ಪಿಎಲ್‌ಡಿ ಬ್ಯಾಂಕ್‌ ಚುನಾವಣೆ: ರಾಜೇಶ್‌ ವಿರುದ್ಧ ಎಫ್‌ಐಆರ್‌

KannadaprabhaNewsNetwork |  
Published : Aug 02, 2026, 01:30 AM IST
ಅಭ್ಯರ್ಥಿ ಆಲತ್ತೂರು ಕೆ.ರಾಜೇಶ್‌  | Kannada Prabha

ಸಾರಾಂಶ

ಆ.೨ರಂದು ನಡೆಯಲಿರುವ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಆಲತ್ತೂರು ಕೆ. ರಾಜೇಶ್‌ ಬಿಸಿಎಂ‘ಬಿʼಪ್ರಮಾಣ ಪತ್ರ ಪಡೆಯಲು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಗ್ರೇಡ್ ೨ ತಹಸೀಲ್ದಾರ್‌ ಜಯಪ್ರಕಾಶ್ ನೀಡಿದ ದೂರಿನ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಶನಿವಾರ ಸಂಜೆ ಎಫ್ಐಆರ್‌ ದಾಖಲಾಗಿದೆ. ಬಿಸಿಎಂ ‘ಬಿʼ ಪ್ರಮಾಣ ಪತ್ರ ಪಡೆಯಲು ಆಲತ್ತೂರು ಕೆ. ರಾಜೇಶ್‌ ಅವರು ಸುಳ್ಳು ಮಾಹಿತಿ ನೀಡಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಗ್ರೇಡ್ ೨ ತಹಸೀಲ್ದಾರ್‌ ಜಯಪ್ರಕಾಶ್ ಗುಂಡ್ಲುಪೇಟೆ ಠಾಣಾ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪೊಲೀಸರು ಶನಿವಾರ ಅಳೆದು, ತೂಗಿ ಲೀಗಲ್ ಪಡೆದು ಗ್ರೇಡ್ ೨ ತಹಸೀಲ್ದಾರ್‌ ನೀಡಿದ ದೂರಿನ ಮೇರೆಗೆ ಪಿಎಲ್‌ಡಿ ಬ್ಯಾಂಕ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಲತ್ತೂರು ಕೆ. ರಾಜೇಶ್ ಮೇಲೆ ಬಿಎನ್‌ಎಸ್‌ ೨೧೨ರಂತೆ ದೂರು ದಾಖಲಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಡಬ್ಲ್ಯೂಸಿ ಆದೇಶ ಖಂಡಿಸಿ ಕರವೇ ಪ್ರತಿಭಟನೆ
ಕಾಡಾನೆಗಳಿಗೆ ಇನ್ನೆಷ್ಟು ಜನರ ಬಲಿ ಕೊಡ್ತೀರಿ