ಕನ್ನಡಪ್ರಭ ವಾರ್ತೆ ಕೋಲಾರಮಾಲೂರು ತಾಲೂಕಿನ ಕದಿರೇನಹಳ್ಳಿ ಬೆಟ್ಟದಲ್ಲಿ ಬಂಡೆ ಕಲ್ಲು ಒಡೆಯುವ ಸಿಡಿಮದ್ದು ಸ್ಫೋಟದಿಂದ ಗಂಭೀರವಾಗಿ ಗಾಯಾಗೊಂಡು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಕಾರ್ಮಿಕರ ಆರೋಗ್ಯವನ್ನು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ವಿಚಾರಿಸಿದರು.ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಮಾತನಾಡಿ, ಮಾಲೂರು ತಾಲೂಕಿನ ಕದಿರೇನಹಳ್ಳಿ ಬೆಟ್ಟದಲ್ಲಿ ಕಾನೂನು ಬಾಹಿರವಾದ ಕಲ್ಲು ಬಂಡೆಯಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದರು.ಗಣಿ ಇಲಾಖೆ ಅಧಿಕಾರಿಗಳು ಮಾಲೂರು ತಾಲೂಕಿನ ಕದಿರೇನಹಳ್ಳಿ ಬೆಟ್ಟದಲ್ಲಿ ಬಂಡೆ ಕಲ್ಲು ಒಡೆಯುವ ಸಿಡಿಮದ್ದು ಸ್ಫೋಟದಿಂದ ಗಾಯಾಗೊಂಡಿರುವ ಕಾರ್ಮಿಕರ ಘಟನೆಯ ವರದಿ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ನೀಡುವ ಕೆಲಸವಾಗಬೇಕು ಎಂದು ಸೂಚಿಸಿದರು.ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಾಲೂಕಿನ ಕಲ್ಲು ಬಂಡೆ ಒಡೆಯುವ ಸಿಡಿಮದ್ದು ಸ್ಫೋಟದಿಂದ ಕಾರ್ಮಿಕರು ಗಾಯಗೊಂಡಿದ್ದು ಈ ಸಂಬಂಧ ಯಾರೇ ತಪ್ಪಿತಸ್ಥರು ಆದರೂ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದರು.