ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ವೈಎಚ್‌ಎಐ) ಬೆಳುವಾಯಿ ಘಟಕದ ಮಹಾಸಭೆ ಜು. 12ರಂದು ಘಟಕದ ಕಚೇರಿ ಆವರಣದಲ್ಲಿ ನಡೆಯಿತು.
ಕಾರ್ಕಳ: ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ವೈಎಚ್‌ಎಐ) ಬೆಳುವಾಯಿ ಘಟಕದ ಮಹಾಸಭೆ ಜು. 12ರಂದು ಘಟಕದ ಕಚೇರಿ ಆವರಣದಲ್ಲಿ ನಡೆಯಿತು.
ಸಭೆಯಲ್ಲಿ 2026–2029ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುರಳಿಧರ್ ಎಸ್., ಉಪಾಧ್ಯಕ್ಷರಾಗಿ ಜಿನೇಂದ್ರ ಹೆಗ್ಡೆ ಹಾಗೂ ಡಾ. ರಮ್ಯ ಧರ್ಮವೀರ್, ಕಾರ್ಯಾಧ್ಯಕ್ಷರಾಗಿ ಜಯರಾಮ ಪೂಜಾರಿ, ಕಾರ್ಯದರ್ಶಿಯಾಗಿ ಸೂರಜ್ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿಯಾಗಿ ಸುಜಿತ್ ಕುಮಾರ್ ಹಾಗೂ ಖಜಾಂಜಿಯಾಗಿ ದಿಲೀಪ್ ಹೆಗ್ಡೆ ಆಯ್ಕೆಯಾದರು.ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಸಂತ ಕುಮಾರ್, ಸಂದೀಪ್ ಪೂಜಾರಿ, ರಾಜೇಂದ್ರ ಬಂಗೇರ, ಪ್ರಭಾ ಎಸ್., ಪ್ರಸನ್ನಾ ಕುಮಾರಿ, ನಿಶಾ ದಿವಾಕರ್, ನಿತೇಶ್ ಬಲ್ಲಾಳ್, ವಾಮನ ನಾಯ್ಕ್, ಅಶೋಕ್ ಶೆಟ್ಟಿ, ಉಮೇಶ್ ಕೋಟ್ಯಾನ್ ಹಾಗೂ ಉದಯ ಕುಮಾರ್ ಆಯ್ಕೆಯಾಗಿದ್ದಾರೆ.ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ವಸಂತ ಕುಮಾರ್ ಸದಸ್ಯರನ್ನು ಸ್ವಾಗತಿಸಿದರು. ಪ್ರಭಾ ಎಸ್. ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅಧ್ಯಕ್ಷ ಜಯರಾಮ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಜಿ ಸುಜಿತ್ ಕುಮಾರ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಬಳಿಕ ವಿವಿಧ ವಿಷಯಗಳ ಕುರಿತು ಚರ್ಚಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷ ಮುರಳಿಧರ್ ಎಸ್. ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಒಳಗೊಂಡು ಐತಿಹಾಸಿಕ ಚಾರಣ, ಸಾಹಸ ಚಟುವಟಿಕೆಗಳು, ಧಾರ್ಮಿಕ ಯಾತ್ರೆಗಳು, ಪ್ರವಾಸ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು. ಕಾರ್ಯದರ್ಶಿ ಸೂರಜ್ ಕೋಟ್ಯಾನ್ ವಂದಿಸಿದರು.