ಪಾಲಿಕೆ ಕಚೇರೀಲಿ ಕಡತ ವಿಲೇವಾರಿ ಜೋರು!

KannadaprabhaNewsNetwork |  
Published : Aug 31, 2025, 01:08 AM IST

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ (ಜಿಬಿಎ)ಸೆ.2ಕ್ಕೆ ಐದು ನಗರಪಾಲಿಕೆ ಅಸ್ತಿತ್ವಕ್ಕೆ ಬರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಡಳಿತದ ಕೊನೆಯ ದಿನವಾದ ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ವಲಯ ಕಚೇರಿಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಗಳಿಗೆ ಸಂಬಂಧಿಸಿದ ಡಿಸಿ ಬಿಲ್‌ ಪಾವತಿ ಕಾರ್ಯ ಬರದಿಂದ ಸಾಗಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ (ಜಿಬಿಎ)ಸೆ.2ಕ್ಕೆ ಐದು ನಗರಪಾಲಿಕೆ ಅಸ್ತಿತ್ವಕ್ಕೆ ಬರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಡಳಿತದ ಕೊನೆಯ ದಿನವಾದ ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ವಲಯ ಕಚೇರಿಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಗಳಿಗೆ ಸಂಬಂಧಿಸಿದ ಡಿಸಿ ಬಿಲ್‌ ಪಾವತಿ ಕಾರ್ಯ ಬರದಿಂದ ಸಾಗಿತ್ತು.

ಆಗಸ್ಟ್‌ನ ಕಚೇರಿ ಕೆಲಸದ ಕೊನೆ ದಿನ ಶನಿವಾರ ಆಗಿರುವುದರಿಂದ ಹಾಗೂ ಸೆ.2ರ ಮಂಗಳವಾರ ಜಿಬಿಎ ಅಸ್ತಿತ್ವಕ್ಕೆ ಬರುವ ಹಿನ್ನೆಲೆಯಲ್ಲಿ ಕಾಮಗಾರಿಗಳ ಹಳೇ ಬಾಕಿ ಬಿಲ್‌ ಪಾವತಿ ಕಾರ್ಯ ಬಿರುಸಿನಿಂದ ನಡೆಯಿತು.

ಬಿಲ್ಲು ಪಾವತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಐಎಫ್‌ಎಂಎಸ್‌ ತಂತ್ರಾಂಶವನ್ನು ಶನಿವಾರ ಸಂಜೆಗೆ ಸ್ಥಗಿತಗೊಳಿಸುವುದಕ್ಕೆ ಸೂಚಿಸಿರುವುದರಿಂದ ಸೆ.1 ರಿಂದ ಆಗಸ್ಟ್‌ ಹಾಗೂ ಅದಕ್ಕಿಂತ ಹಿಂದಿನ ತಿಂಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಡಿಸಿ ಬಿಲ್‌ ಪಾವತಿ ಸಾಧ್ಯವಿಲ್ಲ. ಹೀಗಾಗಿ, ಶನಿವಾರ ಪಾಲಿಕೆಯ ಎಲ್ಲಾ ಕಚೇರಿಗಳಲ್ಲಿ ಬಿಲ್‌ಗೆ ಅಧಿಕಾರಿಗಳು ಸಹಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಗುತ್ತಿಗೆದಾರರಿಗೆ 4 ಸಾವಿರ ಕೋಟಿ ಬಾಕಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಸುಮಾರು 4 ಸಾವಿರ ಕೋಟಿ ರು. ಬಾಕಿ ಬಿಲ್‌ ಪಾವತಿ ಮಾಡುವ ಹೊಣೆ ಬಿಬಿಎಂಪಿ ಮೇಲಿದೆ. ಈ ಪೈಕಿ ಬಿಬಿಎಂಪಿಯ ಅನುದಾನದಲ್ಲಿ ಕೈಗೊಂಡ ಕಾಮಗಾರಿಗೆ ಸಂಬಂಧಿಸಿದಂತೆ 2100 ಕೋಟಿ ರು. ಸರ್ಕಾರದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗೆ ಸಂಬಂಧಿಸಿದಂತೆ 1800 ಕೋಟಿ ರು. ಬಾಕಿ ಇದೆ.

ಕಾಮಗಾರಿ ನಡೆಸಿದ ವ್ಯಾಪ್ತಿಯು ಯಾವ ನಗರ ಪಾಲಿಕೆ ವ್ಯಾಪ್ತಿಗೆ ಬರಲಿದೆಯೋ ಆ ಪಾಲಿಕೆಗೆ ಬಾಕಿ ಬಿಲ್‌ ಪಾವತಿಯ ಹೊಣೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಶನಿವಾರವೇ ವೇತನ!ಬಿಬಿಎಂಪಿಯ ಕಾಯಂ ಅಧಿಕಾರಿ ಸಿಬ್ಬಂದಿಗೆ ಸಾಮಾನ್ಯವಾಗಿ ತಿಂಗಳ ಮೊದಲ ದಿನ ಹಾಗೂ ಆ ನಂತರ ದಿನಗಳಲ್ಲಿ ವೇತನ ಪಾವತಿಸುವ ವ್ಯವಸ್ಥೆ ಈವರೆಗೆ ಜಾಲ್ತಿಯಲ್ಲಿ ಇತ್ತು. ಸೆ.2 ರಿಂದ ಜಿಬಿಎ ಅಸ್ತಿತ್ವಕ್ಕೆ ಬರುವ ಹಿನ್ನೆಲೆಯಲ್ಲಿ ಶನಿವಾರವೇ ಕಾಯಂ ಅಧಿಕಾರಿ, ಸಿಬ್ಬಂದಿಗೆ ವೇತನ ಪಾವತಿ ಮಾಡಲಾಗಿದೆ. ಹೊರ ಗುತ್ತಿಗೆ ಸಿಬ್ಬಂದಿ ವೇತನ ಪಾವತಿಗೆ ಸಂಬಂಧಿಸಿದಂತೆ ಶನಿವಾರವೇ ಡಿಸಿ ಬಿಲ್‌ ಸಿದ್ಧಪಡಿಸುವ ಕಾರ್ಯವನ್ನು ಮಾಡಲಾಗಿದೆ. ಆದರೆ, ವೇತನ ಪಾವತಿ ಆಗಿಲ್ಲ.

PREV

Recommended Stories

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : 3 ಜಿಲ್ಲೆಗಳಿಗೆ 3 ದಿನ ಯೆಲ್ಲೋ, 2 ದಿನ ಆರೆಂಜ್‌ ಅಲರ್ಟ್‌
ಅಲೆಮಾರಿಗಳಿಗೆ 6 ನಿರ್ಣಯ ಜಾರಿ ಮಾಡಿ ವಿಶೇಷ ಪ್ಯಾಕೇಜ್‌ಗೆ ಸಮಾಜ ಆಗ್ರಹ