ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Jun 24, 2026, 01:15 AM IST
5 | Kannada Prabha

ಸಾರಾಂಶ

ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯಲ್ಲಿ ಯದುವೀರ್, ಪ್ರತಾಪ್ ಸಿಂಹ, ಎಲ್. ನಾಗೇಂದ್ರ ಭಾಗಿ

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ರೈಲು ನಿಲ್ದಾಣದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಮಾಹಿತಿ ನೀಡಿದ ಹಿಂದೂ ಕಾರ್ಯಕರ್ತರ ವಿರುದ್ಧವೇ ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿ ಹಾಗೂ ಅಕ್ರಮ ಬಾಂಗ್ಲಾದೇಶ ವಲಸಿಗರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯವರು ನಗರದ ಗಾಂಧಿ ಚೌಕದಲ್ಲಿ ಮಂಗಳವಾರ ಪ್ರತಿಭಟಿಸಿದರು.ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಅಕ್ರಮ ವಲಸಿಗರ ವಿರುದ್ಧ ಸಮಗ್ರ ತನಿಖೆ ನಡೆಸದೆ, ಅವರನ್ನು ಹಿಡಿದುಕೊಟ್ಟ ಕಾರ್ಯಕರ್ತರ ಮೇಲೆಯೇ ಕ್ರಮ ಜರುಗಿಸಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತದ ಅಧ್ಯಕ್ಷ ಮಹೇಶ್ ಮಾತನಾಡಿ, ಗೃಹ ಸಚಿವರ ಕುಮ್ಮಕ್ಕಿನಿಂದಲೇ ಹಿಂದೂ ಪರ ಸಂಘಟನೆ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೂರು ಬೋಗಿಯಲ್ಲಿ ಅಕ್ರಮ ಬಾಂಗ್ಲ ವಲಸಿಗರು ಬರುತ್ತಾರೆ ಎಂಬ ಮಾಹಿತಿ ಇತ್ತು. ಪೊಲೀಸರಿಗೆ ಈ ವಿಚಾರ ತಿಳಿಸಿ ಹಿಂದೂ ಕಾರ್ಯಕರ್ತರು ಸಹಕಾರಕ್ಕೆ ನಿಂತರು. ಸಹಕಾರ ಕೊಟ್ಟವರ ಮೇಲೆಯೇ ಪೊಲೀಸರು ಎಫ್‌ಐಆರ್ ಹಾಕಿದರು ಎಂದು ಆರೋಪಿಸಿದರು.ಆಧಾರ್ ಕಾರ್ಡ್ ಮಾತ್ರ ಪರಿಶೀಲನೆ ಮಾಡೋದು ಪೊಲೀಸರ ಕರ್ತವ್ಯ ಅಲ್ಲ. ಶಂಕಿತರ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ಮಾಡಬೇಕಿತ್ತು. ಹಿಂದೂ ಕಾರ್ಯಕರ್ತರ ಹೋರಾಟಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇತ್ತು. ಆದರೆ, ನಮ್ಮ ವಿರುದ್ಧವೇ ಎಫ್‌ಐಆರ್ ಮಾಡಿದ್ದಾರೆ. ಇದಕ್ಕೆ ನಾವು ಹೆದರೋದಿಲ್ಲ. ಕಾನೂನಿನ ಅಡಿಯಲ್ಲೇ ಇನ್ನು ಮುಂದೆ ಅಕ್ರಮ ವಲಸಿಗರನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಅವರು ಎಚ್ಚರಿಸಿದರು.ಸಂಘಟನೆಯ ಜಿಲ್ಲಾ ಸಂಚಾಲಕ ಪ್ರಶಾಂತ್‌ ಮಾತನಾಡಿ, ರೈಲಿನಲ್ಲಿ ಬಂದ ಶಂಕಿತ ಪ್ರಯಾಣಿಕರನ್ನು ವಿಚಾರಣೆ ನಡೆಸದೆ, ಪೊಲೀಸರಿಗೆ ಸಹಾಯ ಮಾಡಿದ ಸಂಘಟನೆಯ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನಿಯ. ರಾಜ್ಯಕ್ಕೆ ನಿತ್ಯ ಅನೇಕ ಬಾಂಗ್ಲಾ ವಲಸಿಗರು ನಕಲಿ ದಾಖಲೆ ಇಟ್ಟುಕೊಂಡು ಪಶ್ಚಿಮ ಬಂಗಾಳದಿಂದ ಬರುತ್ತಿದ್ದಾರೆ ಎಂಬ ಆರೋಪ ಇದೆ. ಸರ್ಕಾರ ಇದರ ಗಂಭೀರತೆ ಅರಿತು ಪರಿಶೀಲನೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಭಾನುವಾರ ಪಶ್ಚಿಮ ಬಂಗಾಳದಿಂದ ಬಂದ ಶಂಕಿತ ಪ್ರ್ಯಾಣಿಕರಲ್ಲಿದ್ದ ಆಧಾರ್‌ ಕಾರ್ಡ್‌ ನಲ್ಲಿ ಅನೇಕ ಗೊಂದಲಕಾರಿ ಅಂಶಗಳಿದ್ದವು. ಅಣ್ಣ – ತಮ್ಮಂದಿರ ಹುಟ್ಟಿದ ದಿನ 15 ದಿನವಷ್ಟೇ ವ್ಯತ್ಯಾಸವಿತ್ತು. ಇಂತಹ ವಿಷಯಗಳನ್ನು ಪೊಲೀಸರು ಪರಿಶೀಲಿಸಿ, ಅವರ ವಿರುದ್ಧ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡರಾದ ಫಣಿಶ್, ವಸಂತ್ ಕುಮಾರ್, ಗಿರಿಧರ್, ಪ್ರಭಾಕರ್, ಚಂದ್ರುಸ್ವಾಮಿ, ಮಹೇಶ್‌ ಕಡಗದಾಲು, ರಾಜಣ್ಣ, ಮನು ಶ್ರೀನಿವಾಸ್‌, ಹೇಮಾ ನಂದೀಶ್, ಜೋಗಿ ಮಂಜು, ರಾಕೇಶ್ ಗೌಡ, ಗಿರೀಶ್ ಗೌಡ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಖಾಸಗೀಕರಣ ನೇಕಾರರಿಗೆ ಕಂಟಕ
ಕೋಮುವಾದಕ್ಕೆ ಬಳಕೆಯಾಗುವ ಭಕ್ತಿ ಅಪ್ರಸ್ತುತ: ಕಾ.ತ.ಚಿಕ್ಕಣ್ಣ