ಅಪಾರ ಚಿನ್ನ, ಬೆಳ್ಳಿಯ ಕೊಡುಗೆ । ದೇಗುಲಕ್ಕೆ ಕೋಟ್ಯಂತರ ರು. ಆದಾಯ । ಹೆಚ್ಚು ಭಕ್ತರ ಭೇಟಿಗೆ ನೆರವಾದ ಶಕ್ತಿ ಯೋಜನೆಜಿ ದೇವರಾಜುನಾಯ್ಡು
ತಾಲೂಕಿನ ಪ್ರಸಿದ್ಧ ಪುಣ್ಯ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟಕ್ಕೆ 2023 ರಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದು ಕೋಟ್ಯಂತರ ರು. ಆದಾಯ ಹರಿದು ಬಂದಿದೆ.
2023ರ ಜನವರಿಯಿಂದ ಡಿಸೆಂಬರ್ ತನಕ ನಡೆದ ಒಟ್ಟು ಹುಂಡಿ ಎಣಿಕೆಯಲ್ಲಿ 26,18, 28,295 ರು. ಸಂಗ್ರಹವಾಗಿದ್ದು 798 ಗ್ರಾಂ ಚಿನ್ನ, 27 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಭಕ್ತರು ಈ ವರ್ಷ ಮಾದಪ್ಪನಿಗೆ ಸಲ್ಲಿಸಿದ್ದಾರೆ.ಚಿನ್ನದ ರಥೋತ್ಸವ ಮೂಲಕ ಹೆಚ್ಚು:
ಶಕ್ತಿ ಯೋಜನೆ ಪ್ರಭಾವ:
ಸಕಲ ಸಿದ್ಧತೆ:
ಮಲೆ ಮಹದೇಶ್ವರ ಬೆಟ್ಟದಲ್ಲಿ ವರ್ಷದ ಕೊನೆಯ ಹೊಸ ವರ್ಷದ 2024ರ ಪ್ರಾರಂಭದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ಹಾಗೂ ವಿವಿಧ ಜಿಲ್ಲೆಗಳ ಮತ್ತು ತಮಿಳುನಾಡಿನಿಂದಲೂ ಸಹ ಲಕ್ಷಾಂತರ ಭಕ್ತರು ಬಂದು ಹೋಗುವ ನಿರೀಕ್ಷೆ ಇರುವುದರಿಂದ ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿದೆ.ಕೋಟ್ಯಧಿಪತಿ ಮಾದಪ್ಪ
ಪ್ರಸಿದ್ಧ ಪುಣ್ಯ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಬರುವ ಮಾದಪ್ಪನ ಭಕ್ತರಿಗೆ ಯಾವುದೇ ಲೋಪ ದೋಷಗಳು ಇಲ್ಲದಂತೆ ಸಕಲ ಸಿದ್ಧತೆ ಮಾಡಲಾಗಿದೆ. 2024ರ ನೂತನ ವರ್ಷಕ್ಕೆ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ಧಾರ್ಮಿಕ ಕ್ಷೇತ್ರದಲ್ಲಿ ಬರುವ ಭಕ್ತರು ಸ್ವಚ್ಛತೆಗೆ ಆದ್ಯತೆ ನೀಡಬೇಕು.
ಸರಸ್ವತಿ, ಕಾರ್ಯದರ್ಶಿ, ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ.ಹನೂರು ಮಹದೇಶ್ವರ ಬೆಟ್ಟದಲ್ಲಿ ವಿವಿಧ ವಿಶೇಷ ದಿನಗಳಲ್ಲಿ ಭಕ್ತ ಜನಸ್ತೋಮ.