ಹಿಂದೂ ಗೆಳೆಯರ ಬಳಗದಿಂದ ಧನಸಹಾಯ

KannadaprabhaNewsNetwork |  
Published : Oct 02, 2026, 02:45 AM IST
ಚಿತ್ರ : 1ಎಂಡಿಕೆ2 : ಮಡಿಕೇರಿಯಲ್ಲಿ ಅಂತರ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ. | Kannada Prabha

ಸಾರಾಂಶ

ಈಚೆಗೆ ಆನೆಕಾಡುವಿನಲ್ಲಿ ಕಾರು, ಬೈಕು, ಪಿಕಪ್ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಾಳುಗಳಿಗೆ 7ನೇ ಹೊಸಕೋಟೆಯ ಹಿಂದೂ ಗೆಳೆಯರ ಬಳಗದ ವತಿಯಿಂದ ಧನಸಹಾಯ ನೀಡಿ ಸಾಂತ್ವನ ಹೇಳಲಾಯಿತು.

ಸುಂಟಿಕೊಪ್ಪ : ಈಚೆಗೆ ಆನೆಕಾಡುವಿನಲ್ಲಿ ಕಾರು, ಬೈಕು, ಪಿಕಪ್ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಾಳುಗಳಿಗೆ 7ನೇ ಹೊಸಕೋಟೆಯ ಹಿಂದೂ ಗೆಳೆಯರ ಬಳಗದ ವತಿಯಿಂದ ಧನಸಹಾಯ ನೀಡಿ ಸಾಂತ್ವನ ಹೇಳಲಾಯಿತು.

ಭೀಕರ ಅಪಘಾತದಲ್ಲಿ ಮೃತಪಟ್ಟ ತಮ್ಮ ಬಳಗದ ರತನ್ ಉಣ್ಣಿ ಅವರ ಮನೆಯವರಿಗೆ ರು. 36,500, ಆದರ್ಶ್ ಕುಟುಂಬಕ್ಕೆ ರು. 30, 000 ಹಾಗೂ ಗಾಯಾಳು ಚಂದ್ರಶೇಖರ್ ಅವರಿಗೆ ರು. 20, 000 ಗಳ ಸಹಾಯ ಧನ ನೀಡಿ ಧೈರ್ಯ ತುಂಬಿದರು.ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಶರವಣ ಕುಮಾರ್, ಕಾರ್ಯದರ್ಶಿ ಟಿ.ವಿ‌. ಪ್ರಕಾಶ್, ಉಪಾಧ್ಯಕ್ಷ ಸತೀಶ್ ಕುಮಾರ್, ಬಳಗದ ವಿಕ್ರಂ, ರವಿ, ಸಿಜು, ಆಟೋ ರವಿ ಮತ್ತು ಸಂಘಟನೆಯ ಸದಸ್ಯರು ಇದ್ದರು.ಕಳೆದ 2 ವರ್ಷಗಳಿಂದ ಈ ಬಳಗದ ಸದಸ್ಯರು ರಕ್ತದಾನ, ಬಡವರಿಗೆ ಸಹಾಯ ಸೇರಿದಂತೆ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡಿದ್ದು ಸಾರ್ವಜನಿಕರಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಘು ಭೂಕಂಪನದಿಂದ ಆತಂಕ ಬೇಡ: ಭೂ ವಿಜ್ಞಾನಿ ಕೆ.ಚಂದ್ರಶೇಖರ
ಸೋಮವಾರಪೇಟೆ: ಸಾರ್ವಜನಿಕರ ಕುಂದುಕೊರತೆ ಜನಸಂಪರ್ಕ ಸಭೆ