- ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಸಂಸದ ಸಿದ್ದೇಶ್ವರ ತಾಕೀತು- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ಬಂಟರ ಭವನದಲ್ಲಿ ಬುಧವಾರ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ತಮ್ಮ ಪತ್ನಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮತಯಾಚಿಸಿ ಮಾತನಾಡಿದ ಅವರು, ನಮ್ಮ ಅಡಕೆ ಉದ್ಯಮದ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ನಾವು ರಣರಣ ದುಡಿದು, ವಿದ್ಯಾಸಂಸ್ಥೆಯನ್ನು ಕಟ್ಟಿದ್ದೇವೆ. ಯಾರದ್ದೋ ಹೊಡೆದುಕೊಂಡಿಲ್ಲ ಎಂದರು.
ಸಿದ್ದವೀರಪ್ಪನವರು ಕಟ್ಟಿದ ಸಕ್ಕರೆ ಕಾರ್ಖಾನೆ ನುಂಗಿದ್ದಾಯ್ತು. ಭದ್ರಾ ಸಕ್ಕರೆ ಕಾರ್ಖಾನೆ ನುಂಗಿದ್ದು ಆಯ್ತಲ್ಲ. ನಾವು ದಾನ, ಧರ್ಮ, ಪುಣ್ಯ ಕಾರ್ಯಕ್ಕೆ ನೆರವು ನೀಡುತ್ತೇವೆ. ಕೊಟ್ಟಿದ್ದಕ್ಕೆಲ್ಲಾ ಬೋರ್ಡ್ ಹಾಕಿಸುವುದಿಲ್ಲ. ಬಲಗೈಯಲ್ಲಿ ಕೊಟ್ಟಿದ್ದು, ಬಲಗೈಗೆ ಗೊತ್ತಾಗದಂತೆ ಇದ್ದೇವೆ. ಒಬ್ಬ ಸಚಿವ ಸ್ಥಾನದಲ್ಲಿರುವ ವ್ಯಕ್ತಿ ಮತ್ತೊಬ್ಬರ ಬಗ್ಗೆ ಅಷ್ಟೊಂದು ವೈಯಕ್ತಿಕವಾಗಿ, ಕೀಳಾಗಿ ಮಾತನಾಡುವುದು ಶೋಭೆಯಲ್ಲ. ಹಿಂದಿನಿಂದಲೂ ನಾನು ಪರ ಜಿಲ್ಲೆಯವರು, ನಾನು ಸತ್ತೇ ಹೋದೆ, ನಾನು ಸೂಳೆಕೆರೆ ನೀರನ್ನು ಚಿತ್ರದುರ್ಗಕ್ಕೆ ಒಯ್ದೆ ಹೀಗೆ ನಾನು ಆರೋಪ ಮಾಡಿಕೊಂಡೆ ಬಂದರೂ ದಾವಣಗೆರೆ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು, ಆಶೀರ್ವದಿಸುತ್ತಲೇ ಬಂದಿದ್ದಾರೆ ಎಂದು ಅವರು ತಿಳಿಸಿದರು.ಜಿಲ್ಲಾ ಮಂತ್ರಿಯಾಗಿ ಎಷ್ಟು ಹಳ್ಳಿಗೆ ಭೇಟಿ ನೀಡಿದ್ದೀರಿ? ಈಗ ಪತ್ನಿಯನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿಕೊಂಡು ಭೈರನಪಾದ ಏತ ನೀರಾವರಿ ಯೋಜನೆ ಮಾಡುವೆ, ಕೆರೆಗಳಿಗೆ ನೀರು ತುಂಬಿಸುವೆ, ಹಳ್ಳಿಗಳಿಗೆ ನೀರು ಕೊಡುವೆ ಅಂತಾ ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಟೆಕ್ನಾಲಜಿ ಪಾರ್ಕ್ ಮಾಡಿಸಿದ್ದೇನೆ. 3 ಕಂಪನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಐಟಿ ಬಿಟಿ ಕಂಪನಿ, ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿ ವಿಮಾನ ನಿಲ್ದಾಣಕ್ಕೆ ಜಾಗ ಕೊಟ್ಟರೆ ಅದನ್ನು ಕೇಂದ್ರದಿಂದ ಮಂಜೂರು ಮಾಡಿಸುವುದು ನನ್ನ ಜವಾಬ್ಧಾರಿ. ಕೈಗಾರಿಕೆ ಮಾಡಲು ಭೂ ಸ್ವಾಧೀನಕ್ಕೆ ಮುಂದಾದರೆ ಅಡ್ಡಿ ಪಡಿಸುತ್ತಾರೆ ಎಂದು ಅವರು ಬೇಸರ ಹೊರ ಹಾಕಿದರು.
- - - -1ಕೆಡಿವಿಜಿ5:
ದಾವಣಗೆರೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿದರು.- - -