ಹತ್ತಿ ದಾಸ್ತಾನಿಗೆ ಬೆಂಕಿ: ರೈತ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ

KannadaprabhaNewsNetwork |  
Published : Nov 26, 2024, 12:45 AM IST
25ಕೆಪಿಡಿವಿಡಿ01 | Kannada Prabha

ಸಾರಾಂಶ

Fire to cotton stock: Forced to compensate farmer family

ಕನ್ನಡಪ್ರಭ ವಾರ್ತೆ ದೇವದುರ್ಗ

ತಾಲೂಕಿನ ಹೇರುಂಡಿ ಸೀಮಾಂತರ ಹೊಲದಲ್ಲಿ ಸಂಗ್ರಹಿಸಲಾಗಿದ್ದ ಹತ್ತಿ ದಾಸ್ತಾನಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ರೈತ ಯಲ್ಲಪ್ಪ ಛಲವಾದಿಗೆ ಅಪಾರ ಹಾನಿಯಾಗಿದ್ದು, ಕೂಡಲೇ ಪರಿಹಾರ ನೀಡಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ಸಂಘಟನೆ ಒಕ್ಕೂಟದ ಪದಾಧಿಕಾರಿಗಳ ನಿಯೋಗ ಸಂತ್ರಸ್ತ ರೈತನೊಂದಿಗೆ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿರಿಗೆ ಮನವಿ ಸಲ್ಲಿಸಿದರು. ಹೇರುಂಡಿ ಸೀಮಾಂತರದಲ್ಲಿ ಯಲ್ಲಪ್ಪ ಛಲವಾದಿ ರೈತನಿಗೆ ಸ.8ರಲ್ಲಿ 2 ಎಕರೆ, 33ಗುಂಟೆ ಜಮೀನಿದೆ. ಕೃಷ್ಣಾ ನದಿಯಿಂದ ನೀರಾವರಿ ಸೌಲಭ್ಯ ಪಡೆದುಕೊಂಡು ಹತ್ತಿ ಬಿಡಿಸಲಾಗಿದ್ದ 15 ಕ್ವಿಂಟಲ್ ಹತ್ತಿಯನ್ನು ಹೊಲದಲ್ಲಿಯೇ ಸಂಗ್ರಹಿಸಿಕೊಂಡಿದ್ದಾನೆ. ಆದರೆ, ನ.21ರಂದು ರಾತ್ರಿ ವೇಳೆ ದುಷ್ಕರ್ಮಿಗಳು ದಾಸ್ತಾನಿಗೆ ಬೆಂಕಿ ಇಟ್ಟಿದ್ದಾರೆ.

ಸಾಲ ಮಾಡಿಕೊಂಡು ಬೆಳೆದ ಬೆಳೆ ಭಸ್ಮವಾಗಿದ್ದು, ರೈತ ಸಂಕಷ್ಟದಲ್ಲಿದ್ದಾನೆ. ಕೂಡಲೇ ಪ್ರಕರಣವನ್ನು ತನಿಖೆಗೆ ಒಳಪಡಿಸಿ, ಹಾನಿಗೊಳಗಾದ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿ ಹನುಮಂತಪ್ಪ ಮನ್ನಾಪೂರಿ, ವೆಂಕಟೇಶ ಮನ್ನಾಪೂರಿ, ಭೀಮಣ್ಣ ಅಂಜಳ, ರಮೇಶ ಹೇರುಂಡಿ, ಲಕ್ಷ್ಮಣ ಮಸರಕಲ್, ವಿಶ್ವನಾಥ ಬಲ್ಲಿದವ, ಮೋಹನ ಬಲ್ಲಿದವ ಹಾಗೂ ಇತರರು ಇದ್ದರು.

----

ಫೋಟೊ: ದೇವದುರ್ಗ ಪಟ್ಟಣದ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿರಿಗೆ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಹಾಗೂ ಸಂತ್ರಸ್ತರು ಮನವಿ ಸಲ್ಲಿಸಿದರು.

25ಕೆಪಿಡಿವಿಡಿ01

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ