ಸುಂಟಿಕೊಪ್ಪ : ಮಕ್ಕಳು ಕೇವಲ ವಿದ್ಯೆಯನ್ನು ಕಲಿತರೆ ಸಾಲದು ಗುರು ಹಿರಿಯರಿಗೆ ಗೌರವಿಸುವ ಮೂಲಕ ಉತ್ತಮ ನಡವಳಿಕೆಯನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ನಿವೃತ್ತ ವಿಷಯ ಪರಿವೀಕ್ಷಕರಾದ ಎ.ಎಂ.ರವಿ ಚಂಗಪ್ಪ ಹೇಳಿದರು.
ಉತ್ತಮ ವ್ಯಕ್ತಿತ್ವದವರಾಗಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಕರೆ ನೀಡಿದರು. ಅ. 1 ಅನ್ನು ವಿಶ್ವ ಹಿರಿಯ ನಾಗರಿಕರ ದಿನವೆಂದು ಆಚರಿಸುತ್ತಿದ್ದು ಅದಕ್ಕೆ ಪೂರಕವಾಗಿ ಈ ಸಂಸ್ಥೆಯಲ್ಲಿ ಹಿರಿಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಶ್ಲಾಘಿಸಿದರು.
7ನೇ ಹೊಸಕೋಟೆ ಸಂತ ಸಬಾಸ್ಟೀನ್ ದೇವಾಲಯದ ಧರ್ಮಗುರು ರೇ.ಫಾ.ಅಬ್ರಾಹಂ ಪಟೇಲ್ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಪೊಲೀಸ್ ಸಹಾಯಕ ಇನ್ಸ್ ಪೇಕ್ಟರ್ ಪಾರ್ಥ ಮುಖ್ಯ ಅತಿಥಿಗಳಾಗಿದ್ದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಗೀತಾ ಪಾರ್ಥ, ಸೆಕ್ರೆಟ್ ಹಾರ್ಟ್ ಕಾನ್ವೆಂಟ್ ನ ಮದರ್ ಸೂಪಿರಿಯರ್ ಎ.ಜೆ. ಉಷಾ ಮಾತನಾಡಿದರು.
ಶಾಲಾ ಮಕ್ಕಳು ಮೊದಲಿಗೆ ಪ್ರಾರ್ಥಿಸಿದರು. ಸಿಸ್ಟರ್ ಜಿನ್ಸಿ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಟೆಸಿಮ್ಯಾನುವೇಲ್ ಸ್ವಾಗತಿಸಿದರು. ಸತ್ಯದಾಸ್ ವಂದಿಸಿದರು. ಈ ಸಂದರ್ಭ ಶಾಲಾ ಸಹ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.