ಕಾಡ್ಗಿಚ್ಚು: ಕಾಡಿನ ಸಂಪತ್ತಿಗೆ ಹಾನಿ

KannadaprabhaNewsNetwork |  
Published : Jan 09, 2026, 03:00 AM IST
ಕಾಡ್ಗಿಚ್ಚು | Kannada Prabha

ಸಾರಾಂಶ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ, ಬಿಳಿಯೂರು ಗ್ರಾಮದ ಬಳಪು, ತುರ್ವೆರೆ ಗುರಿ, ಪೂ ಪಾಡಿಕಲ್ಲು, ಕುಂಕತೋಟ ಎಂಬಲ್ಲಿ ಕಾಡ್ಗಿಚ್ಚು ಉಂಟಾಗಿ ಭಾರಿ ಪ್ರಮಾಣದಲ್ಲಿ ಕಾಡಿನ ಸಂಪತ್ತು ಹಾನಿಗೀಡಾದ ಘಟನೆ ಗುರುವಾರ ಸಂಭವಿಸಿದೆ.

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ, ಬಿಳಿಯೂರು ಗ್ರಾಮದ ಬಳಪು, ತುರ್ವೆರೆ ಗುರಿ, ಪೂ ಪಾಡಿಕಲ್ಲು, ಕುಂಕತೋಟ ಎಂಬಲ್ಲಿ ಕಾಡ್ಗಿಚ್ಚು ಉಂಟಾಗಿ ಭಾರಿ ಪ್ರಮಾಣದಲ್ಲಿ ಕಾಡಿನ ಸಂಪತ್ತು ಹಾನಿಗೀಡಾದ ಘಟನೆ ಗುರುವಾರ ಸಂಭವಿಸಿದೆ. ಪೆರ್ನೆ ಗ್ರಾಮದಲ್ಲಿ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಪಸರಿಸಿ ಬಿಳಿಯೂರು, ಕೋಡಿಂಬಾಡಿ ಪ್ರದೇಶದ ನೆಡುತೋಪು ಪ್ರದೇಶವನ್ನು ಆವರಿಸಿತು. ಇದರಿಂದಾಗಿ ಈ ಪ್ರದೇಶದಲ್ಲಿದ್ದ ಸಾವಿರಾರು ಗೇರು ಮರಗಳು ಇನ್ನಿತರ ಕಾಡು ಮರಗಳು ಬೆಂಕಿಗಾಹುತಿಯಾಗಿ ಅಪಾರ ನಷ್ಠ ಸಂಭವಿಸಿದೆ.

ಹಾವು ಕಡಿತ:ಕಾಡ್ಗಿಚ್ಚು ಪಸರಿಸುತ್ತಿದ್ದಂತೆಯೇ ಅದನ್ನು ನಂದಿಸಲು ಗೇರು ಅಭಿವೃದ್ಧಿ ನಿಗಮ, ಅರಣ್ಯ ಇಲಾಖಾಧಿಕಾರಿಗಳ ತಂಡ ಮತ್ತು ಸ್ಥಳೀಯರು ಅಗ್ನಿಶಾಮಕ ದಳದ ಸಹಾಯ ಪಡೆದು ಶ್ರಮಿಸುತ್ತಿದ್ದರು. ಅರಣ್ಯ ವೀಕ್ಷಕ ಶೇಖರ ಪೂಜಾರಿ ಅವರು ಬೆಂಕಿ ನಿಯಂತ್ರಿಸುತ್ತಿದ್ದಾಗ ವಿಷಪೂರಿತ ಹಾವೊಂದು ಅವರಿಗೆ ಕಚ್ಚಿದೆ. ತಕ್ಷಣವೇ ಅವರನ್ನು ಕಾರ್ಯಾಚರಣೆಯಲಿ ತೊಡಗಿದ್ದ ನೆಡುತೋಪು ಅಧೀಕ್ಷಕ ರವಿಪ್ರಸಾದ್ ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ದರು.

ಬೆಂಕಿ ನಿಯಂತ್ರಣ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ಕಾಂತರಾಜು, ಸುಧೀರ್ ಹೆಗ್ಡೆ, ಉಲ್ಲಾಸ್ ಭಾಗವಹಿಸಿದ್ದರು. ಪುತ್ತೂರಿನ ಅಗ್ನಿಶಾಮಕ ದಳ ಬೆಂಕಿ ನಿಯಂತ್ರಿಸಲು ಶ್ರಮಿಸಿತು. ಕಾಡ್ಗಿಚ್ಚು ಪಸಹರಿಸಿದ ಸ್ಥಳದ ಬಳಿ ಜನವಸತಿ ಇದ್ದ ಕಾರಣ ಹೆಚ್ಚಿನ ಅನಾಹುತ ಆಗದಂತೆ ಸ್ಥಳೀಯರು ಮತ್ತು ಇಲಾಖಾಧಿಕಾರಿಗಳು ಕಾಳಜಿ ವಹಿಸಿ ಶ್ರಮಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ