ನೀರಿನಲ್ಲಿ ಮುಳುಗಿ ಸಾವನಪ್ಪಿದ್ದ ಯುವಕರ ಕುಟುಂಬಕ್ಕೆ ಆರ್ಥಿಕ ನೆರವು

KannadaprabhaNewsNetwork |  
Published : Jun 18, 2025, 11:48 PM ISTUpdated : Jun 18, 2025, 11:49 PM IST
18ಕೆಎಂಎನ್ ಡಿ24 | Kannada Prabha

ಸಾರಾಂಶ

ಇತ್ತೀಚೆಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದ ಅಲಭುಜನಹಳ್ಳಿ ಗ್ರಾಮದ ಪರಿಶಿಷ್ಟ ಸಮುದಾಯದ ಚೇತನ್ ಹಾಗೂ ದರ್ಶನ ಕುಟುಂಬಕ್ಕೆ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ವತಿಯಿಂದ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿಇತ್ತೀಚೆಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದ ಅಲಭುಜನಹಳ್ಳಿ ಗ್ರಾಮದ ಪರಿಶಿಷ್ಟ ಸಮುದಾಯದ ಚೇತನ್ ಹಾಗೂ ದರ್ಶನ ಕುಟುಂಬಕ್ಕೆ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ವತಿಯಿಂದ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಲಾಯಿತು. ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ನೇತೃತ್ವದಲ್ಲಿ ಮೃತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ ನಂತರ ಮಾತನಾಡಿ ಅವರು, ಪ್ರತಿಭಾವಂತ ಯುವಕರು ಈಜಲು ಹೋಗಿ ಮೃತಪಟ್ಟಿರೋದು ದುಃಖಕರ ವಿಷಯ. ಕುಟುಂಬಕ್ಕೆ ಆಸರೆಯಾಗಿಬೇಕಿದ್ದ ಮನೆ ಮಕ್ಕಳನ್ನು ಕಳೆದುಕೊಂಡು ಚಿಂತೆಗಿಡಾಗುವಂತೆ ಮಾಡಿರೋದು ಬೇಸರದ ಸಂಗತಿ. ನಾವೆಲ್ಲರೂ ಎರಡು ಕುಟುಂಬಗಳ ಜೊತೆ ನಿಲ್ಲಬೇಕು. ಶೋಷಿತ ಸಮುದಾಯಗಳ ವೇದಿಕೆ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಅಸರೆಯಾಗಿದೆ ಎಂದರು. ವೇದಿಕೆ ತಾಲೂಕು ಅಧ್ಯಕ್ಷ ಕರಡಕೆರೆ ಯೋಗೇಶ್, ಭಾರತಿನಗರ ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ಉಪಾಧ್ಯಕ್ಷರಾದ ಕಾಡುಕೊತ್ತನಹಳ್ಳಿ ಮರಿಸ್ವಾಮಿ, ಮುಡಿನಹಳ್ಳಿ ತಿಮ್ಮಯ್ಯ, ಮುಖಂಡರಾದ ಈ ರುದ್ರಯ್ಯ, ಎಸ್.ಐ. ಹೊನ್ನಲಗೆರೆ ಶಿವಣ್ಣ, ಗುಡಿಗೆರೆ ಪ್ರಸಾದ್, ಮೆಣಸಗೆರೆ ಪರಮೇಶ್, ಶಿವಲಿಂಗಯ್ಯ, ಗ್ರಾಮದ ಮುಖಂಡರಾದ ಓಂಪ್ರಕಾಶ್, ಸಿದ್ದರಾಜು, ಸಿದ್ದಯ್ಯ, ಉಮೇಶ್, ಆಟೋ ಮಹದೇವ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ