ದುಗ್ಗಳ ಸದಾನಂದ
ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಗುರುವಾರದ ಪಂದ್ಯಗಳಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂತು ಪುದಿಯೋಕ್ಕಡ ಮತ್ತು ಬಲ್ಲಚಂಡ ತಂಡಗಳ ನಡುವೆ ಬಿರುಸಿನ ಹೋರಾಟ ನಡೆಯಿತು. ಪಂದ್ಯದಲ್ಲಿ ಎರಡು ತಂಡಗಳು 1-1ಅಂತರದ ಸಮಬಲದ ಪ್ರದರ್ಶನ ನಡೆಸಿದವು. ಬಳಿಕ ಟೈ ಬ್ರೇಕರ್ ನಲ್ಲಿ ಪುದಿಯೋಕ್ಕಡ ತಂಡ 5 ಗೋಲು ಗಳಿಸಿದರೆ ಬಲ್ಲಚಂಡ ತಂಡ ಆಟಗಾರರು 6 ಗೋಲು ಹೊಡೆಯುವುದರ ಮೂಲಕ ಜಯ ಸಾಧಿಸಿದರು.ಅಂಜಪರವಂಡ ಮತ್ತು ಅರಮಣಮಾಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಪಂದ್ಯದಲ್ಲಿ ಎರಡು ತಂಡಗಳು ಗೋಲು ಗಳಿಸಲಿಲ್ಲ. ಬಳಿಕ ಟೈ ಬ್ರೇಕರ್ ನಲ್ಲಿ ಆರಮಣಮಾಡ 4-2ರಿಂದ ಅಂಜಪರವಂಡ ವಿರುದ್ಧ ಗೆಲುವು ಸಾಧಿಸಿತು. ಮುಕ್ಕಾಟಿರ ಮತ್ತು ಸೋಮೆಯಂಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಎರಡು ತಂಡಗಳು ತಲಾ ಎರಡು ಗೋಲು ಗಳಿಸಿದವು. ಬಳಿಕ ನಡೆದ ಟೈ ಬ್ರೇಕರ್ ನಲ್ಲಿ ಸೋಮೆಯಂಡ 4-3 ರಿಂದ ಮುಕ್ಕಾಟಿರ ವಿರುದ್ಧ ಗೆಲುವು ಸಾಧಿಸಿತು.ಉಳಿದಂತೆ ಕೋಳೆರ ಕರೋಟಿರ ವಿರುದ್ಧ 4-1 ರಿಂದ ,ಕೊಲ್ಲೀರ ನಂದೇಟಿರ ವಿರುದ್ಧ 2-1ರಿಂದ ,ನೆಲ್ಲಮಕ್ಕಡ ಮುಕ್ಕಾಟಿರ ವಿರುದ್ಧ 4-0 ಯಿಂದ, ಕುಪ್ಪಂಡ ಚಂದುರ ವಿರುದ್ಧ 3-0ಯಿಂದ ,ಚೆಪ್ಪುಡಿರ ನಾಗಂಡ ವಿರುದ್ಧ 4-0ಯಿಂದ, ಕಂಬೀರಂಡ ಮಣವಟ್ಟಿರ ವಿರುದ್ಧ 2-0 ಯಿಂದ, ಮುಕ್ಕಾಟಿರ (ಹರಿಹರ)ನಾಪಂಡ ವಿರುದ್ಧ 1-0ಯಿಂದ, ಮೂಕೊಂಡ ಮಂಡೇಟಿರ ವಿರುದ್ಧ 4-0ಯಿಂದ ಗೆಲುವು ಸಾಧಿಸಿದವು.
ಇಂದಿನ ಪಂದ್ಯಗಳು:ಮೈದಾನ 1
ಮೈದಾನ 29 ಕ್ಕೆ ಇಟ್ಟೀರ v/s ಮೇರಿಯಂಡ 10 ಕ್ಕೆ ಬೊಳ್ಳೇಪಂಡ v/s ಮಚ್ಚಾರಂಡ 11ಕ್ಕೆ ಮುರುವಂಡ /s ಪೆಮ್ಮಂಡ 12ಕ್ಕೆ ಕಾಡ್ಯಮಾಡ v/s ಮೇಕೇರಿರ1 ಕ್ಕೆ ಚೇನಂಡ v/s ಕುಲ್ಲೇಟಿರ