ಶಿವಮೊಗ್ಗ : ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್‌ ರದ್ದು : 72 ಸರ್ಕಾರಿ ನೌಕರಿಗೆ ದಂಡ

KannadaprabhaNewsNetwork |  
Published : Dec 02, 2024, 01:19 AM ISTUpdated : Dec 02, 2024, 12:35 PM IST
Ration card

ಸಾರಾಂಶ

ಅಕ್ರಮವಾಗಿ ಸರಕಾರಿ ನೌಕರರು ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ಗುರುತಿಸಿ ಆಹಾರ, ನಾಗರಿಕ ಸರಬರಾಜು ಇಲಾಖೆ ಎಪಿಎಲ್ ಕಾರ್ಡ್‌ಗೆ ಬದಲಾಯಿಸಿ, ಒಟ್ಟು 72 ಸರ್ಕಾರಿ ನೌಕರರಿಗೆ 4,12,890 ದಂಡ ವಿಧಿಸಿದೆ.

 ಶಿವಮೊಗ್ಗ :  ಅಕ್ರಮವಾಗಿ ಸರಕಾರಿ ನೌಕರರು ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ಗುರುತಿಸಿ ಆಹಾರ, ನಾಗರಿಕ ಸರಬರಾಜು ಇಲಾಖೆ ಎಪಿಎಲ್ ಕಾರ್ಡ್‌ಗೆ ಬದಲಾಯಿಸಿ, ಒಟ್ಟು 72 ಸರ್ಕಾರಿ ನೌಕರರಿಗೆ ₹4,12,890 ದಂಡ ವಿಧಿಸಿದೆ.

ಆಹಾರ, ನಾಗರಿಕ ಸರಬರಾಜು ಇಲಾಖೆ ರಾಜ್ಯಾದ್ಯಂತ ಅಕ್ರಮ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಬದಲಿಸುವ ಕಾರ್ಯಕ್ಕೆ ಚಾಲನೆ ನೀಡಿತ್ತು. ಆದರ ಭಾಗವಾಗಿ ಜಿಲ್ಲಾ ಆಹಾರ ಇಲಾಖೆ ಶಿವಮೊಗ್ಗ ಜಿಲ್ಲೆಯಲ್ಲೂ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರು, ತೆರಿಗೆ ಪಾವತಿದಾರರ ಸಾವಿರಾರು ಕಾರ್ಡ್‌ಗಳನ್ನು ಪತ್ತೆ ಹಚ್ಚಿ ಎಪಿಎಲ್‌ಗೆ ಬದಲಿಸಿದೆ.ಜಿಲ್ಲೆಯಲ್ಲಿ ಒಟ್ಟು 4.9 ಲಕ್ಷ ಪಡಿತರ ಚೀಟಿಗಳಿದ್ದು, ಇವುಗಳಲ್ಲಿ ಎಪಿಎಲ್ 1.2 ಲಕ್ಷ, ಬಿಪಿಎಲ್ 3.52 ಲಕ್ಷ, ಅಂತ್ಯೋದಯ 36 ಸಾವಿರ ಕಾರ್ಡ್‌ಗಳಿವೆ. 

ಕಳೆದ ಏಪ್ರಿಲ್ 1ರಿಂದ ಅಕ್ಟೋಬರ್ 31 ರ ವರೆಗೆ 53,342ಕಾರ್ಡ್‌ಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಇವುಗಳಲ್ಲಿ 79 ಜನ ಸರ್ಕಾರಿ ನೌಕರರು, 2,970 ತೆರಿಗೆ ಪಾವತಿದಾರರು, 50,877 ಜನ 1.2 ಲಕ್ಷ ಗಿಂತ ಹೆಚ್ಚು ಆದಾಯ ಹೊಂದಿರುವವರು ಇದ್ದಾರೆ. ಮತ್ತೆ ಈಗ 44 ಸಾವಿರ ಕಾರ್ಡ್‌ಗಳನ್ನು ಪರಿಶೀಲನೆ ಕೈಗೆತ್ತಿಕೊಂಡಿದ್ದು, 9940 ಕಾರ್ಡ್‌ಗಳ ಪರಿಶೀಲನೆ ಚಾಲ್ತಿಯಲ್ಲಿದೆ.ಒಟ್ಟು 2388 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಜಿಲ್ಲಾ ಆಹಾರ ಇಲಾಖೆ ವರ್ಗಾವಣೆ ಮಾಡಿದೆ. ಮರಣ ಹೊಂದಿದ 70 ಬಿಪಿಎಲ್ ಕಾರ್ಡ್‌ದಾರರ ಹೆಸರನ್ನು ಪಟ್ಟಿಯಿಂದ ರದ್ದುಗೊಳಿಸಿದೆ. 

ಬಿಪಿಎಲ್ ಕಾರ್ಡ್‌ಗಳಿಂದ ಸಿಗುವ ಸೌಲಭ್ಯದ ಆಸೆಗಾಗಿ ಅಕ್ರಮವಾಗಿ ಕಾರ್ಡ್ ಮಾಡಿಸಿಕೊಂಡಿದ್ದ 72 ಜನ ಸರ್ಕಾರಿ ನೌಕರರ ಕಾರ್ಡ್‌ಗಳು ಎಪಿಎಲ್‌ಗೆ ಬದಲಾಗಿವೆ. ಜತೆಗೆ ಕಳೆದ ಆರು ತಿಂಗಳಿಂದ ಪಡಿತರ ಪಡೆಯದ ಬಿಪಿಎಲ್ ಕಾರ್ಡ್‌ಗಳನ್ನು ಅಮಾನತು ಮಾಡಿದ್ದು, ಸೂಕ್ತ ದಾಖಲೆ ನೀಡಿ, ಇವುಗಳನ್ನು ಮತ್ತೆ ಸಕ್ರಿಯಗೊಳಿಸಿಕೊಳ್ಳಬಹುದಾಗಿದೆ.ಬ್ಯಾಂಕ್‌ನಿಂದ ಸಾಲ ಪಡೆಯಲು ಪಾನ್ ಕಾರ್ಡ್ ಸಲ್ಲಿಕೆ ಹಾಗೂ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ. ಇದರಿಂದ ಬಿಪಿಎಲ್ ಕಾರ್ಡ್‌ದಾರರೂ ತೆರಿಗೆ ಪಾವತಿಸಿರುತ್ತಾರೆ. ಇದೇ ಕಾರಣಕ್ಕೆ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್‌ಗೆ ಬದಲಿಸುವುದು ಎಂತಹ ನ್ಯಾಯ. ಸಾಲ ಪಡೆಯಲು ತೆರಿಗೆ ಪಾವತಿ ಕಡ್ಡಾಯವಲ್ಲ ಎಂಬ ನಿಯಮ ಜಾರಿಗೆ ಬಂದರೆ ಸಣ್ಣ, ಪುಟ್ಟ ವ್ಯಾಪಾರ ನಡೆಸುವ ಬಿಪಿಎಲ್ ಕಾರ್ಡ್‌ದಾರರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಬಿಪಿಎಲ್ ಕಾರ್ಡುದಾರರು.

ಎಪಿಎಲ್‌ಗೆ ಬದಲಾಗಿರುವ ಬಿಪಿಎಲ್ ಕಾರ್ಡ್‌ ಸಂಖ್ಯೆ 

 ಭದ್ರಾವತಿ - 556 

ಹೊಸನಗರ - 53

ಸಾಗರ - 362

ಶಿಕಾರಿಪುರ - 83 

ಶಿವಮೊಗ್ಗ - 1018

 ಸೊರಬ - 148

ತೀರ್ಥಹಳ್ಳಿ - 75- ಒಟ್ಟು 2295

ಸಾಲ ಪಡೆಯಲು ಪಾನ್ ಕಾರ್ಡ್, ತೆರಿಗೆ ಪಾವತಿ ಕಡ್ಡಾಯ

ಬ್ಯಾಂಕ್‌ನಿಂದ ಸಾಲ ಪಡೆಯಲು ಪಾನ್ ಕಾರ್ಡ್ ಸಲ್ಲಿಕೆ ಹಾಗೂ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ. ಇದರಿಂದ ಬಿಪಿಎಲ್ ಕಾರ್ಡ್‌ದಾರರೂ ತೆರಿಗೆ ಪಾವತಿಸಿರುತ್ತಾರೆ. ಇದೇ ಕಾರಣಕ್ಕೆ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್‌ಗೆ ಬದಲಿಸುವುದು ಎಂತಹ ನ್ಯಾಯ. ಸಾಲ ಪಡೆಯಲು ತೆರಿಗೆ ಪಾವತಿ ಕಡ್ಡಾಯವಲ್ಲ ಎಂಬ ನಿಯಮ ಜಾರಿಗೆ ಬಂದರೆ ಸಣ್ಣ, ಪುಟ್ಟ ವ್ಯಾಪಾರ ನಡೆಸುವ ಬಿಪಿಎಲ್ ಕಾರ್ಡ್‌ದಾರರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಬಿಪಿಎಲ್ ಕಾರ್ಡುದಾರರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ