ಚಿಕ್ಕಬಳ್ಳಾಪುರದಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಡಗರ

KannadaprabhaNewsNetwork |  
Published : Nov 09, 2026, 01:15 AM IST
ಸಿಕೆಬಿ-2 ನಗರದ ಜಾಲಾರಿ ಗಂಗಮ್ಮ ದೇಗುಲದಲ್ಲಿ ನಡೆದ ಕೇದಾರೇಶ್ವರ ವ್ರತದಲ್ಲಿ ನೂಮುದಾರಗಳನ್ನು ನೋಮುತ್ತಿರುವ ದಂಪತಿಗಳು | Kannada Prabha

ಸಾರಾಂಶ

ಬಿಬಿ ರಸ್ತೆಯ ಖಾಸಗಿ ಲೇಔಟ್‌ನಲ್ಲಿ ಪಟಾಕಿ ಅಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತು ನಾನಾ ರೀತಿಯ ಪಟಾಕಿ ಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಹಾಗೂ ಮಣ್ಣಿನ ಹಣತೆಗಳನ್ನು ಕೊಂಡುಕೊಳ್ಳುವ ದೃಶ್ಯ ಕಂಡುಬಂತು.

ಕೆಲವರಿಂದ ಭಾನುವಾರವೇ ಹಬ್ಬ ಆಚರಣೆ । ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ । ಪಟಾಕಿ ಅಂಗಡಿಗಳ ಮುಂದೆ ಗ್ರಾಹಕರ ಸಾಲು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೆಲವರಿಂದ ಭಾನುವಾರವೇ ಸಂಭ್ರಮದಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ನಗರ ಸೇರಿದಂತೆ ಜಿಲ್ಲೆಯೆಲ್ಲೆಡೆ ಭಾನುವಾರ ಸಾರ್ವಜನಿಕರು ಸಂಭ್ರಮದಿಂದ ಆಚರಿಸಿದರು.

ಬರದ ನಡುವೆಯೂ ಬೆಳಕಿನ ಹಬ್ಬದ ಪ್ರಯಕ್ತ ನಗರದ ಬಜಾರ್‌ ರಸ್ತೆ, ಸಂತೇಪೇಟೆ, ನಗರಸಭೆಯ ಖಾಸಗಿ ಬಸ್​ ನಿಲ್ದಾಣ, ಬಿಬಿ ರಸ್ತೆ, ಎಂಜಿ ರಸ್ತೆಗಳಲ್ಲಿ ಹೂವಿನ ವ್ಯಾಪಾರ, ಹಣ್ಣು, ನೋಮುದಾರ, ತರಕಾರಿ ಹಾಗೂ ಬಾಳೆಎಲೆ, ಕಂದುಗಳ ವ್ಯಾಪಾರ ಜೋರಾಗಿಯೇ ಇತ್ತು. ನಗರದ ಬಿಬಿ ರಸ್ತೆಯ ಖಾಸಗಿ ಲೇಔಟ್‌ನಲ್ಲಿ ಪಟಾಕಿ ಅಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತು ನಾನಾ ರೀತಿಯ ಪಟಾಕಿ ಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಹಾಗೂ ಮಣ್ಣಿನ ಹಣತೆಗಳನ್ನು ಕೊಂಡುಕೊಳ್ಳುವ ದೃಶ್ಯ ಕಂಡುಬಂತು.

ದೇವಾಲಯಗಳಲ್ಲಿ ವಿಶೇಷ ಪೂಜೆ:

ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಗಂಗಮ್ಮ ದೇವಾಲಯ, ವೇಣುಗೋಪಾಲಸ್ವಾಮಿ ದೇವಾಲಯ, ಎಚ್‌.ಎಸ್.ಗಾರ್ಡನ್‌ನ ಸಾಯಿಬಾಬಾ, ಸುಬ್ರಹ್ಮಣ್ಯ, ಶನಿ (ಎಸ್ಎಸ್ಎಸ್) ದೇವಾಲಯ,ಮುನಿಸಿಪಲ್‌ ಬಡಾವಣೆಯ ಸಾಯಿ ದೇಗುಲ, ವಾಪಸಂದ್ರದ ರಂಗನಾಥ ದೇವಾಲಯ, ತಾಲೂಕಿನ ನಂದಿ ಗ್ರಾಮದ ಇತಿಹಾಸ ಪ್ರಸಿದ್ಧ ಭೋಗ ನಂದೀಶ್ವರ, ರಂಗಸ್ಥಳದ ರಂಗನಾಥ ದೇವಾಲಯ ಅರೂರಿನ ಶ್ರೀ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ, ತಾಲೂಕಿನ ಹಲವಾರು ದೇವಾಲಯಗಳಲ್ಲಿ ಕೇದಾರೇಶ್ವರನ ಕಳಶ ಸ್ಥಾಪಿಸಿ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ದೀಪಾವಳಿಯ ನೋಮು ಇರುವವರು ನೋಮುದಾರ ,ಕಜ್ಜಾಯ,ಬಾಳೆಹಣ್ಣು,ಎಲೆಅಡಿಕೆ,ಅಡಿಕೆ ಕಾಯಿ, ಹರಿಶಿಣದ ಕೊಂಬು ಹೂ ಮತ್ತಿತರ ಪೂಜಾ ಸಾಮಗ್ರಿಗಳೊಂದಿಗೆ ಕುಟುಂಬ ಸಮೇತ ತೆರಳಿ ಕೇದಾರೇಶ್ವರ ವ್ರತಾಚರಣೆಯಲ್ಲಿ ಪಾಲ್ಗೊಂಡು, ಕೇದಾರೇಶ್ವರ ಕಥಾ ಶ್ರವಣ ಮಾಡಿ, ಪೂಜೆ ಸಲ್ಲಿಸಿ, ನೋಮುದಾರ ಕೈಗೆ ಕಟ್ಟಿಕೊಂಡು ಹಬ್ಬಾಚರಣೆಗೆ ನಾಂದಿ ಹಾಡಿದರು. ನಗರದ ನಾನಾ ಬಡಾವಣೆಗಳ ಶಿವ ದೇವಾಲಯ, ಗಣೇಶ ದೇವಸ್ಥಾನ, ಆಂಜನೇಯಸ್ವಾಮಿ ದೇವಾಲಯ, ಕೃಷ್ಣ ಮಂದಿರ, ಸಾಯಿ ಬಾಬಾ ಮಂದಿರ ಸೇರಿದಂತೆ ನಾನಾ ದೇವಸ್ಥಾನಗಳಲ್ಲಿ, ಮನೆ ಮನೆಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಸ್ಥಾನ ಹಾಗೂ ಮನೆಗಳಲ್ಲಿ ಮಣ್ಣಿನ ದೀಪ ಹಚ್ಚುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.ಹಬ್ಬದ ಶುಭಾಶಯ ವಿನಿಮಯ:

ಮನೆ ಮುಂದೆ, ಅಂಗಡಿಗಳ ಮುಂದೆ ತಳಿರು ತೋರಣ, ರಂಗೋಲಿ, ಬಾಳೆ ಕಂದು ಹಾಗೂ ಹೂವುಗಳಿಂದ ಅಲಂಕರಿಸಿದ್ದರು. ಅಲ್ಲದೇ ಬಣ್ಣಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕರಿಸಿ ಸಂಭ್ರಮಿಸಿದರು. ಮೊಬೈಲ್‌ ಅಂಗಡಿ, ದಿನಸಿ ಅಂಗಡಿ, ಬಟ್ಟೆ ಅಂಗಡಿ, ಜ್ಯೂವೆಲರ್ಸ್‌ ಸೇರಿದಂತೆ ಇನ್ನಿತರ ಕಡೆ ಲಕ್ಷ್ಮೀ ಪೂಜೆ ನೆರವೇರಿಸಿ, ನಂತರ ಸಿಹಿ ಹಂಚುವ ಮೂಲಕ ದೀಪಾವಳಿ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡು ಅರ್ಥಪೂರ್ಣವಾಗಿ ಹಬ್ಬ ಆಚರಿಸಿದರು. ಅಲ್ಲದೇ ಮಕ್ಕಳು ನಾನಾ ಬಗೆಯ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಹೆಚ್ಚಿನ ಗ್ರಾಹಕರು ದಿಪಾವಳಿ ದಿನವೇ ವಾಹನಗಳ ಡೆಲಿವರಿ ಕೇಳಿದ್ದು, ನಮ್ಮ ಷೋರೂಮ್‌ನಿಂದಲೇ ಈ ಎರಡು ದಿನಗಳಲ್ಲಿ ಐದುನೂರಕ್ಕೂ ಅಧಿಕ ಬೈಕ್ ಗಳನ್ನು ಡೆಲಿವರಿ ನೀಡಬೇಕಿದೆ, ಎಂದು ಪ್ರತಿಷ್ಠಿತ ಬೈಕ್ ಷೋರೂಮ್‌ವೊಂದರ ಸಿಬ್ಬಂದಿ ತಿಳಿಸಿದರು.

ದಿಪಾವಳಿಯ ಮೂರು ದಿನಗಳಲ್ಲಿ ಮಾರುತಿ ಸುಜುಕಿ, ನೆಕ್ಸಾ, ಸುಜುಕಿ, ಟಾಟಾ,ಮಹೇಂದ್ರ, ಟೊಯೋಟಾ ,ಕಿಯಾಗಳ ಕಾರ್ ಶೋರೂಂಗಳಲ್ಲಿ ಪ್ರತಿ ಶೋರೂಂ 150 ಕ್ಕೂ ಹೆಚ್ಚು ಕಾರುಗಳನ್ನು ಡಿಲಿವರಿ ನೀಡಲಾಗುತ್ತಿದೆ ಎಂದು ಕಾರ್ ಶೋರೂಂ ಎಕ್ಸಿಕ್ಯೂಟೀವ್ ಪ್ರತಿನಿಧಿಗಳು ಹೇಳಿದರು

ಮೂರು ದಿನಗಳ ಕಾಲ ಆಚರಣೆ: ಉತ್ಸವಗಳಲ್ಲಿ ಅತ್ಯಂತ ಸಂಭ್ರಮದ ಹಬ್ಬ. ದೀಪಗಳ ಹಬ್ಬವಾಗಿದ್ದು, ಮೂರು ದಿನಗಳ ಕಾಲ ಆಚರಣೆಯ ಮಾಡಲಿದ್ದು, ಮೊದಲ ದಿನವಾದ ಭಾನುವಾರ ಜಿಲ್ಲೆಯಾದ್ಯಂತ ಬೆಳಕನ್ನು ಮೂಡಿಸಿ ಸಂತೋಷ, ಸಂಭ್ರಮದ ವಾತಾವರಣವನ್ನು ಉಂಟು ಮಾಡಿತು. ಮನೆ ಮನೆಗಳಲ್ಲಿ ಸಂಭ್ರಮ ತರುವ ಬೆಳಕಿನ ಹಬ್ಬದಲ್ಲಿ ನಗರ ಸೇರಿದಂತೆ ಜಿಲ್ಲೆಯ ಜನತೆ ಮಿಂದೆದ್ದರು. ಕೆಲವೆಡೆ ಪಟಾಕಿ ಸಿಡಿಸದೆ ಪರಿಸರಸ್ನೇಹಿ ದೀಪಾವಳಿ ಹಬ್ಬ ಆಚರಿಸಿ ಗಮನ ಸೆಳೆದರು. ಸಮೃದ್ಧಿ, ಸಂತೋಷ ಹಾಗೂ ಸಂಪತ್ತಿನ ಸಂಕೇತವಾದ ಬೆಳಕಿನ ಹಬ್ಬ ಪ್ರತೀ ವರ್ಷದಂತೆ ಈ ಬಾರಿಯೂ ಜನರಿಗೆ ಸಂತೋಷ, ಸಂಭ್ರಮ ತಂದಿದೆ.ಸಿಕೆಬಿ-2 ನಗರದ ಜಾಲಾರಿ ಗಂಗಮ್ಮ ದೇಗುಲದಲ್ಲಿ ನಡೆದ ಕೇದಾರೇಶ್ವರ ವ್ರತದಲ್ಲಿ ನೂಮುದಾರಗಳನ್ನು ನೋಮುತ್ತಿರುವ ದಂಪತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ