ರಾಣಿಬೆನ್ನೂರು: ನಗರದ ಕೆಎಂಪಿ ಸರ್ಕಲ್ ಬಾಟ ಶೋ ರೂಮ್ ಹತ್ತಿರ ಅಳವಡಿಸಿರುವ ಹಜರತ್ ಟಿಪ್ಪು ಸುಲ್ತಾನ್ ಸರ್ಕಲ್ ಬೋರ್ಡ್ ತೆರವುಗೊಳಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಮಂಗಳವಾರ ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು. ಟಿಪ್ಪು ಸುಲ್ತಾನ್ ಹಿಂದೂ ವಿರೋಧಿಯಾಗಿದ್ದು ಹಲವಾರು ಹಿಂದೂ ದೇವಾಲಯ ಗಳನ್ನು ನಾಶ ಮಾಡಿ ವಶಪಡಿಸಿಕೊಂಡಿರುತ್ತಾನೆ. ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಿ ತನ್ನ ಆಸ್ಥಾನದ ಅಧಿಕಾರಿಗಳಿಗೆ ಮಾರಾಟ ಮಾಡಿರುತ್ತಾನೆ. ಇವನು ಒಬ್ಬ ಮತಾಂಧ, ಅತ್ಯಾಚಾರಿ, ಹಿಂದೂ ವಿರೋಧಿಯಾಗಿರುವ ಕಾರಣ ಈ ವ್ಯಕ್ತಿಯ ಹೆಸರಿನ ನಾಮಫಲಕವನ್ನು ತೆರವುಗೊಳಿಸಬೇಕು. ಇದರ ಬದಲಾಗಿ ಆ ಜಾಗದಲ್ಲಿ ಸಂತ ಶಿಶುನಾಳ ಶರೀಫ್, ಅಬ್ದುಲ್ ಕಲಾಂ. ಇಬ್ರಾಹಿಂ ಸುತಾರ್ ನಾಮಫಲಕ ಅಳವಡಿಸಿದಲ್ಲಿ ಅದಕ್ಕೆ ನಮ್ಮ ಸಂಘಟನೇ ವತಿಯಿಂದ ಬೆಂಬಲ ಸುಚಿಸುತ್ತೇವೆ. ಆದ್ದರಿಂದ ಕೂಡಲೇ ಟಿಪ್ಪು ಸುಲ್ತಾನ್ ಹೆಸರಿನ ನಾಮಫಲಕ ತೆರವುಗೊಳಿಸಬೇಕು. ಇಲ್ಲವಾದರೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ನಿಮ್ಮ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ಹಾಗೂ ಧರಣಿಯನ್ನು ಮಾಡಲಾಗುವುದು. ಈ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಹದೆಗೆಟ್ಟರೆ ಅದಕ್ಕೆ ನೀವೇ ನೇರ ಹೊಣೆ ಆಗಿರುತ್ತಿರಿ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಸಂಘಟನೆಯ ತಾಲೂಕು ಸಂಚಾಲಕ ನಾಗರಾಜ ಕೊರವರ, ಸಹ ಸಂಚಾಲಕ ವಿನಯಗೌಡ ಬಾಳನಗೌಡ್ರ, ಬೀರೇಶ ಗುಡಿಗೇರ, ಬಿರೇಶ ಮೆಡ್ಲೆರಿ, ದಿಲೀಪ್ ಕಾಟಿ, ಪ್ರಶಾಂತ್ ಕುರುಬರ, ಶ್ರೀಕಾಂತ ವಿಜಾಪುರ, ಶ್ಯಾಮ್, ಲಕ್ಷ್ಮಣ, ರಾಜು ಬಣಕಾರ, ಅನಿಲ ಮಳವಳ್ಳಿ, ಶಶಿ ಬಳ್ಳಾರಿ, ಜಯರಾಮ್ ಕುಂದಾಪುರ, ಮಾಲತೇಶ ಗೌಡರ, ಕಾಂತೇಶ ಡಿ., ಶ್ರೀಕಾಂತ ಕೆ ಹಾಗೂ ಸರ್ವ ಹಿಂದೂ ಸಮಾಜದ ಮುಖಂಡರು ಇದ್ದರು.