
ಕನ್ನಡಪ್ರಭ ವಾರ್ತೆ ಮಡಿಕೇರಿ
ಬೆಂಕಿ ಸಂಭವಿಸಿದಲ್ಲಿ ನಂದಿಸುವುದು ಹೇಗೆ, 101 ಅಥವಾ 112 ಗೆ ತಕ್ಷಣವೇ ಕರೆ ಮಾಡಿ, ಮಾಹಿತಿ ನೀಡುವುದು, ಅವಘಡಕ್ಕೆ ತುತ್ತಾದವರನ್ನು ಹೊರಗಡೆ ಕರೆತಂದು ಪ್ರಥಮ ಚಿಕಿತ್ಸೆ ನೀಡುವುದು, ಹೆಚ್ಚಿನ ತೊಂದರೆಗೆ ಸಿಲುಕಿದವರನ್ನು ಆಸ್ಪತ್ರೆಗೆ ಸಾಗಿಸುವುದು. ಇದಕ್ಕೂ ಮೊದಲು ಪ್ರಥಮ ಚಿಕಿತ್ಸೆಯನ್ನು ನೀಡಿ ಉಪಚರಿಸುವುದು ಮತ್ತಿತರ ಬಗ್ಗೆ ಅಗ್ನಿಶಾಮಕ, ಗೃಹ ರಕ್ಷಕ ದಳದ ಅಧಿಕಾರಿಗಳು ಮತ್ತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಬೆಂಕಿ ಅವಘಡ ಸಂಭವಿಸಿದಲ್ಲಿ ಸಾರ್ವಜನಿಕರನ್ನು ಹೊರಗಡೆಗೆ ಕರೆತರುವುದು, ಆರೋಗ್ಯ ಉಪಚರಿಸುವುದು, ಸೇರಿದಂತೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವುದು, ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸುವುದು ಮತ್ತಿತರ ಬಗ್ಗೆ ಅಗ್ನಿಶಾಮಕ, ಗೃಹ ರಕ್ಷಕ ದಳ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಿಬ್ಬಂದಿಗಳು ಪಾಲ್ಗೊಂಡು ಅಣಕು ಪ್ರದರ್ಶನ ನಡೆಸಿದ್ದು ನೋಡುಗರ ಗಮನ ಸೆಳೆಯಿತು.ಈ ಸಂದರ್ಭ ಮಾತನಾಡಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ ಭಂಡಾರಿ ಯಾವುದೇ ಸಂದರ್ಭದಲ್ಲಿ ಕಟ್ಟಡ ಅಥವಾ ಇತರೆ ಕಡೆಗಳಲ್ಲಿ ಅಗ್ನಿ ಕಾಣಿಸಿಕೊಂಡಲ್ಲಿ ಪ್ರಥಮವಾಗಿ ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು, ಜತೆಗೆ ಅಗ್ನಿ ಶಾಮಕ ಇಲಾಖೆಗೆ ತಕ್ಷಣವೇ ಕರೆ ಮಾಹಿತಿ ನೀಡಿ, ಅಗ್ನಿ ಅವಘಡ ತಪ್ಪಿಸುವಲ್ಲಿ ವಹಿಸಬೇಕಾದ ಎಚ್ಚರಿಕೆ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಮಾತನಾಡಿದರು. ಅಗ್ನಿಶಾಮಕ, ಅಗ್ನಿಶಾಮಕ ಠಾಣಾಧಿಕಾರಿ ಶೋಭಿತ್, ಗೃಹ ರಕ್ಷಕ ದಳದ ಅಧಿಕಾರಿ ಅಕ್ಷಯ್ ಕುಮಾರ್, ವೈದ್ಯಾಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು ಇತರರು ಇದ್ದರು.