ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್ ಸಿ ಸಿ ಘಟಕ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಜೋಡಿ ಪ್ರತಿಮೆಗಳಿಗೆ ಪುಷ್ಪರ್ಚಾನೆ ಮಾಡುವ ಮೂಲಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜನ್ಮ ದಿನವನ್ನುಆಚರಿಸಲಾಯಿತು.ಈ ಸಂದರ್ಭ ಕಾರ್ಯಕ್ರಮಕ್ಕೆ ಹಿರಿಯ ವೈದ್ಯರಾದ ಡಾ.ಕಾಳಿಮಾಡ ಶಿವಪ್ಪ ಮಾತನಾಡಿ ಕಾವೇರಿ ಮಣ್ಣಿನಲ್ಲಿ ಜನಿಸಿದ ಕಾರ್ಯಪ್ಪ ನವರು ಕೊಡಗಿನ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದರು. ಭಾರತೀಯ ಸೇನೆಯಲ್ಲಿ ಶಿಸ್ತನ್ನು ಮೂಡಿಸಿದ ಮಹಾನುಭಾವ ಕಾರ್ಯಪ್ಪನವರು, ಶಿಸ್ತಿನೊಂದಿಗೆ ಸಮಯಪಾಲನೆಗೆ ಅತ್ಯಂತ ಮಹತ್ವವನ್ನು ಕೊಡುತ್ತಿದ್ದರು. ಅಪ್ರತಿಮ ದೇಶ ಪ್ರೇಮಿಯಾಗಿದ್ದ ಕಾರ್ಯಪ್ಪ ಅವರ ಬದುಕಿನ ರೀತಿ ಇಂದಿನ ಯುವ ಜನತೆಗೆ ದಾರಿ ದೀಪವಾಗಿದೆ. ಅವರ ಜೀವನ ಚರಿತ್ರೆಯನ್ನು ಓದುವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಷ್ಟ್ರ ರಕ್ಷಣೆಗೆ ಕಂಕಣಬದ್ಧರಾಗಿರಬೇಕು ಎಂದರು.
ಈ ಸಂದರ್ಭ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ ನ ಉಪಾಧ್ಯಕ್ಷ ಮಾಚಿಮಾಡ ರವೀಂದ್ರ, ಸಮಾಜ ಸೇವಕ ಮುರುಗೇಶ್, ಗೋಣಿಕೊಪ್ಪಲು ಇಗ್ಗುತಪ್ಪ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ದೇವಯ್ಯ, ಎನ್ ಸಿಸಿ ಅಧಿಕಾರಿ ಲೆಫ್ಟಿನೆಂಟ್ ಎಂ. ಆರ್. ಅಕ್ರಮ್, ಲೆಫ್ಟಿನೆಂಟ್. ಐ. ಡಿ. ಲೇಪಾಕ್ಷಿ, ಕನ್ನಡ ಉಪನ್ಯಾಸಕಿ ಎಸ್. ಎಂ. ರಜನಿ, ಸ್ಥಳೀಯರು ಹಾಗೂ ಎನ್ ಸಿ ಸಿ ಕೆಡೆಟ್ ಗಳು ಇದ್ದರು.ಎನ್ ಸಿ ಸಿ ಕೆಡೆಟ್ ಪುಣ್ಯ ಚೋಂದಮ್ಮ ಫೀ. ಮಾ. ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕ ಮಾತನಾಡಿದರು. ದೀಪ ಪ್ರಾರ್ಥಿಸಿ, ಮನ ಕೆ. ಆರ್ ಸ್ವಾಗತಿಸಿ, ಮಾಚಿಮಾಡ ರವೀಂದ್ರ ವಂದಿಸಿದರು.