ಅರಣ್ಯ ಸಿಬ್ಬಂದಿ ಬೋನಿಗೆ ಹಾಕಿದ್ದ ರೈತರ ಮೇಲೆ ಎಫ್‌ಐಆರ್‌

KannadaprabhaNewsNetwork |  
Published : Sep 11, 2025, 12:03 AM IST
ಅರಣ್ಯ ಸಿಬ್ಬಂದಿ ಬೋನಿಗೆ ಕೂಡಿದ್ದ ರೈತರ ಮೇಲೆ ಎಫ್‌ಐಆರ್‌ ದಾಖಲು | Kannada Prabha

ಸಾರಾಂಶ

ನಾನು ಬೋನಿನೊಳಗೆ ಇದ್ದಾಗ ಬೋನಿನ ಸುತ್ತಲೂ ಸೌದೆಗಳನ್ನು ತಂದು ಹಾಕಿ ನಿಮ್ಮನ್ನು ಜೀವಂತ ಸುಟ್ಟು ಹಾಕುತ್ತೇನೆ ಎಂದು ಕೂಗಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಹುಲಿ ಪತ್ತೆಗೆ ಬಂದ ಅರಣ್ಯ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅಕ್ರಮವಾಗಿ ಬೋನಿನಲ್ಲಿ ಬಂಧನ ಮಾಡಿದ್ದಾರೆ. ಅಲ್ಲದೆ ಜೀವಂತ ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಐದು ಮಂದಿ ರೈತರ ಮೇಲೆ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ವಿಶೇಷ ಹುಲಿ ಸಂರಕ್ಷಣಾ ದಳದ ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ, ಕಾರ್ತಿಕ್‌ ಯಾದವ್‌, ವಿನಯ್‌ ಕುಮಾರ್‌ ಸೇರಿದಂತೆ ಎಡಿಎಸ್‌ ವಾಚರ್‌, ಬೀಟ್‌ ಫಾರೆಸ್ಟ್‌ ಗಾರ್ಡ್‌, ಪಿಸಿಪಿ ವಾಚರ್‌, ಕುಂದಕೆರೆ ವಲಯದ ಜೀಪು ಚಾಲಕ, ಎಸ್‌ಟಿಪಿಎಫ್‌ ಜೀಪು ಚಾಲಕ 13 ಮಂದಿ ಪೊಲೀಸರಿಗೆ ಬೊಮ್ಮಲಾಪುರ ಗ್ರಾಮದ ರಘು (ಎ-1),ಪ್ರಸಾದ್‌ (ಎ-2), ದೀಪು (ಎ.3), ಗಂಗಾಧರಸ್ವಾಮಿ (ಎ-4), ರೇವಣ್ಣ (ಎ-5)ರ ಮೇಲೆ ದೂರು ಸಲ್ಲಿಸಿದ್ದಾರೆ.ದೂರಿನ ವಿವರ:

ಸೆ. 9ರ ಬೆಳಗ್ಗೆ 11.30 ಗಂಟೆಗೆ ಗಂಗಾಧರಸ್ವಾಮಿ ಜಮೀನಿನಲ್ಲಿ 13 ಮಂದಿ ದೂರುದಾರರು ಬಂದಾಗ ಮೇಲ್ಕಂಡ ಐವರು ನಮ್ಮ ಮೇಲೆ ಜೀಪು ತಡೆದರೂ ನಿಲ್ಲಿಸಲಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದರು.ಬಳಿಕ ಎರಡು ಜೀಪಿನ ಚಕ್ರದ ಗಾಳಿ ಬಿಟ್ಟರು.

ನಂತರ ಹುಲಿ ಸೆರೆಗೆ ಇಡಲಾಗಿದ್ದ ಬೋನಿಗೆ ಬಳಿಗೆ ನಡೆಯಿರಿ ಎಂದು ತಳ್ಳಿಕೊಂಡು ಹೋದರು. ಐದು ಜನರು ಸೇರಿಕೊಂಡು ನೀವು ಹುಲಿ ಹಿಡಿಯುವ ಬದಲು ನೀವೇ ಬೋನಿನಲ್ಲಿರಿ ಎಂದು ನಮ್ಮನ್ನೆಲ್ಲ ಬೋನಿಗೆ ತಳ್ಳಿ ಅರಣ್ಯ ಇಲಾಖೆ ಮೇಲಾಧಿಕಾರಿಗಳು ಬರುವವರೆಗೆ ಇರಿ ಎಂದು ಹೊರಗಿನಿಂದ ಲಾಕ್‌ ಮಾಡಿಕೊಂಡರು.

ನಾನು ಬೋನಿನೊಳಗೆ ಇದ್ದಾಗ ಬೋನಿನ ಸುತ್ತಲೂ ಸೌದೆಗಳನ್ನು ತಂದು ಹಾಕಿ ನಿಮ್ಮನ್ನು ಜೀವಂತ ಸುಟ್ಟು ಹಾಕುತ್ತೇನೆ ಎಂದು ಕೂಗಾಡಿದರು. ಎಸಿಎಫ್‌ ಬರುವಷ್ಟರಲ್ಲಿ ಕೆಲವರು ಸ್ಥಳಕ್ಕೆ ಬಂದು ಬೋನಿನಿಂದ ಹೊರಗೆ ಬಿಟ್ಟರು. ಕರ್ತವ್ಯಕ್ಕೆ ಅಡ್ಡಿಪಡಿಸಿ, ಸರ್ಕಾರಿ ಜೀಪಿನ ಚಕ್ರದ ಗಾಳಿ ತೆಗೆದು,ಚಾಲಕರ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಬೋನಿಗೆ ಒಳಗೆ ಅಕ್ರಮ ಬಂಧನದಲ್ಲಿರಿಸಿ, ನಿಮ್ಮನ್ನು ಜೀವಂತವಾಗಿ ಸುಟ್ಟ ಹಾಕುವುದಾಗಿ ಸಾರ್ವಜನಿಕವಾಗಿ ಪ್ರಚೋದನೆ ಮಾಡಿದ್ದಾರೆ.

ದೂರಿನ ಆಧಾರದ ಮೇರೆಗೆ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್)ರ ಕಾಯ್ದೆ ಮತ್ತು ಕಲಂ ಅನ್ವಯ(ಯು/ಎಸ್-‌ 126 (2), 127(2), 189(2), 190, 191(2), 132, 351(3), 351(2), 352, (79) ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಗುಂಡ್ಲುಪೇಟೆ ಪೊಲೀಸರು ಐವರ ಬಂಧನಕ್ಕೆ ಬಲೆ ಬೀಸಿದ್ದಾರೆ.

೧೦ಜಿಪಿಟಿ೩

ಕನ್ನಡಪ್ರಭ ಪತ್ರಿಕೆಯಲ್ಲಿ ಹುಲಿ ಹಿಡಿಯಲು ತಡವಾಗಿ ಬಂದ ಅರಣ್ಯ ಸಿಬ್ಬಂದಿಯನ್ನೇ ಬೋನಲ್ಲಿ ಕೂಡಿಟ್ಟ ರೈತರು ಎಂದು ಸುದ್ದಿ ಪ್ರಕಟವಾಗಿದೆ.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ