ಚೇಷ್ಟೆಗೆ ಹೆಸರಾಗಿರುವ ಕೋತಿಗಳು ಒಮ್ಮೊಮ್ಮೆ ತಮ್ಮ ವಿಶೇಷ ವರ್ತನೆಗಳಿಂದ ಎಲ್ಲರ ಗಮನ ಸೆಳೆಯುತ್ತವೆ. ಜೊತೆಗೆ, ನೋಡುಗರ‌‌ ಮೊಗದಲ್ಲಿ ನಗುವನ್ನು ಉಕ್ಕಿಸುತ್ತವೆ. ಅದರಂತೆ, ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಕೋತಿಗೆ ಹೇರ್‌ ಸ್ಟೈಲ್ ಮಾಡಿದ ಅಪರೂಪದ ಘಟನೆ ನಡೆದಿದೆ.

ಚಾಮರಾಜನಗರ : ಚೇಷ್ಟೆಗೆ ಹೆಸರಾಗಿರುವ ಕೋತಿಗಳು ಒಮ್ಮೊಮ್ಮೆ ತಮ್ಮ ವಿಶೇಷ ವರ್ತನೆಗಳಿಂದ ಎಲ್ಲರ ಗಮನ ಸೆಳೆಯುತ್ತವೆ. ಜೊತೆಗೆ, ನೋಡುಗರ‌‌ ಮೊಗದಲ್ಲಿ ನಗುವನ್ನು ಉಕ್ಕಿಸುತ್ತವೆ. ಅದರಂತೆ, ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಕೋತಿಗೆ ಹೇರ್‌ ಸ್ಟೈಲ್ ಮಾಡಿದ ಅಪರೂಪದ ಘಟನೆ ನಡೆದಿದೆ.

ಕೋತಿಯೊಂದು ದಿನವೂ ಬಂದು ಹೋಗುತ್ತಿತ್ತು

ಗ್ರಾಮದ ದೇವು ಸಲೂನ್ ಎಂಬಲ್ಲಿಗೆ ಕೋತಿಯೊಂದು ದಿನವೂ ಬಂದು ಹೋಗುತ್ತಿತ್ತು.‌ ಕನ್ನಡಿ‌ ನೋಡುತ್ತಾ ಕುಳಿತುಕೊಳ್ಳುತ್ತಿತ್ತು.‌ ಇದನ್ನು ಗಮನಿಸಿದ ಸಲೂನ್ ಮಾಲೀಕ ದೇವರಾಜ್‌ ಗದರಿಸಿದರೂ‌ ಕೋತಿ ಸಲೂನ್ ಬಿಟ್ಟು ಹೋಗುತ್ತಿರಲಿಲ್ಲ.

ತಲೆ ಬಾಚಿ ಹೇರ್‌ ಸ್ಟೈಲ್

ಗುರುವಾರದಂದು ಸಲೂನ್‌ಗೆ ಬಂದ ಮಂಗನನ್ನು ಕಂಡ ದೇವರಾಜ್ ಮೊದಲು ತಲೆ ಬಾಚಿದ್ದಾರೆ. ಪ್ರೀತಿಯಿಂದ ತಲೆ ಬಾಚಿದ್ದನ್ನು ಗಮನಿಸಿದ ಕೋತಿ ಮನುಷ್ಯರಂತೆ ತಲೆ ಬಗ್ಗಿಸಿ ಕುಳಿತಿದೆ.‌ ನಂತರ ಹೇರ್‌ ಸ್ಟೈಲ್ ಮಾಡಿದ್ದು, ಅಲ್ಲಿಯೇ ಇದ್ದ ಗ್ರಾಹಕರೊಬ್ಬರು ವಿಡಿಯೋ ಸೆರೆ ಹಿಡಿದಿದ್ದಾರೆ.

ಈ ಕುರಿತು ದೇವರಾಜು ಮಾತನಾಡಿ, ಗುಂಪೊಂದರಲ್ಲಿ ಇದ್ದ ಈ ಮಂಗ ದಿನನಿತ್ಯ ಸಲೂನ್ ಬಳಿ ಬರುತ್ತಿತ್ತು. ಎಷ್ಟೇ ಗದರಿಸಿದರೂ ನನ್ನ ಕೆಲಸ ಮುಗಿಯುವವರೆಗೂ ಅಲ್ಲಿಂದ ಕದಲುತ್ತಿರಲಿಲ್ಲ. ತಮಾಷೆಗಾಗಿ ತಲೆ ಬಾಚಿದೆ, ಕೋತಿ ತಲೆ ಬಗ್ಗಿಸಿ ಕುಳಿತು ಮತ್ತಷ್ಟು ತಲೆ ಬಾಚುವಂತೆ ಕೇಳಿಕೊಳ್ಳುವಂತೆ ವರ್ತಿಸಿದಾಗ ಹೇರ್‌ಸ್ಟೈಲ್ ಮಾಡಿದೆ ಎಂದರು.