ಒಂದೇ ದಿನ ಮೂರು ಕಡೆಗಳಲ್ಲಿ ಅಗ್ನಿ ಆಕಸ್ಮಿಕ

KannadaprabhaNewsNetwork |  
Published : Mar 03, 2024, 01:33 AM IST
ಹೊಸದುರ್ಗ ತಾಲೂಕು ಶ್ರೀರಾಂಪುರದಲ್ಲಿ ತೆಂಗಿನ ತೋಟಕ್ಕೆ ಬೆಂಕಿ ಬಿದ್ದು ತೆಂಗಿನ ಮರ ಹೊತ್ತಿ ಉರಿಯುತ್ತಿರುವುದು.ಪೋಟೋ, 2 ಎಚ್‌ಎಸ್‌ಡಿ2 : ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದಲ್ಲಿ ಸಿಲಿಂಡರ್‌ ಸ್ಪೋಟಗೊಂಡು ಗುಡಿಸಲು ಸುಟ್ಟು ಹೊಗಿರುವುದು. | Kannada Prabha

ಸಾರಾಂಶ

ಏಕಕಾಲಕ್ಕೆ ಮೂರು ಘಟನೆಗಳು ನಡೆದಿದ್ದರಿಂದ ಅಗ್ನಿಶಾಮಕ ವಾಹನವೂ ಒಂದು ಇರುವುದರಿಂದ ಇನ್ನೆರೆಡು ಕಡೆ ಸಾರ್ವಜನಿಕರು ನಂದಿಸಿದ್ದಾರೆ.ಕಳೆದ ಫೆಬ್ರವರಿ ತಿಂಗಳಲ್ಲಿ 40 ಅಗ್ನಿ ಅವಘಡಗಳು ವರದಿಯಾಗಿದ್ದು ಕೇವಲ 20 ಅವಘಡಗಳ ಸ್ಥಳಗಳಿಗೆ ಹೋಗಲು ಸಾಧ್ಯವಾಗಿದೆ.

ಹೊಸದುರ್ಗ: ತಾಲೂಕಿನ ಶ್ರೀರಾಂಪುರದಲ್ಲಿನ ಹೊಸದುರ್ಗ ಮುಖ್ಯ ರಸ್ತೆಯಲ್ಲಿರುವ ಗ್ಯಾಸ್‌ ಸಿಲಿಂಡರ್‌ ಗೋಡೌನ್‌, ಕಂಚೀಪುರ ಗ್ರಾಮದಲ್ಲಿ ಸಿಲಿಂಡರ್‌ ಸ್ಫೋಟಗೊಂಡು 2 ಗುಡಿಸಲು ಭಸ್ಮ ಹಾಗೂ ಪೆಟ್ರೋಲ್‌ ಬಂಕ್‌ ಬಳಿಯ ತೆಂಗಿನ ತೋಟದಲ್ಲಿ ಬೆಂಕಿ ತಗುಲಿ ಶನಿವಾರ ಮಧ್ಯಾಹ್ನ ಏಕಕಾಲದಲ್ಲಿ ಮೂರು ದುರ್ಘಟನೆ ಸಂಭವಿಸಿದೆ.

ಏಕಕಾಲಕ್ಕೆ ಮೂರು ಘಟನೆಗಳು ನಡೆದಿದ್ದರಿಂದ ಅಗ್ನಿಶಾಮಕ ವಾಹನವೂ ಒಂದು ಇರುವುದರಿಂದ ಇನ್ನೆರೆಡು ಕಡೆ ಸಾರ್ವಜನಿಕರು ನಂದಿಸಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲಿ 40 ಅಗ್ನಿ ಅವಘಡಗಳು ವರದಿಯಾಗಿದ್ದು ಕೇವಲ 20 ಅವಘಡಗಳ ಸ್ಥಳಗಳಿಗೆ ಹೋಗಲು ಸಾಧ್ಯವಾಗಿದೆ. ಈ ತಿಂಗಳ 2 ದಿನದಲ್ಲಿಯೇ 8 ಅವಘಡಗಳು ಸಂಭವಿಸಿದ್ದು ಕೇವಲ 3 ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗಿದೆ. ಕಚೇರಿಯಲ್ಲಿ ಸಿಬ್ಬಂದಿಗಳಿದ್ದರೂ ವಾಹನವಿಲ್ಲ ಏನು ಮಾಡಲಿ ಎನ್ನುತ್ತಾರೆ ಹೊಸದುರ್ಗ ಅಗ್ನಿಶಾಮದ ಠಾಣೆಯ ಪ್ರಭಾರ ಠಾಣಾಧಿಕಾರಿ ಗುಡುಗನಹಟ್ಟಿ.

ಈ ಮೊದಲು ಹೊಸದುರ್ಗದಲ್ಲಿ 2 ವಾಹನಗಳಿದ್ದವು ಆದರೆ ಸರ್ಕಾರದ ನಿರ್ದೇಶನದಂತೆ ಹಳೆಯ ವಾಹನ ಸ್ಕ್ರಾಪ್‌ ಎಂದು ನಿಲ್ಲಿಸಲಾಗಿದೆ. ಹಾಗಾಗಿ ಈಗಿರುವುದು ಒಂದೇ ವಾಹನವಾದ್ದರಿಂದ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ವಾಹನ ಠಾಣೆಗೆ ನೀಡಿದರೆ ಸಾರ್ವಜನಿಕರ ಕೋರಿಕೆಗೆ ತಕ್ಕಂತೆ ಸ್ಪಂದಿಸಲು ಸಾಧ್ಯ ಎನ್ನುತ್ತಾರೆ ಸಿಬ್ಬಂದಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ