ಅಗ್ನಿ ಆರಾಧನೆಯಿಂದ ಸರ್ವ ಸಮಸ್ಯೆಗೆ ಪರಿಹಾರ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork |  
Published : Dec 09, 2025, 01:15 AM IST
ಡಿ.೮ ವೈ.ಎಲ್.ಪಿ. ೦೩ಕವಡಿಕೆರೆಯಲ್ಲಿ ಸ್ವರ್ಣವಲ್ಲೀ ಶ್ರೀಗಳು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಜನರಲ್ಲಿ ಅಧರ್ಮ ಹೆಚ್ಚಾದ ಪರಿಣಾಮದಿಂದಾಗಿ ಮನುಷ್ಯನಿಗೂ, ಮರ-ಗಿಡಗಳಿಗೂ ರೋಗಬಾಧೆ ಉಂಟಾಗುವುದು ಸಹಜ.

ರುದ್ರಹವನ, ವನಸ್ಪತಿ ಶಾಂತಿ, ನವಚಂಡೀಯಾಗ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಯಲ್ಲಾಪುರ

ಜನರಲ್ಲಿ ಅಧರ್ಮ ಹೆಚ್ಚಾದ ಪರಿಣಾಮದಿಂದಾಗಿ ಮನುಷ್ಯನಿಗೂ, ಮರ-ಗಿಡಗಳಿಗೂ ರೋಗಬಾಧೆ ಉಂಟಾಗುವುದು ಸಹಜ. ನಮ್ಮನ್ನಾಳುವವರು ಕೂಡ ಅಧರ್ಮದಲ್ಲಿ ನಡೆಯುತ್ತಿರುವುದು ಇಂತಹ ಸ್ಥಿತಿಗೆ ಉಂಟಾಗಬಹುದು ಎಂದು ಎನಿಸುತ್ತಿದೆ. ಇದಕ್ಕೆ ಧರ್ಮಾಚರಣೆಯೊಂದೇ ಪರಿಹಾರ ನೀಡಬಲ್ಲದು ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

ಸೋಮವಾರ ತಾಲೂಕಿನ ಯಲ್ಲಾಪುರ ಸೀಮಾ ವ್ಯಾಪ್ತಿಯ ಭಕ್ತರು ಶ್ರೀಕ್ಷೇತ್ರ ಕವಡಿಕೆರೆಯಲ್ಲಿ ೩ ದಿನಗಳ ಕಾಲ ರುದ್ರಹವನ, ವನಸ್ಪತಿ ಶಾಂತಿ, ನವಚಂಡೀಯಾಗ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಕ್ಷೇತ್ರ ಪುರೋಹಿತರಾದ ವಿ.ಮಹಾಬಲೇಶ್ವರ ಭಟ್ಟರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶಿವಮೊಗ್ಗದ ಸಂಸ್ಕೃತ ಗ್ರಾಮಕ್ಕೆ ಕೆಲವು ದಿನಗಳ ಹಿಂದೆ ಹೋಗಿದ್ದೆವು. ಅಲ್ಲಿ ೭ ಅಗ್ನಿಹೋತ್ರಿಗಳಿದ್ದಾರೆ. ವಿಶ್ವದಲ್ಲೆಲ್ಲಿಯೂ ಇಲ್ಲ. ಅನೇಕ ಶಾಸ್ತ್ರದ ವಿದ್ವಾಂಸರು, ಪಂಡಿತರು ಸದಾ ಸನ್ಯಾಸಿಗಳು ಕೂಡ ಇಲ್ಲಿ ಇರುವುದನ್ನು ಗಮನಿಸಿದ್ದೇವೆ. ಅಲ್ಲಿಯ ಜೀವನಕ್ರಮ ನಮ್ಮ ಪರಂಪರೆಯ ಮೌಲ್ಯವನ್ನು ಹೇಗೆ ನಡೆಸುತ್ತಿದ್ದಾರೆಂಬುದನ್ನು ಕಾಣಬಹುದಾಗಿದೆ. ನಿತ್ಯವೂ ಅಲ್ಲಿ ಅಗ್ನಿಯ ಆರಾಧನೆ ಇದೆ ಎಂದ ಶ್ರೀಗಳು, ಅಗ್ನಿ ಆರಾಧನೆಯಿಂದ ಸರ್ವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ದುರ್ಗಾ ಆರಾಧನೆ ಮೂಲಕ ಚಂಡೀಹವನ ಹೆಚ್ಚು ನಡೆಯಬೇಕು. ದುರ್ಗಾದೇವಿ ಅಗ್ನಿಸ್ವರೂಪಳು. ಅದರ ಆರಾಧನೆಯಲ್ಲಿ ಮಹತ್ವವಿದೆ. ನಾವು ಕಳೆದ ಒಂದೂವರೆ ವರ್ಷಗಳ ಹಿಂದೆಯೇ ಎಲೆಚುಕ್ಕೆ ರೋಗ ರಾಜ್ಯದ ವಿವಿಧೆಡೆ ಪ್ರಾರಂಭಗೊಂಡ ಹಿನ್ನೆಲೆ ನಮ್ಮ ಮಠದ ವ್ಯಾಪ್ತಿಯ ಶಿಷ್ಯರಲ್ಲಿ ಈಶ್ವರನ ಮತ್ತು ದೇವಿಯ ಆರಾಧನೆ ಮಾಡುವಂತೆ ಸೂಚಿಸಲಾಗಿತ್ತು. ಕೆಲವೆಡೆ ನಡೆದಿದೆ. ಆಯುರ್ವೇದ ಚರಕ ಸಂಹಿತೆಯಲ್ಲಿ ಹೇಳಲ್ಪಟ್ಟಿದೆ. ಅಧರ್ಮ ಹೆಚ್ಚಾದಾಗ ಇಂತಹ ಅನೇಕ ಕ್ಲಿಷ್ಟ ಸಮಸ್ಯೆಗಳು ಬರುತ್ತದೆಂಬುದು ಉಲ್ಲೇಖಿಸಲ್ಪಟ್ಟಿದೆ. ಅಡಕೆ ಬೆಳೆ ನಮ್ಮದು ಹೆಚ್ಚಾಗುತ್ತಿದೆ. ಅಂತೆಯೇ ಧರ್ಮದ ಆಚರಣೆ ತೀರಾ ಕಡಿಮೆಯಾಗುತ್ತಿದೆ. ಪೂರ್ವಜರ ಚಿಂತನೆ ಬಿಟ್ಟು ನಾವು ಧರ್ಮದಿಂದ ಅಧರ್ಮದತ್ತ ಸಾಗುತ್ತಿದ್ದೇವೆ. ಇದು ನಮ್ಮ ಸಮಾಜಕ್ಕೆ ಮಾರಕ ಎಂಬುದನ್ನು ಚಿಂತನೆ ಮಾಡಬೇಕಾದ ಸ್ಥಿತಿ ಬರುತ್ತಿದೆ. ಮಾತೆಯರು ಹೆಚ್ಚು ಧರ್ಮನಿಷ್ಠೆಯಿಂದ ನಡೆದಾಗ ಮನೆಯ ವಾತಾವರಣ ಧರ್ಮಮಯವಾಗುತ್ತದೆ ಎಂದರು.

ಕೃಷಿಕರಾದ ನಾವು ವೈಜ್ಞಾನಿಕತೆಯನ್ನು ಕೃಷಿಯಲ್ಲಿ ಅಳವಡಿಸಬೇಕು. ತಜ್ಞರ ಸಲಹೆ ಪಡೆಯಬೇಕು. ಸಾವಯವ, ಕೊಟ್ಟಿಗೆ ಗೊಬ್ಬರ ಬಳಸಬೇಕು. ವರ್ಷಕ್ಕೊಮ್ಮೆ ಮಣ್ಣಿನ ಗುಣ ಪರೀಕ್ಷಿಸಬೇಕು. ಇವನ್ನೆಲ್ಲ ನಮ್ಮ ಕೃಷಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ನಮ್ಮ ಧರ್ಮದ ಜೊತೆಯಲ್ಲಿ ನಮ್ಮ ಕೃಷಿ ಪದ್ಧತಿಯ ಬಗೆಗೂ ಕೃಷಿ ವಿಜ್ಞಾನಿಗಳ ಸಲಹೆ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾಗಿದೆ. ಎಲೆಚುಕ್ಕೆ ರೋಗ ತೀವ್ರಗತಿಯಲ್ಲಿ ವ್ಯಾಪಿಸುತ್ತಿದೆ. ಅದಕ್ಕೆ ದೇವರ ಮೊರೆ ಹೋಗುವುದೊಂದೇ ಪರಿಹಾರ ಎಂದರು.

ಶ್ರೀಮಠದ ಪ್ರಾಧ್ಯಾಪಕ ದೇವಸ್ಥಾನದ ಪುರೋಹಿತ ವಿ.ಮಹಾಬಲೇಶ್ವರ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ತಾಲೂಕಾ ಹವ್ಯಕ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಮಾರುತಿ ಘಟ್ಟಿ ಮಾತನಾಡಿ, ಬರುವ ಜ. ೧೫ರಂದು ಕಾಳಮ್ಮನಗರದ ಹವ್ಯಕ ನಿವೇಶನದಲ್ಲಿ ನೂತನ ಕಟ್ಟಡಕ್ಕೆ ಪೂಜ್ಯ ಶ್ರೀಗಳಿಂದ ಶಿಲಾನ್ಯಾಸ ನೆರವೇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ವಿನಂತಿಸಿದರು.

ಈ ಸಂದರ್ಭ ದೇವಸ್ಥಾನದ ಅಧ್ಯಕ್ಷ ವಿಶ್ವನಾಥ ಭಟ್ಟ ಮತ್ತು ಅರ್ಚಕ ಬಳಗ, ಪುರೋಹಿತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಗಾನಂದಗೆ ಯುವ ವಿಜ್ಞಾನ ಪ್ರಶಸ್ತಿ ಪ್ರದಾನ
ಆರೈಕೆದಾರರಿಗೆ ಕಾಸಿಲ್ಲದೇ ಮುಚ್ಚಿದ ಕೂಸಿನ ಮನೆ!