ಮಂಗಳೂರು: ಶಕ್ತಿನಗರದಲ್ಲಿರುವ ಅರಿವು ವಿಶೇಷ ಮಕ್ಕಳ ತರಬೇತಿ ಕೇಂದ್ರ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಂಗಳೂರು ಹಾಗೂ ಲಯನ್ಸ್ ನೇತ್ರಾವತಿ ಸಹಯೋಗದಲ್ಲಿ ವಿಶೇಷ ಮಕ್ಕಳ ಹೆತ್ತವರಿಗೆ ಹಾಗೂ ಶಿಕ್ಷಕರಿಗೆ ಜೀವ ರಕ್ಷಣಾ ತರಬೇತಿ ನಡೆಯಿತು.ಮಂಗಳೂರಿನ ಐಎಂಎ ಭವನದಲ್ಲಿ ನಡೆದ ಕಾರ್ಯಗಾರವನ್ನು ಐಎಂಎ ಅಧ್ಯಕ್ಷ ಡಾ. ಜೆಸ್ಸಿ ಮರಿಯಾ ಡಿಸೋಜಾ ಉದ್ಘಾಟಿಸಿ ಮಾತನಾಡಿ, ಈ ತರಬೇತಿ ವಿಶೇಷ ಮಕ್ಕಳ ಪೋಷಕರಲ್ಲಿ ಅರಿವು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು. ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಅರವಿಂದ ಕುಡ್ಪಿ ಮಾತನಾಡಿ, ಜೀವ ರಕ್ಷಣಾ ತರಬೇತಿ ಆಪತ್ಕಾಲದಲ್ಲಿ ಜೀವವನ್ನು ಉಳಿಸಲು ಸಹಾಯ ಆಗುತ್ತದೆ ಎಂದರು. ಅರಿವು ವಿಶೇಷ ಮಕ್ಕಳ ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಭಟ್ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಅರಿವು ಟ್ರಸ್ಟ್ ಅಧ್ಯಕ್ಷ ಡಾ. ಸುಂದರ ಭಟ್ ಮಾತನಾಡಿ, ವಿಶೇಷ ಮಕ್ಕಳ ಹೆತ್ತವರಿಗೆ ಮಾರ್ಗದರ್ಶನ ನೀಡಿ ಮುಖ್ಯವಾಹಿನಿಗೆ ತರುವುದು ಅರಿವು ಸಂಸ್ಥೆಯ ಉದ್ದೇಶ ಎಂದರು. ಲಯನ್ಸ್ ಕ್ಯಾಬಿನೆಟ್ ಖಚಾoಚಿ ಬಾಲಕೃಷ್ಣ ಹೆಗ್ಡೆ, ಗಾಯತ್ರಿ ಅರವಿಂದ ರಾವ್, ಲಯನ್ಸ್ ನೇತ್ರವತಿ ಕ್ಲಬ್ ಅಧ್ಯಕ್ಷೆ ವಿನಯ ರಾವ್, ಡಿಸ್ಟ್ರಿಕ್ಟ್ ಅಪ್ಲಿಫ್ಟ್ ಆಫೀಸರ್ ಚಂದ್ರಕಲಾ ರಾವ್ ಅನುಭವ ಹಂಚಿಕೊಂಡರು.