ಯುದ್ಧ ವಿಮಾನದಿಂದ ನಿಪ್ಪಾಣಿ ನಗರಸಭೆಗೆ ಆರ್ಥಿಕ ನಷ್ಟ: ಕಾಕಾಸಾಹೇಬ ಪಾಟೀಲ

KannadaprabhaNewsNetwork |  
Published : Nov 09, 2024, 01:06 AM IST
ಶಾಸಕ ಕಾಕಾಸಾಹೇಬ ಪಾಟೀಲ | Kannada Prabha

ಸಾರಾಂಶ

ನಿಪ್ಪಾಣಿ ನಗರದ ಪ್ರವೇಶ ದ್ವಾರದ ಛತ್ರಪತಿ ಶಿವಾಜಿ ಉದ್ಯಾನದಲ್ಲಿ ಅಳವಡಿಸಿರುವ ಯುದ್ಧ ವಿಮಾನಕ್ಕೆ ಸಂಬಂಧಪಟ್ಟ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ನಗರದ ಪ್ರವೇಶ ದ್ವಾರದ ಛತ್ರಪತಿ ಶಿವಾಜಿ ಉದ್ಯಾನದಲ್ಲಿ ಅಳವಡಿಸಿರುವ ಯುದ್ಧ ವಿಮಾನಕ್ಕೆ ಸಂಬಂಧಪಟ್ಟ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿಮಾನ ಖರೆದಿಯ ದಾಖಲೆಗಳ ಸಮೇತ ಬಿಡುಗಡೆ ಮಾಡಿ ಮಾತನಾಡಿದ ಅವರು, ನಗರದಲ್ಲಿ ಈ ವಿಮಾನ ಸ್ಥಾಪಿಸಲು ತಗಲುವ ವೆಚ್ಚ ನೋಡಿದರೆ ಇದರಿಂದ ನಗರದ ಜನತೆಗೆ ದೊಡ್ಡ ಹೊರೆಯಾಗಲಿದೆ. ನಗರದ ಅಭಿವೃದ್ಧಿಗೂ ಅಡ್ಡಿಯಾಗುತ್ತದೆ ಎಂದು ದೂರಿದರು.

ವಾಯುಪಡೆಯ ನಿವೃತ್ತ ಐಎಲ್ -38 ಯುದ್ಧ ವಿಮಾನವನ್ನು ಗೋವಾದಿಂದ ನಿಪ್ಪಾಣಿಗೆ ತರಲಾಗಿದೆ. ಇದಕ್ಕಾಗಿ ₹2.59 ಕೋಟಿ ಯೋಜನೆಗೆ ಅನುಮೋದನೆ ಪಡೆಯಲಾಗಿದೆ. ಈ ವಿಮಾನ ಸ್ಥಾಪಿಸಲು ಬೆಳಗಿನ ಸಮಯ ವಾಯುವಿಹಾರಕ್ಕೆ ಅನುಕೂಲವಾಗಿದ್ದ ಪಂತನಗರ ಪರಿಸರದಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದ ಸ್ಥಳ ನೀಡಲಾಗಿದೆ. ಇದಕ್ಕೆ ನಗರದ ನಾಗರಿಕರ ಸಮ್ಮತಿಯಿಲ್ಲದೇ ಈ ಸ್ಥಳವನ್ನು ನೀಡಲಾಗಿದೆ ಎಂದು ಆರೋಪಿಸಿದರು.

ಸದ್ಯ ಈ ವಿಮಾನ ನಗರಕ್ಕೆ ಒಂದು ದೊಡ್ಡ ಸಮಸ್ಯೆಯಾಗಿದೆ. ನಿರ್ವಹಣೆ ಕೊರತೆಯಿಂದಾಗಿ ಧೂಳು ಹಿಡಿದಿದ್ದು, ಪ್ರವಾಸಿಗರು ಭೇಟಿ ನೀಡುವುದು ದೂರದ ಮಾತು. ನಗರಸಭೆ ಆರ್ಥಿಕ ಸಂಕಷ್ಟದಲ್ಲಿರುವಾಗ ನಗರಸಭೆಗೆ ಈ ಹೊರೆ ಹಾಕಿರುವುದು ಮತ್ತಷ್ಟು ಸಂಕಷ್ಟ ಹೆಚ್ಚಿಸಿದೆ.

ಉದ್ಯಾನದ ಸ್ಥಳವನ್ನು ವಿಮಾನ ಆವರಿಸಿದ್ದರಿಂದ ಬೆಳಗ್ಗೆ ಹಾಗೂ ಸಂಜೆ ವಾಕಿಂಗ್‌ ಗೆ ಬರುವ ಜನರಿಗೆ ಹಾಗೂ ಸ್ವಚ್ಛಂದ ವಾಯು ವಿಹಾರಕ್ಕೆ ಬರುವ ಜನರಿಗೆ ಇದರಿಂದ ತೊಂದರೆ ಉಂಟಾಗಿದೆ. ಇದು ಪಾಲಿಕೆಗೆ ಅನವಶ್ಯಕ ಆರ್ಥಿಕ ಹೊರೆಯಾಗಿದ್ದು, ನಗರ ಪಾಲಿಕೆ ವತಿಯಿಂದ ಇದಕ್ಕಾಗಿ ಒಂದು ರೂಪಾಯಿ ಸಹ ಕೂಡಬಾರದು. ಅದಕ್ಕಾಗಿ ನಾನು ಹಾಗೂ ಸಹೋದ್ಯೋಗಿಗಳು ಹಾಗೂ ಕಾರ್ಯಕರ್ತರು ಹೋರಾಟ ಮುಂದುವರೆಯಲಿದ್ದೇವೆ. ಮೊದಲ ಹಂತದಲ್ಲಿ ನಾಮನಿರ್ದೇಶಿತ ಐವರು ನಗರಸೇವಕರಿಂದ ನಗರಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗುವುದು. ಎರಡನೇ ಹಂತದಲ್ಲಿ ಮಾಜಿ ಜನಪ್ರತಿನಿಧಿಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ನೀಡಲಾಗುವುದು ಎಂದು ಹೇಳಿದರು.ವಿಮಾನದ ಬಿಡಿ ಭಾಗ ಬಿಡಿಸಲು ₹ 94.55 ಲಕ್ಷ ಒದಗಿಸಲಾಗಿದೆ. ಗೋವಾದಿಂದ ನಗರಕ್ಕೆ ಬಿಡಿಭಾಗಗಳ ಸಾಗಣೆಗೆ ₹19.64 ಲಕ್ಷ ಹಾಗೂ ವಿಮಾನವನ್ನು ಉದ್ದೇಶಿತ ಸ್ಥಳದಲ್ಲಿ ಮರುಜೋಡಣೆಗೆ ₹ 94.20 ಲಕ್ಷ ಖರ್ಚು ಮಾಡಲಾಗಿದೆ. 20 ಟನ್ ಸಾಮರ್ಥ್ಯದ ಹವಾನಿಯಂತ್ರಿಣ ಮತ್ತು ವಿಮಾನ ನವೀಕರಣಕ್ಕೆ ₹22 ಲಕ್ಷ ಕ್ರಿಯಾಯೋಜನೆ ಮಂಜೂರಾಗಿದ್ದು, ಟೆಂಡರ್ ಪ್ರಕಟಿಸಿ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಇದಕ್ಕೆ ವ್ಯಯಿಸಿದ ₹2.59 ಕೋಟಿ ಪೈಕಿ ಕೇವಲ ₹1 ಕೋಟಿಯನ್ನು ಮಾತ್ರ ಗುತ್ತಿಗೆ ಪಡೆದ ಕಂಪನಿಗೆ ಪಾವತಿಸಲಾಗಿದೆ. ಉಳಿದ ಮೊತ್ತಕ್ಕಾಗಿ ಜಟಾಪಟಿ ನಡೆಯುತ್ತಿದೆ. ಶಾಸಕಿ ಶಶಿಕಲಾ ಜೊಲ್ಲೆ ಅವರು ಮೊತ್ತವನ್ನು ನಗರಸಭೆ ವತಿಯಿಂದ ಭರಿಸಲು ಬುನಾದಿ ಹಾಕಿದ್ದಾರೆ. ಈ ಟೆಂಡರ್ ನ್ನು ಬ್ಲೂ ಸ್ಕೈ ಎವಿಯೇಶನ್ ಕನ್ಸಲಟನ್ಸಿಗೆ ನೀಡಲಾಗಿದೆ.

- ಕಾಕಾಸಾಹೇಬ ಪಾಟೀಲ ಮಾಜಿ ಶಾಸಕ ನಿಪ್ಪಾಣಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ