ಹುಬ್ಬಳ್ಳಿ:
ಹು-ಧಾ ಚಾಪ್ಟರ್‌ನಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ "ರಾಷ್ಟ್ರೀಯ ಮಟ್ಟದ ಹಿಂದೂ ಆರ್ಥಿಕ ಮಹಾಸಂಗಮ-2026''''''''ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಆರ್ಥಿಕ ಮತ್ತು ವಾಣಿಜ್ಯ ಕ್ಷೇತ್ರದ ವಿವಿಧ ವಲಯಗಳಲ್ಲಿ ಉದ್ಯಮಶೀಲತೆ ಸಾಕಷ್ಟು ಬೆಳವಣಿಗೆ ಕಂಡಿದೆ. ಇದು ಖುಷಿ ಸಂಗತಿ. 2030ರ ವೇಳೆಗೆ ಯುವಕರ ಜನಸಂಖ್ಯೆ ಅನುಸಾರ ಉದ್ಯೋಗ ಹುಡುಕಾಟಕ್ಕಿಂತ `ಉದ್ಯೋಗ ಸೃಷ್ಟಿ'''''''' ಸಂಸ್ಕೃತಿ ಬೆಳೆಸಬೇಕಿದೆ. ಹಣಕಾಸು ಹಿಂದೂ ನವೋದ್ಯಮಗಳು ಮತ್ತು ಸಣ್ಣ ವ್ಯವಹಾರ ಮಾಡುವ ವ್ಯಾಪಾರಸ್ಥರನ್ನು ಬೆಳೆಸಲು ತರಬೇತಿ, ಆರ್ಥಿಕ ನೆರವು, ಸಲಹೆ ಜತೆ ಮೂಲಸೌಕರ್ಯ ಒದಗಿಸುವುದೇ ಹಿಂದೂ ಆರ್ಥಿಕ ಒಕ್ಕೂಟದ ಮುಖ್ಯ ಗುರಿ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಕಾಣುತ್ತಿದ್ದೇವೆ ಎಂದರು.ನೂತನ ಉದ್ಯೋಗ ಸೃಷ್ಟಿಸುವುದು. ಬೇಕಾದ ಆರ್ಥಿಕ ನೆರವು ಹಾಗೂ ಮಾರ್ಗದರ್ಶನ ನೀಡುವುದೆಲ್ಲವೂ ಮಾಮೂಲಿ. ಇವೆಲ್ಲವೂ ದೊಡ್ಡ ವಿಷಯಗಳಾಗುವುದಿಲ್ಲ. ಆದರೆ, ಉದ್ದಿಮೆದಾರನಿಗೆ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡಲು ಸಂಘಟನೆಗಳ ಪಾತ್ರ ಮಹತ್ವದ್ದಾಗಿರುತ್ತದೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸ್ಥಳೀಯ ಸಂಘಟನೆಗಳ ಸಹಕಾರದಿಂದಲೇ ಪಾಶ್ಚಾತ್ಯ ದೇಶಗಳು ಜಾಗತಿಕ ಮಟ್ಟದಲ್ಲಿ ಸಾಮ್ರಾಜ್ಯ ಸ್ಥಾಪಿಸಿವೆ. ಅದೇ ತರನಾಗಿ ಭಾರತವೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾದರೆ ಹೋಬಳಿ, ತಾಲೂಕು ಹಾಗೂ ಜಿಲ್ಲಾಮಟ್ಟದ ಸಂಘಟನೆಗಳ ಸಹಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಆರ್ಥಿಕ ತಜ್ಞ ಡಾ. ಆರ್. ವೈದ್ಯನಾಥನ್ ಮಾತನಾಡಿ, ವ್ಯಾಪಾರ ಒಪ್ಪಂದಗಳು, ಜಿಎಸ್‌ಟಿ ದರ ಪರಿಷ್ಕರಣೆ ಮತ್ತು ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವು ಜಿಡಿಪಿ ಪರಿಷ್ಕರಣೆಗೆ ಕಾರಣವಾಗಿದೆ. ದೇಶದಲ್ಲಿ ಜನರ ಖರೀದಿ ಸಾಮರ್ಥ್ಯ ಮತ್ತು ಸ್ಥಿರವಾದ ಹೂಡಿಕೆಯ ಪ್ರಮಾಣ ಹೆಚ್ಚಳವಾಗಿದೆ. ಇದು ಜಿಡಿಪಿ ಬೆಳವಣಿಗೆಗೆ ಸಹಕಾರಿ ಆಗಿದೆ ಎಂದು ತಿಳಿಸಿದರು.
ಉದ್ಯಮಿ ಡಾ. ಆನಂದ ಸಂಕೇಶ್ವರ ಮಾತನಾಡಿ, ದೇಶದ ಜಿಡಿಪಿ ಕೊಡುಗೆಯಲ್ಲಿ ಮೊದಲಿದ್ದ ಶೇ.33ರ ಪ್ರಮಾಣ ಇದೀಗ ಶೇ.5-6ಕ್ಕೆ ಇಳಿದಿದೆ. ಇದು ಒಂದು ರೀತಿ ಎಚ್ಚರಿಕೆ ಗಂಟೆ. ನಮ್ಮತನವನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿ, ಉತ್ಪನ್ನಗಳನ್ನು ಖರೀದಿಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಪೀಳಿಗೆ ಬದಲಾದಂತೆ ಕಟ್ಟುಪಾಡುಗಳ ಸಂಕೋಲೆಯನ್ನು ಕಿತ್ತೆಸೆದು ಹೊಸ ಹೊಸ ಅವಿಷ್ಕಾರಗ ಬಗ್ಗೆ ಯೋಚನೆ ಮಾಡಬೇಕಿದೆ. ಅಂದಾಗ ದೇಶ ಅಭಿವೃದ್ಧಿ ಕಾಣಲಿದೆ ಎಂದರು.
ಹು-ಧಾ ಚಾಪ್ಟರ್ ಸಂಚಾಲಕ ಅರ್ಜುನ ಮಹಾಜನ್, ಕಾರ್ಯದರ್ಶಿ ಗಿರೀಶ ಮಾನೆ, ಉಪಾಧ್ಯಕ್ಷ ಗೌತಮ ಬಾಫನಾ, ಖಜಾಂಚಿ ಮುಖೇಶ ಪಾಂಚಾಲ, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ್, ಉದ್ಯಮಿ ನಂದಕುಮಾರ್, ಸೇರಿದಂತೆ ಸಾವಿರಾರು ಸದಸ್ಯರು ಪಾಲ್ಗೊಂಡಿದ್ದರು.