ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಡಿಪಿಒ, ಅಂಗವಾಡಿಯ ಮೇಲ್ವೀಚಾರಕಿ, ಸಹಾಯಕಿಯರ ವಿರುದ್ಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂತರಸಂತೆಯ ಬಂಗ್ಲಿಹುಂಡಿ ಗ್ರಾಮದ ಅಹಲ್ಯ (3) ಮೃತಪಟ್ಟ ಮಗು.ಅಂಗನವಾಡಿಗಾಗಿ ನಿರ್ಮಿಸಿರುವ ಸಂಪ್ ಅನ್ನು ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಮುಚ್ಚದೆ ತೆರೆದು ಬಿಟ್ಟಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಇದಕ್ಕೆ ಅಂಗನವಾಡಿ ಸಿಬ್ಬಂದಿಯೇ ಮುಖ್ಯ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದರು.
ಇಂತಹ ಒಂದು ದುರ್ಘಟನೆ ನಡೆದಿದ್ದರೂ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಸಿಡಿಪಿಒ ಅವರು ಮಧ್ಯಹ್ನ 12ಕ್ಕೆ ಬಂದಿದ್ದಾರೆ. ಮಕ್ಕಳು ಎಂದರೆ ಇಷ್ಟೊಂದು ಬೇಜವಾಬ್ದಾರಿ ತೋರುತ್ತಾರೆ ಎಂದರೆ ನಾವು ಮಕ್ಕಳನ್ನು ಹೇಗೆ ಅಂಗನವಾಡಿಗೆ ಕಳುಹಿಸುವುದು? ಅಂಗನವಾಡಿ ಬರುವ ಬಡಮಕ್ಕಳು ಎಂದರೆ ಇಷ್ಟೊಂದು ತಾತ್ಸಾರವೇಕೆ? ಎಂದು ಪ್ರಶ್ನಿಸಿದರು. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಆಶಾ ಅವರು ಅಂಗನವಾಡಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಮಗುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಧರಣಿ ಸತ್ಯಗ್ರಹ ಮಾಡುವುದಾಗಿ ಎಚ್ಚರಿಸಿದರು.
ಬಳಿಕ ಮಗುವಿನ ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.ಮಗುವಿನ ತಾಯಿಯಿಂದ ದೂರು ದಾಖಲು
ಇನ್ನು ಘಟನೆಗೆ ಅಂಗನವಾಡಿ ಸಿಬ್ಬಂದಿಗಳೇ ಮುಖ್ಯ ಕಾರಣ ಎಂದು ಆರೋಪಿಸಿ ಮಗುವಿನ ತಾಯಿ ಅಂಜು ಸಿಡಿಪಿಒ ಆಶಾ ಸೇರಿದಂತೆ ಅಂಗನವಾಡಿ ಸಿಬ್ಬಂದಿಗಳ ಮೇಲೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪುರಸಭಾ ಸದಸ್ಯ ಪ್ರೇಮ್ ಸಾಗರ್, ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜ್, ಗ್ರಾಪಂ ಸದಸ್ಯ ಸೋಮೇಶ್, ದಸಂಸ ಸಂಚಾಲಕ ಸಣ್ಣಕುಮಾರ್, ಪ್ರಕಾಶ್, ಚಿಕ್ಕಮಾದು ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ರಾಜನಾಯಕ, ಮುಖಂಡರಾದ ಕಲೀಂ, ನಿಂಗರಾಜು, ಶೇಖರ್, ಬೆಟ್ಟನಾಯ್ಕ, ಉಮೇಶ್, ನಾಗನಾಯಕ, ದಾಸನಾಯ್ಕ, ಅಂಕನಾಯಕ, ನಿಂಗನಾಯ್ಕ ಇದ್ದರು.