ನ್ಯಾಯಾಧೀಕರಣ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ: ಪ್ರತಾಪ ಸಿಂಹ

KannadaprabhaNewsNetwork |  
Published : Jul 30, 2026, 01:15 AM IST
35 | Kannada Prabha

ಸಾರಾಂಶ

ತಮಿಳುನಾಡಿನಲ್ಲಿ ಕಾಂಗ್ರೆಸ್ ಜೋಕರ್ ಕಾರ್ಡ್ ಇದ್ದಂತೆ. ಕಾಂಗ್ರೆಸ್‌ ಪಾಲಿಗೆ ಕರ್ನಾಟಕ ಕಾಮಧೇನು. ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗಿದೆ. ಹೈಕಮಾಂಡ್ ನ ಎಲ್ಲಾ ಆಸೆ ಆಕಾಂಕ್ಷೆ ಪೊರೈಸಲು ಕರ್ನಾಟಕ ಬೇಕು. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಗೆ ಬುದ್ದಿ ಹೇಳುವ ಕೆಲಸವನ್ನು ಡಿ.ಕೆ.ಶಿವಕುಮಾರ್‌ ಮಾಡಲಿ.

ಕನ್ನಡಪ್ರಭ ವಾರ್ತೆ ಮೈಸೂರು

ಬರ ಪರಿಸ್ಥಿತಿಯ ಸಂಕಷ್ಟದ ಸಂದರ್ಭದಲ್ಲಿಯೂ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವ ನ್ಯಾಯಾಧೀಕರಣ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಮಾಜಿ ಸಂಸದ ಪ್ರತಾಪ ಸಿಂಹ ಆಗ್ರಹಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕಾವೇರಿ ನಿರ್ವಹಣಾ ಸಮಿತಿಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ರಾಜ್ಯದಲ್ಲಿಯೇ ಅಣೆಕಟ್ಟೆಗಳು ತುಂಬಿಲ್ಲ. ಈ ವೇಳೆ ಮುಖ್ಯಮಂತ್ರಿಗಳು ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿ ಎಂದರು.

ತಮಿಳುನಾಡಿನಲ್ಲಿ ಕಾಂಗ್ರೆಸ್ ಜೋಕರ್ ಕಾರ್ಡ್ ಇದ್ದಂತೆ. ಕಾಂಗ್ರೆಸ್‌ ಪಾಲಿಗೆ ಕರ್ನಾಟಕ ಕಾಮಧೇನು. ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗಿದೆ. ಹೈಕಮಾಂಡ್ ನ ಎಲ್ಲಾ ಆಸೆ ಆಕಾಂಕ್ಷೆ ಪೊರೈಸಲು ಕರ್ನಾಟಕ ಬೇಕು. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಗೆ ಬುದ್ದಿ ಹೇಳುವ ಕೆಲಸವನ್ನು ಡಿ.ಕೆ.ಶಿವಕುಮಾರ್‌ ಮಾಡಲಿ ಎಂದು ಹೇಳಿದರು.

ನಮ್ಮ ನೀರು ನಮ್ಮ ಹಕ್ಕು ಅಂತಾ ಎಲ್ಲರಿಗೂ ಎಣ್ಣೆ ಹೊಡಿಸಿ, ತೂರಾಡಿ ಕೊಂಡು ಮೇಕೆದಾಟು ಪಾದಯಾತ್ರೆ ಮಾಡಿದವರು ನೀವು. ನಿಮಗೆ ವಾಸ್ತವ ಗೊತ್ತಾಗುತ್ತಿದೆ. ಕಾಂಗ್ರೆಸ್ ನ ಎಲ್ಲಾ ವ್ಯವಹಾರ, ದಂಧೆ ನಡೆಯೋದು ಬೆಂಗಳೂರಿನಲ್ಲಿ. ಆ ಜನರಿಗೆ ನೀರು ಕುಡಿಸೋದು ನಿಮ್ಮ ಜವಾಬ್ದಾರಿ ಅಲ್ಲವೇ ಎಂದು ಪ್ರತಾಪ ಸಿಂಹ ಪ್ರಶ್ನಿಸಿದರು.ನಾನು ಹೇಗೆ ಹೊರಗಿನವನು: ಪ್ರತಾಪ ಸಿಂಹ ಪ್ರಶ್ನೆ

ನಾನು ಹೊರಗಿನವ ಎಂದು ಟೀಕಿಸುವ ಶಾಸಕ ಕೆ.ಹರೀಶ್‌ಗೌಡರು, ಇಟಲಿಯ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಿದಾಗ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಕೇರಳದಲ್ಲಿ ಸ್ಪರ್ಧಿಸುವಾಗ ಯಾಕೆ ಸುಮ್ಮನಿದ್ದರು ಎಂದು ಮಾಜಿ ಸಂಸದ ಪ್ರತಾಪ ಸಿಂಹ ಟೀಕಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಹರೀಶ್ ಗೌಡರು ಹೊರಗಿನವರು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಿದ್ದಾರೆ. ನಾನು ಹೇಗೆ ಹೊರಗಿನವನಾಗ್ತಿನಿ. ಹರೀಶ್ ಗೌಡ್ರೆ?, ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಎಲ್ಲರನ್ನು ಟೀಕಿಸುತ್ತೇನೆ. ಎದುರು ಸಿಕ್ಕಾಗ ಅವರ ವಯಸ್ಸಿಗೆ, ಅನುಭವಕ್ಕಾಗಿ ಕಾಲಿಗೆ ಬಿದ್ದು ಗೌರವ ಕೊಡ್ತಿನಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯ ಲೋಕಕ್ಕೆ ಹಡಪದ ಅಪ್ಪಣ್ಣ ಕೊಡುಗೆ ಅಪಾರ
ದೇಶದಲ್ಲೇ ಮೊದಲ ಬಾರಿ 138 ರೈತರಿಗೆ ಪ್ರಮಾಣಪತ್ರ