10ಕ್ಕೆ ಫ್ರೀಡ್‌ಂ ಪಾರ್ಕ್‌ನಲ್ಲಿ ಹೋರಾಟ

KannadaprabhaNewsNetwork |  
Published : Sep 03, 2025, 01:02 AM IST
ಒಳ ಮೀಸಲಾತಿ ವಿರೋಧಿ ಹೋರಾಟ ಸಮೀತಿಯಿಂದ ಸೆ.10ರಂದು ಬೆಂಗಳೂರು ಚಲೋ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಒಳ‌ ಮೀಸಲಾತಿ ವಿಚಾರದಲ್ಲಿ ಬಂಜಾರಾ, ಭೋವಿ, ಕೊರಚ, ಕೊರಮ ಸಮಾಜಗಳಿಗೆ ಅನ್ಯಾಯವಾಗಿದೆ. ಈ ಅನ್ಯಾಯ ಖಂಡಿಸಿ ಒಳ ಮೀಸಲಾತಿ ವಿರೋಧಿ ಹೋರಾಟ ಸಮಿತಿಯಿಂದ ಸೆಪ್ಟೆಂಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ಮಹೇಂದ್ರ ನಾಯ್ಕ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಒಳ‌ ಮೀಸಲಾತಿ ವಿಚಾರದಲ್ಲಿ ಬಂಜಾರಾ, ಭೋವಿ, ಕೊರಚ, ಕೊರಮ ಸಮಾಜಗಳಿಗೆ ಅನ್ಯಾಯವಾಗಿದೆ. ಈ ಅನ್ಯಾಯ ಖಂಡಿಸಿ ಒಳ ಮೀಸಲಾತಿ ವಿರೋಧಿ ಹೋರಾಟ ಸಮಿತಿಯಿಂದ ಸೆಪ್ಟೆಂಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ಮಹೇಂದ್ರ ನಾಯ್ಕ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ. ನಾಗಮೋಹನದಾಸ ಅವರ ವರದಿಯೇ ಅವೈಜ್ಞಾನಿಕವಾಗಿದ್ದು, ಬಂಜಾರಾ ಸಮಾಜದ ಜನಸಂಖ್ಯೆ ಕೇವಲ 14 ಲಕ್ಷ ಇದೆ ಎಂದು ತೋರಿಸಿದ್ದಾರೆ. ಮೊದಲಿಂದಲೂ ಕಾಂಗ್ರೆಸ್‌ ಸರ್ಕಾರದಲ್ಲಿ ಬಂಜಾರಾ, ಭೋವಿ, ಕೊರಚ, ಕೊರಮ ಈ ನಾಲ್ಕು ಸಮಾಜಗಳಿಗೆ ಅನ್ಯಾಯ ಆಗುತ್ತಿದೆ. ಹಾಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಹೋರಾಟದೊಳಗೆ ಸಿಎಂ, ಸಚಿವರು ಹಾಗೂ ಶಾಸಕರು ಸೇರಿ ಅನ್ಯಾಯ ಸರಿಪಡಿಸಬೇಕು. ಕೇವಲ ಒಂದು ವರ್ಷದ ಸ್ಥಿತಿಗತಿ ತೆಗೆದುಕೊಂಡು ಮೀಸಲಾತಿ ನೀಡುವ ಬದಲಾಗಿ, ಕಳೆದ 70 ವರ್ಷಗಳ ಡಾಟಾ ತೆಗೆದುಕೊಂಡು ನ್ಯಾಯ ಒದಗಿಸಿ ಎಂದರು.

ಮಾಜಿ ಶಾಸಕ ಮನೋಹರ ಐನಾಪುರ ಮಾತನಾಡಿ, ಆಯೋಗದ ಅವೈಜ್ಞಾನಿಕ ವರದಿಯನ್ನು ಕೈಬಿಟ್ಟು, ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಗಂಭೀರ ಸ್ವರೂಪದ್ದಾಗುತ್ತದೆ ಎಂದರು.

ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಬಂಜಾರ, ಭೋವಿ, ಕೊರಚ, ಕೊರಮ ಸಮಾಜಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ. ಇದನ್ನು ಹೀಗೆ ಮುಂದುವರೆಸಿದರೆ ಅನ್ಯಾಯಕ್ಕೊಳಗಾದ ಸಮಾಜಗಳು ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಸೋಮಲಿಂಗ ಸ್ವಾಮೀಜಿ ಮಾತನಾಡಿ, ಯಾರನ್ನೋ ಓಲೈಕೆ ಮಾಡಲು ಶೇಕಡಾವಾರು ಎಂದು ಮಾಡಿ ನಮಗೆಲ್ಲ ಅನ್ಯಾಯ ಮಾಡಿದ್ದಾರೆ. ಯಾವ ತಾಂಡಾಗಳು, ಗ್ರಾಮಗಳು ಅಭಿವೃದ್ಧಿಯಾಗಿವೆ ಎಂಬುದನ್ನು ಅಲ್ಲಿಗೆ ಹೋಗಿ ನೋಡಿದಾಗ ತಿಳಿಯುತ್ತದೆ. ನಮ್ಮ ಜನಾಂಗ ಬೇರೆ ಬೇರೆ ರಾಜ್ಯಗಳಿಗೆ ಗುಳೆ ಹೋಗುತ್ತಾರೆ. ರಾಜ್ಯ ಸರ್ಕಾರ ಡಾ.ಅಂಬೇಡ್ಕರ ಸಂವಿಧಾನವನ್ನು, ಸಂವಿಧಾನದ ಆಶಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. 101 ಸಮುದಾಯವನ್ನು ಒಂದುಗೂಡಿಸಿ ಸಾಮರಸ್ಯ ಜೀವನ ಮಾಡುವಂತೆ ಮಾಡಬೇಕಿದೆ. ಒಳ ಮೀಸಲಾತಿಯನ್ನು ಸಮನಾಗಿ ಕೊಡಿ, ಇಲ್ಲವಾದಲ್ಲಿ ಕೈಬಿಡಿ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಜು ಮಹಾರಾಜರು, ಡಿ.ಎಲ್.ಚವ್ಹಾಣ, ರಾಜು ಜಾಧವ, ಸುರೇಶ ಬಿಜಾಪುರ, ಸಂತೋಷ ಚವ್ಹಾಣ, ಮಲ್ಲಿಕಾರ್ಜುನ ನಾಯಕ, ಅನುಸೂಯಾ ಜಾಧವ, ರಾಮು ಅಂಕಲಗಿ, ಸಂತೋಷ ನಾಯಕ ಉಪಸ್ಥಿತರಿದ್ದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ