ಮುಂಡರಗಿಯಲ್ಲಿ ಸಂಭ್ರಮದ ಲಕ್ಷ್ಮೀ ಪೂಜೆ

KannadaprabhaNewsNetwork |  
Published : Oct 22, 2025, 01:03 AM IST
ಪೋಟೊ21ಎಂಡಿಜಿ1, ಪಟ್ಟಣದಲ್ಲಿ ಮಂಗಳವಾರ ಸಂಜೆ ಬಸವಾ ಏಜೆನ್ಸಿ ಅಂಗಡಿಯಲ್ಲಿ ಲಕ್ಷ್ಮಿಪೂಜೆ ಜರುಗಿತು. | Kannada Prabha

ಸಾರಾಂಶ

ನಾನಾ ವಾಹನಗಳು, ಯಂತ್ರಗಳನ್ನು ಪೂಜಿಸುವ ಮೂಲಕ ದೀಪಾವಳಿ ಅಮಾವಾಸ್ಯೆ ಪೂಜೆ ನೆರವೇರಿಸಿದರು. ದೀಪಾವಳಿ ಅಂಗವಾಗಿ ಅನೇಕ ಯುವಕರು, ಪಟಾಕಿ, ಸುರಸುರ ಬತ್ತಿ, ಬಾಣಗಳನ್ನು ಹಚ್ಚಿ ಸಂಭ್ರಮಿಸಿದರು.

ಮುಂಡರಗಿ: ದೀಪಾವಳಿ ಅಮಾವಾಸ್ಯೆ ಅಂಗವಾಗಿ ಮಂಗಳವಾರ ಸಂಜೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಸಂಭ್ರಮದಿಂದ ಲಕ್ಷ್ಮೀಪೂಜೆ ನೆರವೇರಿದವು.

ಪಟ್ಟಣದಲ್ಲಿನ ದಿನಸಿ, ಬಂಗಾರ, ಬಟ್ಟೆ, ಎಲೆಕ್ಟ್ರಿಕಲ್, ಗೊಬ್ಬರ, ಸ್ಟೇಶನರಿ, ಹಾಲಿನ ಅಂಗಡಿ, ಕಬ್ಬಿನ, ಸಿಮೆಂಟ್ ಅಂಗಡಿ, ಹೋಟೆಲ್ ಗಳು, ಬುಕ್ ಸ್ಟಾಲ್ ಗಳು, ಫೋಟೋ ಸ್ಟುಡಿಯೋ, ಕಟಿಂಗ್ ಶಾಪ್ ಸೇರಿದಂತೆ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.ನಾನಾ ವಾಹನಗಳು, ಯಂತ್ರಗಳನ್ನು ಪೂಜಿಸುವ ಮೂಲಕ ದೀಪಾವಳಿ ಅಮಾವಾಸ್ಯೆ ಪೂಜೆ ನೆರವೇರಿಸಿದರು. ದೀಪಾವಳಿ ಅಂಗವಾಗಿ ಅನೇಕ ಯುವಕರು, ಪಟಾಕಿ, ಸುರಸುರ ಬತ್ತಿ, ಬಾಣಗಳನ್ನು ಹಚ್ಚಿ ಸಂಭ್ರಮಿಸಿದರು. ಶ್ರದ್ಧಾ ಭಕ್ತಿಯಿಂದ ಲಕ್ಷ್ಮೀ ಪೂಜೆ

ಲಕ್ಷ್ಮೇಶ್ವರ: ದೀಪಾವಳಿ ಅಮಾವಾಸ್ಯೆ ನಿಮಿತ್ತ ತಾಲೂಕಿನಾದ್ಯಂತ ಮಂಗಳವಾರ ಲಕ್ಷ್ಮೀ ಪೂಜೆ ಶ್ರದ್ಧಾ ಭಕ್ತಿಯಿಂದ ನೆರವೇರಿದವು.ಈ ಬಾರಿ ಸೋಮವಾರ ಮತ್ತು ಮಂಗಳವಾರ ಅಮಾವಾಸ್ಯೆ ಬಂದಿದ್ದು, ಹೀಗಾಗಿ ಮುತ್ತೈದೆಯರಿಗೆ ಉಡಿ ತುಂಬುವವರು ಸೋಮವಾರ ಅಮಾವಾಸ್ಯೆ ಆಚರಿಸಿದರು.ದೀಪಾವಳಿ ಅಮಾವಾಸ್ಯೆ ಲಕ್ಷ್ಮೀ ದೇವಿಗೆ ಮೀಸಲು. ಎಲ್ಲರ ಮನೆಗಳಲ್ಲಿ ಲಕ್ಷ್ಮೀ ಪೂಜೆ ಕಳೆಗಟ್ಟಿತ್ತು. ಕಬ್ಬು, ಬಾಳೆಕಂಬ, ವಿವಿಧ ಹೂವು, ಆಭರಣಗಳಿಂದ ಲಕ್ಷ್ಮೀಯನ್ನು ಸಿಂಗರಿಸಲಾಗಿತ್ತು.

ಮುತ್ತೈದೆಯರನ್ನು ಕರೆಸಿ ಪೂಜೆ ಮಾಡುವವರು ಅಮಾವಾಸ್ಯೆ ಹಿಂದಿನ ದಿನ ಮುತ್ತೈದೆಯರಿಗೆ ಹೇಳಿ ಬರುತ್ತಾರೆ. ಅಂದರೆ ಪೂಜೆ ಆಗುವವರೆಗೆ ಅವರು ಉಪವಾಸ ಇದ್ದು, ಪೂಜೆ ನಂತರ ಊಟ ಮಾಡುವುದು ಸಂಪ್ರದಾಯ.ಭಕ್ತಿಯ ಹಾಡುಗಳನ್ನು ಹಾಡುವುದರ ಮೂಲಕ ಲಕ್ಷ್ಮೀ ದೇವಿಯನ್ನು ಆಹ್ವಾನ ಮಾಡಿಕೊಂಡು ನಂತರ ಪೂಜೆ ಸಲ್ಲಿಸಲಾಯಿತು. ಕರಿಗಡುಬು, ಹೋಳಿಗೆ, ಸಂಡಿಗೆ, ಹಪ್ಪಳ, ಕುಸುಬೆಯಿಂದ ಸಿದ್ಧಪಡಿಸಿದ ಅಕ್ಕಿ ಹುಗ್ಗಿಯನ್ನು ದೇವಿಗೆ ನೈವೇದ್ಯ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ