ಕನ್ನಡಪ್ರಭ ವಾರ್ತೆ ಪಾಂಡವಪುರ
ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಈ ಹಿಂದೆ ಸಿಇಒ ಆಗಿದ್ದ ಎಚ್.ಸಂದೇಶ್, ಹಿಂದಿನ ಕ್ಯಾಷಿಯರ್ ಹಾಗೂ ಈಗ ಸಿಇಒ ಆಗಿರುವ ಕಿರಣ್‌ಕುಮಾರ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಮೇಶ್, ಲೆಕ್ಕ ಪರಿಶೋಧಕ ಪ್ರವೀಣ್‌ಕುಮಾರ್ ಸೇರಿದಂತೆ ಸಂಘದ ನೌಕರರು, ಗ್ರಾಹಕರ ಫಿಗ್ಮಿ ಹಣ ಒಂದೂವರೆ ಕೋಟಿ ಜತೆಗೆ ಇನ್ನಿತರ ಮೂಲಗಳಿಂದ ಸಂಗ್ರಹವಾಗಿದ್ದ 7 ಕೋಟಿಗೂ ಅಧಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಸಂಕಷ್ಟದ ನಡುವೆ ಫಿಗ್ಮಿ ಕಟ್ಟಿದ್ದ ಜನರಿಗೆ ಆಡಳಿತ ಮಂಡಳಿ ಮತ್ತು ನೌಕರರ ವಂಚನೆ ಮಾಡುತ್ತಿದ್ದಾರೆ. ಇದರಿಂದ ಫಿಗ್ಮಿದಾರರು ಹಣ ಹಿಂದಿರುಗಿಸುವಂತೆ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ಕೂಡಲೇ ವಸೂಲಿ ಮಾಡಿ ಸಂಘಕ್ಕೆ ಕಟ್ಟಿರುವ ಹಣವನ್ನು ಮರುಪಾವರಿಸಲು ಸೂಚಿಸುವಂತೆ ಶಾಸಕರಿಗೆ ಮನವಿ ಮಾಡಿದರು.ಸಂಘದ ಷೇರುದಾರ ಎಚ್.ಡಿ.ಶ್ರೀಧರ್ ಮಾತನಾಡಿ, ಸಂಘದಲ್ಲಿ ನಡೆದಿರುವ ಕೋಟಿಗಟ್ಟಲೇ ಅವ್ಯವಹಾರಕ್ಕೆ ಸಂಘದ ಆಡಳಿತ ಮಂಡಳಿ ಮತ್ತು ನೌಕರ ವರ್ಗವೇ ನೇರ ಕಾರಣ. ಜತೆಗೆ ಡಿಸಿಸಿ ಬ್ಯಾಂಕ್, ಸಹಕಾರ ಸಂಘಗಳ ನಿಬಂಧಕ ನಾಗಭೂಷಣ್, ಸಂಘದ ಲೆಕ್ಕ ಪರಿಶೋಧಕ ಪ್ರವೀಣ್ ಕುಮಾರ್ ಅವರ ಕೈವಾಡದಿಂದಲೇ ಕೋಟಿಗಟ್ಟಲೇ ಹಣವನ್ನು ದುರುಪಯೋಗವಾಗಿದೆ ಎಂದು ಆರೋಪಿಸಿದರು.
ಈ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸಂಘದಲ್ಲಿ ನಡೆದಿರುವ ಅವ್ಯವಹಾರ ದೊಡ್ಡ ಮಟ್ಟದಲ್ಲಿದೆ. ಈಗಾಗಲೇ ಹಣ ವಸೂಲಿ ಮಾಡಲು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗಿದೆ. ಆದರೆ, ಅದನ್ನು ಬಹಿರಂಗಪಡಿಸುವಂತಿಲ್ಲ. ಫಿಗ್ಮಿ ಸಂಗ್ರಹಗಾರರ ಸಮಸ್ಯೆ ನಮಗೆ ಅರ್ಥವಾಗುತ್ತದೆ. ಈ ಸಮಸ್ಯೆ ಬಗೆಹರಿಸಲು ತಿಂಗಳುಗಟ್ಟಲೇ ಸಮಯ ಬೇಕು. ಎಲ್ಲವನ್ನು ಕಾನೂನು ರೀತಿಯಲ್ಲಿ ವಸೂಲಿ ಮಾಡಲಾಗುವುದು ಎಂದರು.
ಈ ವೇಳೆ ಸಂಘದ ಅಧ್ಯಕ್ಷ ಬೇವಿನಕುಪ್ಪೆ ಬಿ.ಎನ್.ಯೋಗೇಶ್, ಮಾಜಿ ಅಧ್ಯಕ್ಷ ಶಿವರಾಮು, ಎಚ್.ಡಿ.ಶ್ರೀಧರ, ಬಾಲಗಂಗಾಧರ, ಶಾಂತಿಪ್ರಸಾದ್, ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಫಿಗ್ಮಿ ಏಜೆಂಟರಾದ ನಿಂಗೇಗೌಡ, ಅನಿಲಕುಮಾರ್, ಪ್ರಕಾಶ್ ಇತರರು ಇದ್ದರು.