ಜೀವ ವಿಮಾ ಪಾಲಿಸಿ ಹೊಂದಿದ್ದ ಗ್ರಾಹಕನ ಕುಟುಂಬಕ್ಕೆ ಆರ್ಥಿಕ ಪರಿಹಾರ

KannadaprabhaNewsNetwork |  
Published : Mar 13, 2026, 01:30 AM IST
ಪೊಟೊ: 17ಎಸ್‌ಎಂಜಿಕೆಪಿ07 | Kannada Prabha

ಸಾರಾಂಶ

ಕೆನರಾ ಬ್ಯಾಂಕ್, ಕೆನರಾ ಕವಚ ಜೀವ ವಿಮಾ ಪಾಲಿಸಿ ಹೊಂದಿದ್ದ ಗ್ರಾಹಕ ನಿಧನರಾಗಿದ್ದು, ಅವರಿಗೆ ಕೆನರಾ ಬ್ಯಾಂಕ್‌ನಿಂದ ತ್ವರಿತವಾಗಿ ಅವರ ಕುಟುಂಬಕ್ಕೆ ಆರ್ಥಿಕ ಪರಿಹಾರ ಒದಗಿಸಿದೆ.

ಶಿವಮೊಗ್ಗ: ಕೆನರಾ ಬ್ಯಾಂಕ್, ಕೆನರಾ ಕವಚ ಜೀವ ವಿಮಾ ಪಾಲಿಸಿ ಹೊಂದಿದ್ದ ಗ್ರಾಹಕ ನಿಧನರಾಗಿದ್ದು, ಅವರಿಗೆ ಕೆನರಾ ಬ್ಯಾಂಕ್‌ನಿಂದ ತ್ವರಿತವಾಗಿ ಅವರ ಕುಟುಂಬಕ್ಕೆ ಆರ್ಥಿಕ ಪರಿಹಾರ ಒದಗಿಸಿದೆ.

ಕೆನರಾ ಬ್ಯಾಂಕ್ ವಿದ್ಯಾನಗರ ಶಾಖೆಯಿಂದ ಕಿರಣ್ ಕುಮಾರ್ ಅವರು ಅವರ ತಾಯಿಯೊಂದಿಗೆ ಜಂಟಿಯಾಗಿ ಗೃಹ ನಿರ್ಮಾಣ ಮಾಡಲು ಸಾಲಗಾರರಾಗಿ ಸಾಲವನ್ನು ಪಡೆದಿದ್ದರು. ಆ ಸಾಲಕ್ಕೆ ವಿಮಾ ಸೌಲಭ್ಯವನ್ನು ಪಡೆದುಕೊಂಡಿದ್ದು, ಅವರು ಅಕಾಲಿಕ ಮರಣ ಹೊಂದಿದ ನಂತರ ರಿಟೇಲ್ ಅಸೆಟ್ ಹಬ್ ಸಿಬ್ಬಂದಿ ತಕ್ಷಣವೇ ವೀಮಾ ಕ್ಲೈಮ್‌ನ್ನು ಪ್ರಕ್ರಿಯೆ ಪ್ರಾರಂಭಿಸಿ ಎಲ್ಲವನ್ನು ಪರಿಶೀಲಿಸಿ, ನಿಯಮದ ಪ್ರಕಾರ ಸಾಲಗಾರನಿಗೆ ಸಾಲದ ಮೊತ್ತದ ಶೇ.50 ಅನ್ನು ಇತ್ಯರ್ಥಪಡಿಸಿದೆ.

ಕಷ್ಟದ ಸಮಯದಲ್ಲಿ ಫ್ಲೈಮ್‌ನ ಇತ್ಯರ್ಥವು ದುಃಖದ ಕುಟುಂಬದ ಮೇಲೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದ್ದು, ಕಿರಣ್ ಅವರ ತಾಯಿ ಸುನಿತಾ ಹಾಗೂ ಅವರ ಪತ್ನಿ ಕೆನರಾ ಬ್ಯಾಂಕ್ ಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.

ಕೆನರಾ ಗ್ರೂಪ್ ಸೆಕ್ಯೂರ್‌ನಂತಹ ಸಾಲ ಸಂಬಂಧಿತ ಯೋಜನೆಗಳು ಕುಟುಂಬಕ್ಕೆ ಅನಿರೀಕ್ಷಿತ ಆರ್ಥಿಕ ಸಂಕಷ್ಟಗಳಿಂದ ರಕ್ಷಿಸುವ ಮೂಲಕ ಪ್ರಮುಖ ಆರ್ಥಿಕ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಬ್ಯಾಂಕ್‌ನ ಅಧಿಕಾರಿಗಳು ಈ ಸಂದರ್ಭದಲ್ಲಿ ತೋರಿಸಿದ್ದಾರೆ.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಶಿವಮೊಗ್ಗದ ಡಿಜಿಎಂ ದೇವರಾಜ್ ಅವರು ವಿಮಾ ಪಾಲಿಸಿಯ ಚೆಕ್ಕನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಸಾಹಿತ್ಯದ ಮೂಲಕ ಜಗತ್ತಿಗೆ ಕೊಡುಗೆ ನೀಡಿದ ಜೈನಧರ್ಮ: ಪ್ರೊ. ಶಾಂತಿನಾಥ ದಿಬ್ಬದ