ದೇವತೆಗಳ ಪಲ್ಲಕ್ಕಿ ಉತ್ಸವದೊಂದಿಗೆ ತೆರೆ

KannadaprabhaNewsNetwork |  
Published : Oct 22, 2026, 02:30 AM IST
ಫೋಟೋವಿವರ- (21ಎಚ್‌ಪಿಟಿ6) ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ವಿಜಯ ದಶಮಿಯ ಅಂಗವಾಗಿ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ, ಹೊರವಲಯದ ಬನ್ನಿಮರಕ್ಕೆ ತೆರಳಿ ಪೂಜೆ ಸಲ್ಲಿಸಿದರು | Kannada Prabha

ಸಾರಾಂಶ

ಉತ್ಸವ ಮೂರ್ತಿಗಳ ಪಲ್ಲಕ್ಕಿಗಳು ತೆರಳಿ ಪೂಜಿಸಿದ ನಂತರ ಪಟ್ಟಣದ ಬಹುತೇಕ ಜನರು ಬನ್ನಿ ವಿನಿಮಯ ಮಾಡಿಕೊಂಡು ಬನ್ನಿ ತಗೊಂಡು ಬಂಗಾರದಾಂಗ ಇರೊಣ ಎಂದು ಬನ್ನಿ

ಮರಿಯಮ್ಮನಹಳ್ಳಿ: ವಿಜಯದಶಮಿ ಅಂಗವಾಗಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ದೇವಸ್ಥಾನಗಳಲ್ಲಿ ದಿನಕ್ಕೊಂದು ಅಲಂಕಾರ, ಪೂಜೆ​ ಪುನಸ್ಕಾರಗಳು ಕಳೆದ 10 ದಿನಗಳ ಕಾಲ ನಡೆದವು.

ಪಟ್ಟಣದಲ್ಲಿ ವಿಜಯದಶಮಿ (ದಸರಾ) ಯನ್ನು ಗ್ರಾಮ ದೇವತೆಗಳ ಆರಾಧನೆ, ಅಲಂಕಾರ, ಪುರಾಣ, ಪ್ರವಚನಗಳೊಂದಿಗೆ 10 ದಿನಗಳ ನವರಾತ್ರಿಗೆ ಮಂಗಳವಾರ ತೆರೆ ಎಳೆಯಲಾಯಿತು.

ಪಟ್ಟಣದಲ್ಲಿ ಮಂಗಳವಾರ ಆಯುಧಪೂಜೆ, ಬುಧವಾರ ವಿಜಯದಶಮಿ ಆಚರಿಸಲಾಯಿತು. ಆಯುಧ ಪೂಜೆಯ ನಿಮಿತ್ತ ವಾಹನ, ಅಂಗಡಿಕಾರರು ವಿವಿಧ ಕಾಯಕದಾರರು ತಮ್ಮ ಉದ್ಯೋಗದ ವಸ್ತು, ವಾಹನಗಳು,ಪರಿಕರ ಪೂಜೆ ಗೈದರು.

ವಿಜಯದಶಮಿ ನಿಮಿತ್ತ ಪಟ್ಟಣದ 5ನೇ ವಾರ್ಡ್‌ನ ಬನ್ನಿಮಹಾಕಾಳಿಕಾದೇವಿ ರಥೋತ್ಸವ ನಡೆಯಿತು. ನಂತರ ಆರಾಧ್ಯದೈವಗಳಾದ ಶ್ರೀಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ಶ್ರೀಆಂಜನೇಯಸ್ವಾಮಿಗಳು, ಶ್ರೀ ವೆಂಕಟೇಶ್ವರಸ್ವಾಮಿ, ಕಾಳಿಕಾಕಮಟೇಶ್ವರ ಪಲ್ಲಕ್ಕಿ ಉತ್ಸವ, ಹೊರವಲಯದ ಬನ್ನಿಮರಕ್ಕೆ ಉಭಯ ಸ್ವಾಮಿಗಳ ಹಾಗೂ ಪಟ್ಟಣದ ದೇವತೆಗಳ ಉತ್ಸವ ಮೂರ್ತಿಗಳ ಪಲ್ಲಕ್ಕಿಗಳು ತೆರಳಿ ಪೂಜಿಸಿದ ನಂತರ ಪಟ್ಟಣದ ಬಹುತೇಕ ಜನರು ಬನ್ನಿ ವಿನಿಮಯ ಮಾಡಿಕೊಂಡು ಬನ್ನಿ ತಗೊಂಡು ಬಂಗಾರದಾಂಗ ಇರೊಣ ಎಂದು ಬನ್ನಿ ವಿನಿಮಯ‌ ಮಾಡಿಕೊಂಡು ಸಂಭ್ರಮಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಹನ ನಿಲ್ದಾಣ ಮೇಲ್ಛಾವಣಿ ಶೀಘ್ರ ಲೋಕಾರ್ಪಣೆ: ಮಂತರ್ ಗೌಡ
ಸೋಮವಾರಪೇಟೆ: ದಸರಾ ಜನೋತ್ಸವ ಸಂಭ್ರಮ