:33 AM IST
ಗುಳೇದಗುಡ್ಡದ ಷಡಕ್ಷರಯ್ಯ ಮಹಾಸ್ವಾಮಿಗಳ ಮಠದಲ್ಲಿ ಜಾತ್ರೆ ಉತ್ಸವದ ಅಂಗವಾಗಿ ಅಗ್ಗಿ ಉತ್ಸವ ಹಾಗೂ ಕುಂಭಮೇಳ ಮೆರವಣಿಗೆ ಸಂಭ್ರಮದಿಂದ ಜರುಗಿತು. | Kannada Prabha

ಸಾರಾಂಶ

ಗುಳೇದಗುಡ್ಡ ಪಟ್ಟಣದ ಶ್ರೀ ಷಡಕ್ಷರಯ್ಯ ಮಹಾಸ್ವಾಮಿಗಳ ಬೃಹನ್ಮಠದಲ್ಲಿ ಜಾತ್ರಾ ಮಹೋತ್ಸವ, ಶ್ರೀ ಬಸಯ್ಯ ಅಜ್ಜನವರ ಜಾತ್ರೆ ಹಾಗೂ ಶ್ರೀ ಷಡಕ್ಷರಯ್ಯ ಸ್ವಾಮಿಗಳ 27ನೇ ಪುಣ್ಯಾರಾಧನೆ ನಿಮಿತ್ತ ಕುಂಭ ಮೆರವಣಿಗೆ ಹಾಗೂ ಅಗ್ಗಿ ಉತ್ಸವ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ಜರುಗಿದವು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದ ಶ್ರೀ ಷಡಕ್ಷರಯ್ಯ ಮಹಾಸ್ವಾಮಿಗಳ ಬೃಹನ್ಮಠದಲ್ಲಿ ಜಾತ್ರಾ ಮಹೋತ್ಸವ, ಶ್ರೀ ಬಸಯ್ಯ ಅಜ್ಜನವರ ಜಾತ್ರೆ ಹಾಗೂ ಶ್ರೀ ಷಡಕ್ಷರಯ್ಯ ಸ್ವಾಮಿಗಳ 27ನೇ ಪುಣ್ಯಾರಾಧನೆ ನಿಮಿತ್ತ ಕುಂಭ ಮೆರವಣಿಗೆ ಹಾಗೂ ಅಗ್ಗಿ ಉತ್ಸವ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ಜರುಗಿದವು.

ಬೃಹನ್ಮಠದಲ್ಲಿ ದೇವಿ ಪಾರಾಯಣ, ಶ್ರೀ ಬಸಯ್ಯ ಅಜ್ಜನವರ ತಪೋಗದ್ದುಗೆಗೆ ಮಹಾರುದ್ರಾಭಿಷೇಕ ನಡೆಯಿತು. ಅಗ್ಗಿ ಉತ್ಸವ ಮಠದಿಂದ ಆರಂಭಗೊಂಡು ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಗಂಗಾಪೂಜೆ ನಡೆಯಿತು. ಜಾತ್ರೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ನಡೆದ ಮಹಿಳೆಯರ ಕುಂಭೋತ್ಸವ, ನಂದಿಕೋಲು, ಪಾಲಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ಬಂದು ತಲುಪಿತು.

ನಂತರ ಪುರವಂತರಿಂದ ಅಗ್ಗಿ ಪ್ರವೇಶ ನಂತರ ಶ್ರೀದೇವಿಗೆ ಉಡಿ ತುಂಬಿ ಮಹಾಪೂಜೆ ನೆರವೇರಿಸಲಾಯಿತು. ಷಡಕ್ಷರಯ್ಯ ಮಠದ ಶ್ರೀ ಅಯ್ಯಪ್ಪಯ್ಯ ಹಿರೇಮಠ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯ ನಡೆದವು. ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು, ರೋಣದ ವಿಶ್ವನಾಥ ದೇವರು, ಕಂದಕೂರು ಕಲ್ಮಠದ ಸಿದ್ದಲಿಂಗಯ್ಯ ಸ್ವಾಮಿಗಳು, ಮೈಲಾರಲಿಂಗೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಮತಗಿ, ಗುಳೇದಗುಡ್ಡ, ಹುನಗುಂದ, ಹರದೊಳ್ಳಿ ವಿವಿಧ ಕಡೆಗಳಿಂದ ಅನೇಕ ಜನಪದ ವಾದ್ಯ ಮೇಳಗಳು ಕುಂಭ ಮೆರವಣಿಗೆಗೆ ವಿಶೇಷ ಕಳೆ ತಂದವು.

ಕಾರ್ಯಕ್ರಮದಲ್ಲಿ ಶರಣಬಸಪ್ಪ ತಾಂಡೂರ, ಹನುಮಂತ ಪಲಮಾರಿ, ಶಂಕರ ಲಕ್ಕುಂಡಿ, ಬಸವರಾಜ ತಾಂಡೂರ, ಶಿವಪ್ಪ ಕೊಕತಿ, ಸಂಗನಬಸಪ್ಪ ಮಾಮನಿ, ಯಮನಪ್ಪ ವಾಲಿಕಾರ, ತಲಗುರದಪ್ಪ ತೊಗಲಂಗಿ, ಈಶ್ವರ ಎಣ್ಣಿ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!