ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಪಿರಿಯಾಪಟ್ಟಣದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವಣ್ಣ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಸವಣ್ಣ ಅವರ ಪರಿಕಲ್ಪನೆ 12ನೇ ಶತಮಾನದಲ್ಲಿಯೇ ಮನುಷ್ಯ ಜನ್ಮ ಸಮಾನತೆ ಗಾಗಿ ಹೋರಾಡಿದವರು, ಮೇಲು-ಕೀಳು ಇವುಗಳ ವಿರುದ್ಧ ಹೋರಾಡಿ ಎಲ್ಲರೂ ಸಮಾನರು ಎಂಬುದನ್ನು ಪ್ರಪಂಚಕ್ಕೆ ಸಾರಿದವರು ಎಂದರು.
ಗಂಡು-ಹೆಣ್ಣು ಇಬ್ಬರು ಸಮಾನರು ಎಂಬುದನ್ನು ಪ್ರಪಂಚಕ್ಕೆ ಸಾರಿದವರು ಹಾಗೂ ಅವರು ಸಮಾಜಕ್ಕೆ ಕೊಟ್ಟಂತಹ ಕೊಡುಗೆಗಳು ಎಂದೆಂದಿಗೂ ಅಜರಾಮರವಾಗಿ ಪ್ರಪಂಚಕ್ಕೆ ಮಾರ್ಗದರ್ಶನವಾಗಿದೆ. ಇವರಿಗೆ ರಾಜ್ಯ ಸರ್ಕಾರವು ಸಾಂಸ್ಕೃತಿಕ ರಾಯಭಾರಿಯಾಗಿ ಆದೇಶ ಹೊರಡಿಸಿರುವುದು ಎಲ್ಲರಿಗೂ ಗೌರವ ತರುವ ವಿಷಯವಾಗಿದೆ ಎಂದರು.ಪುಟ್ಟರಾಜು. ಕುಮಾರ್. ರವಿ. ಚಂದ್ರಶೇಖರ್. ನಟರಾಜ್. ಕುಮಾರ್. ಸುರೇಶ್ ಇದ್ದರು.